ಕೋವಿಡ್ ಶವಕ್ಕೆ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಸಾಂಪ್ರದಾಯಿಕ ಅಗ್ನಿ ಸಂಸ್ಕಾರ ಭಾಗ್ಯ

0

ಕೊರೊನಾ ವೈರಸ್ ಈ ಕ್ರೂರ ವೈರಸ್ ಈವರೆಗೂ ಅದೆಷ್ಟು ಜನರನ್ನು ಬಲಿತೆಗೆದುಕೊಂಡಿದೆಯೋ, ಇನ್ನೆಷ್ಟು ಜನರನ್ನು ಬಲಿ ಪಡೆಯಲು ಹೊಂಚು ಹಾಕುತ್ತಿದೆಯೋ..? ಈ ಸೋಂಕಿನಿಂದ ಬಲಿಯಾದವರನ್ನು ತನ್ನವರು, ಸಂಬಂಧಿಕರು ಅಂತ ಯಾರೂ ಇಲ್ಲದೇ ಅಂತಿಮ ವಿಧಿವಿಧಾನವೂ ಇಲ್ಲದೇ ಅನಾಥ ಶವದಂತೆ ಸುಟ್ಟುಹಾಕುತ್ತಿದ್ದಾರೆ. ಕೆಲವರು ಸೋಂಕು ತಮಗೆ ಎಲ್ಲಿ ತಗುಲಿ ಬಡುತ್ತದೆಯೋ ಎಂಬ ಭಯದಿಂದ ತಮ್ಮ ಸ್ವಂತದವರು ಸತ್ತರೂ ದೂರ ಉಳಿದು ಬಿಟ್ಟಿರುವುದನ್ನೂ ನೋಡಿದ್ದೀರಿ. ಈ ಮಧ್ಯೆಕೋವಿಡ್ ಶವಕ್ಕೆ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಸಾಂಪ್ರದಾಯಿಕ ಅಗ್ನಿ ಸಂಸ್ಕಾರ ಭಾಗ್ಯ ಸಿಕ್ಕಿದೆ. ಹೌದು. ನಗರದ ಹೊರವಲಯದಲ್ಲಿ ನೂತನವಾಗಿ ಚಿತಾ ಕೇಂದ್ರವನ್ನು ಸಜ್ಜುಗೊಳಿಸಲಾಗಿದೆ. ಇಲ್ಲಿ ಸರಕಾರದಿಂದ ಒದಗಿಸಲಾದ ಕಟ್ಟಿಗೆ ಬಳಸಿ ಶವಗಳನ್ನು ಪ್ರತ್ಯೇಕವಾಗಿಟ್ಟು ಸಮೀಪದ ಬಂಧುಗಳಿಗೆ ಅಗ್ನಿ ಸ್ಪರ್ಶಕ್ಕೆ ಮಾತ್ರ ಅವಕಾಶ ಮಾಡಿಕೊಡಲಾಗಿತ್ತು ಸ್ಥಳದಲ್ಲಿ ಜಿಲ್ಲಾಧಿಕಾರಿ ಜೆ. ಮಂಜುನಾಥ್ ಹಾಜರಿದ್ದು, ಸೂಚನೆಯನ್ನು ಪಾಲಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದರು. ಕೋವಿಡ್ ಶವಗಳನ್ನು ಅನಾಥ ಶವದಂತೆ ಬೇಕಾಬಿಟ್ಟಿ ಸುಡುತ್ತಿರುವುದರ ಮಧ್ಯೆ ಈ ರೀತಿ ಸಾಂಪ್ರದಾಯಿಕ ಅಗ್ನಿ ಸಂಸ್ಕಾರ ಮಾಡುತ್ತಿರೊದರಿಂದ ತಮ್ಮವರನ್ನ ಕಳೆದುಕೊಂಡವರ ಕಣ್ಣೀರಿನಲ್ಲಿ ಒಂದೆರಡು ಹನಿಯಾದರೂ ಕಡಿಮೆಯಾಗಬಹುದು. ಒಟ್ಟಾರೆ ಕೊವಿಡ್ ಶವಗಳಿಗೆ ಇಂದು ಸಾಂಪ್ರದಾಯಿಕ ಅಗ್ನಿ ಸಂಸ್ಕಾರ ಭಾಗ್ಯ ದೊರೆಯಿತು. ಹಾಗೆಯೇ ಇಲ್ಲಿ ಕೋವಿಡ್ ಶವಗಳ ಸುಟ್ಟ ಚಿತಾ ಭಸ್ಮವನ್ನು ನಂಬರ್ ಹೆಸರು ಬರೆದ ಮಡಿಕೆಯಲ್ಲಿ ಸಂಗ್ರಹಿಸಿ ಸಂಬಂಧಿಗಳಿಗೆ ಒಂದು ದಿನದ ತರುವಾಯು ವಿತರಿಸಲಾಗುತ್ತದೆಯಂತೆ. ಈ ಕೊರೊನಾ ಸೊಂಕು ಇನ್ನೆಷ್ಟು ಜೀವಗಳನ್ನು ಬಲಿ ಪಡೆಯುತ್ತದೋ ಗೊತ್ತಿಲ್ಲ. ಆದರೆ ಆದಷ್ಟು ಬೇಗ ಮಾನವ ಸಂಕಲುದ ಹೆಗಲೇರಿರುವ ಕೊರೊನಾ ಮಹಾಮಾರಿ ಇಡೀ ಪ್ರಪಂಚದಿಂದ  ತೊಲಗಿದರೆ ಸಾಕು.

 

Spread the love
Leave A Reply

Your email address will not be published.

Flash News