ಮಾನ್ಯ ಮುಖ್ಯ ಕಾರ್ಯದರ್ಶಿ ರವರಿಂದ ಪೂರ್ವ ವಲಯದ ವಾರ್ಡ್ ರೂಂ ಪರಿಶೀಲನೆ ಮತ್ತು ಸಭೆ:

0

ಮಾನ್ಯ ಮುಖ್ಯ ಕಾರ್ಯದರ್ಶಿರವರು ಪರಿಶೀಲನೆ ನಡೆಸಿದ ನಂತರ ಹಿರಿಯ ಅಧಿಕಾರಿಗಳೂಂದಿಗೆ ಸಭೆ ನಡೆಸಿ ಈಗಿರುವ ಆಸ್ಪತ್ರೆಗಳಲ್ಲಿರುವ ಹಾಸಿಗೆ ಸೌಲಭ್ಯ ಹೆಚ್ಚಿಸಲು ಕೂಡಲೇ ಅಗತ್ಯ ಕ್ರಮ ವಹಿಸಲು ಹಾಗೂ ವೆಂಟಿಲೆಟರ್ ಸೌಲಭ್ಯ ವುಳ್ಳ ಹಾಸಿಗೆಗಳನ್ನು ಹೆಚ್ಚಿಸಲು ಕ್ರಮ ಹಾಗೂ ಅಗತ್ಯ ಸೌಲಭ್ಯ ವಿರುವ ಕಡೆ ಹೆಚ್ಚಿನ ಪ್ರಮಾಣದಲ್ಲಿ ಹಾಸಿಗೆ ವ್ಯವಸ್ಥೆಗೊಳಿಸಲು ಸೂಚಿಸಿದರು, ಅಲ್ಲದೆ, ಸಿ.ಎಸ್.ಐ ಸಂಸ್ಥೆ ರವರು ಕಂಟನ್ಮೆಂಟ್ ಪ್ರದೇಶದಲ್ಲಿ ಸ್ಥಳ ಒದಗಿಸಲು ಮುಂದೆ ಬಂದಿದ್ದು, ಸದರಿ ಸ್ಥಳದಲ್ಲಿ  ಹಾಸಿಗೆ ಇನ್ನಿತರೆ ವ್ಯವಸ್ಥೆ ಗೊಳಿಸಲು ಸೂಚಿಸಿದರು. ಬಿಬಿಎಂಪಿ ವತಿಯಿಂದ ನಿರ್ಮಿಸಿರುವ ಎಲ್ಲಾ ಕೊವೀಡ್ ಆರೈಕೆ ಕೇಂದ್ರಗಳಲ್ಲಿ ಕನಿಷ್ಠ 10% ಅಕ್ಸಿಜನ್ ವ್ಯವಸ್ಥೆಯುಳ್ಳ ಹಾಸಿಗೆ ವ್ಯವಸ್ಥೆಗೆ ಸೂಚನೆ ನೀಡಿದರು.

ತದನಂತರ, ದೊಮ್ಮಲೂರು ನಗರ ಆರೋಗ್ಯ ಕೇಂದ್ರ ಕ್ಕೆ ಭೇಟಿ ನೀಡಿ ಟೆಸ್ಟಿಂಗ್ ಬಗ್ಗೆ ವಿಚಾರಿಸಿದರು, ಸದರಿ ಕೇಂದ್ರ ದಲ್ಲಿ ಟೆಸ್ಟಿಂಗ್ ಫಲಿತಾಂಶ ತಿಳಿಯಲು ಆರೋಗ್ಯ ಕೇಂದ್ರ ಕ್ಕೆ ಭೇಟಿ ನೀಡುವವರಿಗೆ ಸರಿಯಾದ ಮಾಹಿತಿ ಒದಗಿಸಲು ಸೂಚಿಸಿದರು.

ಮುಖ್ಯ ಕಾರ್ಯದರ್ಶಿಗಳ ಭೇಟಿ ನೀಡಿದ ಬಳಿಕ ಮಾನ್ಯ ಮುಖ್ಯ ಆಯುಕ್ತರು ಸುದ್ದಿಗಾರೊಂದಿಗೆ ಮಾತನಾಡಿ, ನಗರದ ಕೇಂದ್ರ ಭಾಗದಲ್ಲಿರುವ 3 ವಲಯಗಳಲ್ಲಿ 23 ರಿಂದ 25 ಲಕ್ಷ ಜನಸಂಖ್ಯೆ ವಾಸಿಸುತ್ತಿದ್ದು, ಹೊರ ವಲಯಗಳಲ್ಲಿ 10 ಲಕ್ಷ ಜನಸಂಖ್ಯೆ ವಾಸಿಸುತ್ತಿದ್ದಾರೆ. ಈ ಸಂಬಂಧ ಪಾಲಿಕೆಯ ಆಯಾ ವಲಯ ಮಟ್ಟದ  ವಾರ್ಡ್ನ ಲ್ಲಿ ಹಾಸ್ಪಿಟಲ್ ಬೆಡ್

ಮ್ಯಾನೇಜ್ಮೆಂಟ್ ಸಿಸ್ಟಮ್, ಯಾರಿಗೆ ಹಾಸಿಗೆ ಬೇಕು, ಯಾರಿಗೆ ಹಾಸಿಗೆ ಬೇಡ ಎಂಬ ವ್ಯವಸ್ಥೆ, ಹೋಮ್ ಐಸೋಲೇಟ್ ನಲ್ಲಿರುವವರ ಮೇಲೆ ನಿಗಾವಹಿಸುವ ವ್ಯವಸ್ಥೆ, ಐಸೋಲೇಟ್ ನಲ್ಲಿರುವವರಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿಕೊಳ್ಳುವುದು, ಆಂಬ್ಯುಲನ್ಸ್ ವ್ಯಸಸ್ಥೆ ಮಾಡುವ ಕೆಲಸ ಮಾಡಲಾಗುತ್ತಿದೆ.

ಅದರಂತೆ ಮುಖ್ಯ ಕಾರ್ಯದರ್ಶಿಗಳು ಆರೋಗ್ಯ ಮಿತ್ರ ಎಲ್ಲಾ ಆಸ್ಪತ್ರೆಗಳಲ್ಲಿ ಇರಬೇಕು, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ ಹಾಸಿಗೆಗಳ ಸಂಖ್ಯೆ ಹೆಚ್ಚಾಗಬೇಕು ಹಾಗೂ ಬೆಡ್ ಅಲಾಟ್ಮೆಂಟ್ ಸಿಸ್ಟಂ ಅನ್ನು ಉನ್ನತೀಕರಿಸಲು ತಿಳಿಸಿದ್ದಾರೆ. ಅದರಂತೆ ಸೂಕ್ತ ಕ್ರಮ ವಹಿಸಲಾಗುವುದು ಎಂದು ಮುಖ್ಯ ಆಯುಕ್ತರು ತಿಳಿಸಿದರು.

Spread the love
Leave A Reply

Your email address will not be published.

Flash News