ರೆಮಿಡಿಸಿವರ್ ಔಷಧಿಯನ್ನು ಕಾಳಸಂತೆಯಲ್ಲಿ ಮಾರಟ ಮಾಡ್ತಿದ್ದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ: ಡಾಕ್ಟರ್, ಹಾಗೂ ಸಿಬ್ಬಂದಿ ಅರೆಸ್ಟ್..

0

ದೇಶದಲ್ಲಿ ಕೋವಿಡ್ -19 ಸಾಂಕ್ರಾಮಿಕ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಜನರು ವೈದ್ಯಕೀಯ ಸೌಲಭ್ಯಗಳಿಗಾಗಿ ಪರದಾಡುತ್ತಿದ್ದಾರೆ. ಆಸ್ಪತ್ರೆಗಳಲ್ಲಿ ಬೆಡ್, ಆಮ್ಲಜನಕ, ವೆಂಟಿಲೇಟರ್ ಔಷಧ, ಮೊದಲಾದವು ಇಲ್ಲದೇ ತತ್ತರಿಸಿ ಹೋಗುತ್ತಿದ್ದಾರೆ. ಇವೆಲ್ಲದರ ನಡುವೆ ಔಷಧ ಮಾಫಿಯಗಳು ತಲೆ ಎತ್ತಿ ಜನತೆಯ ರಕ್ತ ಹೀರುತ್ತಿವೆ. ಕರ್ನಾಟಕ ಸೇರಿದಂತೆ ದೇಶದಾದ್ಯಂತ ಜನರು ರೆಮೆಡಿಸಿವರ್ ಔಷಧದ ಬೆನ್ನು ಬಿದ್ದಿದ್ದಾರೆ. ಆದರೆ ಇಲ್ಲಿ ನೋಡಿದ್ರೆ ರೆಮಿಡಿಸಿವರ್ ಕಾಳಸಂತೆಯ ರೀತಿ ಮಾರಾಟವಾಗುತ್ತಿದೆ.

ಆನೇಕಲ್ ತಾಲೂಕಿನ ಜಿಗಣಿಯ ಸುಹಾಸ್ ಆಸ್ಪತ್ರೆಯ ಡಾ. ಅರ್ಮಾನ್ ಹಾಗೂ ಸಿಬ್ಬಂದಿ ರಕ್ಷಿತ್ ಆಸ್ಪತ್ರೆಗೆ ದಾಖಲಾಗುವ ರೋಗಿಗಳ ಹೆಸರಿನಲ್ಲಿ ರಿಯಾಯಿತಿ ದರದಲ್ಲಿ ಇಂಜೆಕ್ಷನ್ ಪಡೆದು ಕಾಳಸಂತೆಯಲ್ಲಿ ಮಾರುತ್ತಿದ್ದರು . ಇದೀಗ ಪೊಲೀಸರು ಈ ಇಬ್ಬರು ಸಿಬ್ಬಂದಿಯನ್ನು ಬಂಧಿಸಿದ್ದಾರೆ.

ಆಸ್ಪತ್ರೆಗೆ ಕರೆ ಮಾಡಿ ರೆಮಿಡಿಸಿವರ್ ಇಂಜೆಕ್ಷನ್ ಕೇಳಿದ್ರೆ ಆಸ್ಪತ್ರೆಯವರು 15,000 ಸಾವಿರ ಬೇಡಿಕೆ ಇಟ್ಟಿದ್ದರಂತೆ. ಸುಹಾಸ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಮಾಲೀಕ ಜಗದೀಶ್ ಹಿರೇಮಠ್ ಕೃತಕ ಅಭಾವ ಸೃಷ್ಟಿ ಮಾಡಿ ಒಂದು ಡೋಸ್ಗೆ 15 ಸಾವಿರದಂತೆ ಮಾರಾಟ ಮಾಡುತ್ತಿದ್ದರು. ಈ ಮಾಹಿತಿಯನ್ನಾಧರಿಸಿ ಜಿಗಣಿ ಪೊಲೀಸ್ ಠಾಣೆಯ ಕ್ರೈಂ ತಂಡ ಸುಹಾಸ್ ಆಸ್ಪತ್ರೆಗೆ ಮಫ್ತಿಯಲ್ಲಿ ಭೇಟಿ ನೀಡಿದ್ದರು. ಬಡ ಕುಟುಂಬದ ವ್ಯಕ್ತಿಯೋರ್ವರಿಗೆ ಔಷಧಿ ಬೇಕಿರುತ್ತದೆ ಅವರು ಎರಡು ಇಂಜೆಕ್ಷನ್ ಬೇಕೆಂದು ಕೇಳಿದಾಗ 30,000 ನೀಡುವಂತೆ ಆಸ್ಪತ್ರೆಯ ಸಿಬ್ಬಂದಿ ಹೇಳಿದ್ದರು ಈ ವೇಳೆ ಹಣವನ್ನು ಪಡೆಯುತ್ತಿದ್ದಾಗ ಆಸ್ಪತ್ರೆಯ ಡಾಕ್ಟರ್ ಹಾಗೂ ರಿಸಪ್ಶನಿಸ್ಟ್ ಪೊಲೀಸರ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ. ಜಿಗಣಿ ಪೊಲೀಸರು ಪೊಲೀಸರು ಆ ಎರಡು ರೆಮಿಡಿಸಿವರ್ ಔಷಧವನ್ನು ವಶಕ್ಕೆ ಪಡೆದು, ಆರೋಪಿ ಅರ್ಮಾನ್ ಹಾಗೂ ರಕ್ಷಿತ್ ರನ್ನು ಬಂಧಿಸಿದ್ದಾರೆ.

ಕಳೆದ ಬಾರಿ ಕೋವಿಡ್ ಸಮಯದಲ್ಲೂ ಸಹ ಸುಹಾಸ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಮೇಲೆ ಸಾಕಷ್ಟು ದೂರು ಕೇಳಿ ಬಂದಿತ್ತು. ಈ ಆಸ್ಪತ್ರೆಯ ನಿರ್ಲಕ್ಷ್ಯಕ್ಕೆ ಸಾಕಷ್ಟು ರೋಗಿಗಳು ಪ್ರಾಣ ಬಿಟ್ಟಿದ್ದಾರೆ. ಅದೂ ಸಾಲಲ್ಲ ಅಂತ ಈ ಸುಹಾಸ್ ಆಸ್ಪತ್ರೆ ಸರ್ಕಾರದ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ, ಕಾಳಸಂತೆಯಲ್ಲಿ ರೆಮಿಡಿಸಿವರ್ ಇಂಜೆಕ್ಷನ್ ಮಾರಾಟ ಮಾಡಿ ಇದೀಗ ಸಿಕ್ಕಿ ಬಿದ್ದಿದೆ. ಜನರ ಜೀವದ ಜೊತೆ ಆಟ ಆಡೋ ಇಂತಹವರಿಗೆ ತಕ್ಕ ಶಿಕ್ಷೆ ಆಗಲೇ ಬೇಕು.

Spread the love
Leave A Reply

Your email address will not be published.

Flash News