ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಎನ್​.ವಿ.ರಮಣ ಪ್ರಮಾಣವಚನ ಸ್ವೀಕಾರ

0

ಸುಪ್ರೀಂಕೋರ್ಟ್​​​​ನ 48ನೇ ಮುಖ್ಯನ್ಯಾಯಮೂರ್ತಿಯಾಗಿ (CJI) ಎನ್​.ವಿ.ರಮಣ ಇಂದು ಪ್ರಮಾಣವಚನ ಸ್ವೀಕರಿಸಿದರು. ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ನೂತನ ಸಿಜೆಐಗೆ ಪ್ರಮಾಣವಚನ ಬೋಧಿಸಿದರು. ಎನ್​. ವಿ.ರಮಣ ಸಿಜೆಐ ಆಗಿ 2022ರ ಆಗಸ್ಟ್ 26ರವರೆಗೆ ಮುಂದುವರಿಯಲಿದ್ದಾರೆ. ಈ ಹಿಂದಿನ ಸಿಜೆಐ ಎಸ್​ಎ.ಬೊಬ್ಡೆ ನಿನ್ನೆ ನಿವೃತ್ತರಾಗಿದ್ದು, ತನ್ನ ನಂತರದ ಸಿಜೆಐ ಆಗಿ ರಮಣ ಅವರನ್ನು ಶಿಫಾರಸ್ಸು ಮಾಡಿದ್ದರು. ಎನ್​​.ವಿ.ರಮಣ 1957ರ ಆಗಸ್ಟ್​ 27ರಂದು ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಪೊನ್ನಾವರಂನಲ್ಲಿ ಜನಿಸಿದ್ದಾರೆ. ಇವರದ್ದು ಮೂಲತಃ ಕೃಷಿ ಕುಟುಂಬ. 1983ರಿಂದ ವಕೀಲಿ ವೃತ್ತಿ ಶುರು ಮಾಡಿದರು. 2014ರ ಫೆಬ್ರವರಿ 17ರಂದು ಸುಪ್ರಿಂಕೋರ್ಟ್​ ಹಿರಿಯ ನ್ಯಾಯಮೂರ್ತಿಯಾಗಿ ನೇಮಕವಾಗುವುದಕ್ಕೂ ಮೊದಲು ದೆಹಲಿ ಹೈಕೋರ್ಟ್​ನಲ್ಲಿ ಮುಖ್ಯ ನ್ಯಾಯಾಧೀಶರಾಗಿದ್ದರು. ಇನ್ನು 2019ರ ನವೆಂಬರ್​ನಲ್ಲಿ ಸಿಜೆಐ ಆಗಿ ಪ್ರಮಾಣವಚನ ಸ್ವೀಕರಸಿದ್ದ ಎಸ್​.ಎ.ಬೋಬ್ಡೆ ನಿನ್ನೆ ನಿವೃತ್ತರಾಗಿದ್ದು, ವಿದಾಯದ ಭಾಷಣ ಮಾಡಿದರು. ನಾನು ಮುಖ್ಯನ್ಯಾಯಮೂರ್ತಿಯಾದ ಮೇಲೆ ನನ್ನ ಕೈಲಾದಷ್ಟು ಉತ್ತಮ ಕೆಲಸ ಮಾಡಿದ್ದೇನೆ. ನನ್ನಲ್ಲಿ ಸಮ್ಮಿಶ್ರ ಭಾವ ಇದೆ. ಈ ಹೊತ್ತಲ್ಲಿ ಖುಷಿಯಿಂದಲೇ ನ್ಯಾಯಾಲಯ ಬಿಟ್ಟು ಹೋಗುತ್ತಿದ್ದೇನೆ ಎಂದೂ ಹೇಳಿದ್ದರು

Spread the love
Leave A Reply

Your email address will not be published.

Flash News