ಕನ್ನಡ ಸುದ್ದಿ ಸಂಸ್ಥೆಯಲ್ಲಿ 12 ವರ್ಷ ಕಾಲ  ಕ್ಯಾಮರಾಮೆನ್ ಆಗಿ ಕಾರ್ಯ ನಿರ್ವಹಿಸಿದ್ದ  ಪ್ರದೀಪ್ ಸಿಂಧನಕೇರಾ ಕೊರೊನಾಗೆ ಬಲಿ..

0

ಕೋವಿಡ್ ಮಹಾಮಾರಿಗೆ ಹೆದರದೇ ಅನೇಕ ಡಾಕ್ಟರ್ಸ್ ಗಳು, ನರ್ಸ್ ಗಳು, ಪೊಲೀಸ್ ಅಧಿಕಾರಿಗಳು, ಪತ್ರಕರ್ತರು ಹೀಗೆ ಅದಷ್ಟೋ ಜನ ಕೊರೊನಾ ವಾರಿಯರ್ಸ್ ಗಳಾಗಿ ತಮ್ಮ ಪ್ರಾಣವನ್ನೂ ಲೆಕ್ಕಿಸದೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನೆಷ್ಟೊ ಜನ ಪ್ರಾಣವನ್ನೂ ಬಿಟ್ಟಿದ್ದಾರೆ. ಇದೀಗ ದೆಹಲಿಯಲ್ಲಿ tv9 ಕನ್ನಡ ಸುದ್ದಿ ಸಂಸ್ಥೆಯಲ್ಲಿ 12 ವರ್ಷ ಕಾಲ  ಕ್ಯಾಮರಾಮೆನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ  ಪ್ರದೀಪ್ ಸಿಂಧನಕೇರಾ ಅವರು ಕೊರೊನಾದಿಂದ ಆಮ್ಲಜನಕದ ಪ್ರಮಾಣ ಕುಸಿತವಾಗಿ ಸಾವಿಗೀಡಾಗಿದ್ದಾರೆ.

ಸದಾ ಹಸನ್ಮುಖಿ, ಮಿತಭಾಷಿ, ಮೃದು ಸ್ವಭಾವ ಮತ್ತು ಮಾನವೀಯ ಗುಣದಪ್ರದೀಪ್ ಕೆಲಸದ ವಿಷಯದಲ್ಲಿ ಮಾತ್ರ ದೈತ್ಯ ಪ್ರತಿಭೆಯಾಗಿದ್ದರು. ಕೋವಿಡ್ ಸಂದರ್ಭದಲ್ಲಿ ಸುರಕ್ಷಿತವಾಗಿರಬೇಕು, ಮತ್ತು ಕುಟುಂಬದ ಜೊತೆ ಹೆಚ್ಚು ಸಮಯ ಕಳೆಯಬೇಕು ಎಂಬ ಕಾರಣಕ್ಕೆ ಇತ್ತೀಚೆಗೆ ತಮ್ಮ ಕೆಲಸಕ್ಕೂ ಗುಡ್ ಬಾಯ್ ಹೇಳಿ ಬಿಟ್ಟಿದ್ದರು. ಆದರೆ ಕೊರೊನಾ ಮಹಾಮಾರಿ ಮಾತ್ರ ಅವರನ್ನ ಬಿಡಲಿಲ್ಲ.

ಪ್ರದೀಪ್  ಬೀದರ್ ಜಿಲ್ಲೆಯ ಹುಮಾನಾಬಾದ್ ತಾಲ್ಲೂಕಿನ ಹುಡುಗಿ ಗ್ರಾಮದವರು.  ಅವರನ್ನು ಬೀದರ್ ನಿಂದ ಚಿಕಿತ್ಸೆಗಾಗಿ ಹೈದರಾಬಾದ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ನಿನ್ನೆ ರಾತ್ರಿ ಬಂಜಾರ ಹಿಲ್ಸ್ ವ್ಯಾಪ್ತಿಯಲ್ಲಿರುವ ತನವೀರ್ ಆಸ್ಪತ್ರೆಗೆ ಕ್ಯಾಮರಾಮೆನ್ ಪ್ರದೀಪ್ ಸಿಂಧನಕೇರಾ ಅವರನ್ನು ದಾಖಲು ಮಾಡಲಾಗಿತ್ತು. ವೆಂಟಿಲೇಟರ್, ರೆಮಿಡೆಸಿವರ್ ಇಂಜೆಕ್ಷನ್ ನೀಡಿ ವೈದ್ಯರಿಂದ ಚಿಕಿತ್ಸೆ ಮುಂದವರಿದಿತ್ತು. ಪ್ರದೀಪ್​ ಅವರ ದೇಹದಲ್ಲಿ ಆಕ್ಸಿಜನ್ ಪ್ರಮಾಣ ಏರಿಕೆಯಾಗದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಈ ಅಕಾಲಿಕ, ಆಘಾತಕಾರಿ ಸುದ್ದಿಯನ್ನು ಸಹಿಸುವ ಶಕ್ತಿಯನ್ನು ದೇವರು ಅವರ ಕುಟುಂಬಕ್ಕೆ ನೀಡಲಿ. ಓಂ ಶಾಂತಿ..

 

Spread the love
Leave A Reply

Your email address will not be published.

Flash News