ಅಪ್ಪಾಜಿ ಜನ್ಮದಿನಕ್ಕೆ ಅಪ್ಪು ಹಾಡಿನ ಕೊಡುಗೆ..

0

ಬೆಂಗಳೂರು: ಅಭಿಮಾನಿಗಳ ಪ್ರೀತಿಯ ಅಣ್ಣಾವ್ರು, ಮಕ್ಕಳ ಪ್ರೀತಿಯ ಅಪ್ಪಾಜಿಯಾಗಿರುವ ವರನಟ ಡಾ. ರಾಜ್‌ಕುಮಾರ್‌ ಅವರ 92ನೇ ಜನ್ಮದಿನಕ್ಕೆ ಎಲ್ಲರಿಂದ ಶುಭಾಶಯಗಳು ಹರಿದುಬರುತ್ತಿವೆ. ನಟ ಪುನೀತ್‌ ರಾಜ್‌ಕುಮಾರ್‌ ತಮ್ಮ ತಂದೆಗೆ ಹಾಡಿನ ಮೂಲಕ ವಿಶೇಷ ರೀತಿಯಲ್ಲಿ ಶುಭಾಶಯ ತಿಳಿಸಿದ್ದಾರೆ.
1976ರಲ್ಲಿ ತೆರಕಂಡ ‘ಬಡವರು ಬಂಧು’ ಸಿನಿಮಾದ ‘ನಿನ್ನ ಕಂಗಳ ಬಿಸಿಯ ಹನಿಗಳು ನೂರು ಕಥೆಯ ಹೇಳಿವೆ.. ತಂದೆಯಾಗಿ ತಾಯಿಯಾಗಿ ಮಮತೆಯಿಂದ ಬೆಳೆಸಿದೆ. ಬಿಸಿಲು-ಮಳೆಗೆ ನರಳದಂತೆ ನಿನ್ನ ನೆರಳಲಿ ಸಲಹಿದೆ. ಆ ಪ್ರೀತಿಯ ಮನ ಮರೆಯುದೇ..’ ಹಾಡನ್ನು ಪುನೀತ್‌ ಮತ್ತೊಮ್ಮೆ ಹಾಡಿ ತಂದೆಗೆ ಪುಟ್ಟ ಕಾಣಿಕೆಯಾಗಿ ಅರ್ಪಿಸಿದ್ದಾರೆ. ಇದನ್ನು ಪಿಆರ್‌ಕೆ ಆಡಿಯೊ ಹೊರತಂದಿದೆ.  ವಿಡಿಯೊವನ್ನು ಪುನೀತ್​ ರಾಜ್​ಕುಮಾರ್​ ತಮ್ಮ ಟ್ವಿಟರ್‌ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೊ ವೈರಲ್‌ ಆಗಿದೆ.

Spread the love
Leave A Reply

Your email address will not be published.

Flash News