ಕೊರೊನಾಗೆ ಮತ್ತೊಬ್ಬ ಎಎಸ್ಐ ಬಲಿ.. ಹಲವು ಆಸ್ಪತ್ರೆ ತಿರುಗಿದ್ರೂ ಪೊಲೀಸರಿಗೆ ಸಿಗುತ್ತಿಲ್ಲ ಬೆಡ್ ಹಾಗೂ ಆಕ್ಸಿಜನ್

0

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದೆ. ಅದ್ರಲ್ಲೂ ಕೊರೊನಾ ವಾರಿಯರ್ಸ್ ಆಗಿರೋ ಪೊಲೀಸರು ಬಲಿಯಾಗುತ್ತಲೇ ಇದ್ದಾರೆ. ನಿನ್ನೆ ಕೂಡ ಬ್ಯಾಟರಾಯನಪುರದ ಎಎಸ್ಐ ಮುನಿಯಪ್ಪ ಕೊರೊನಾ ಸೋಂಕಿಗೆ ತುತ್ತಾಗಿ ಒಂದೇ ದಿನದಲ್ಲಿ ಸಾವನ್ನಪ್ಪಿದ್ದಾರೆ.

ಹಲವು ವರ್ಷಗಳಿಂದ ಬ್ಯಾಟರಾಯನಪುರ ಠಾಣೆಯಲ್ಲಿ ಎಎಸ್ಐಯಾಗಿ ಮುನಿಯಪ್ಪ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಿನ್ನೆ ಕೂಡ ಕರ್ತವ್ಯಕ್ಕೆ ಹಾಜರಾಗಿದ್ದರು. ಈ ವೇಳೆ ಸ್ವಲ್ಪ ಜ್ವರ ಸುಸ್ತು ಕಾಣಿಸಿಕೊಂಡಿದೆ. ಕೂಡಲೇ ಸಹದ್ಯೋಗಿಗಳಿಗೆ ತಿಳಿಸಿ, ಪೊಲೀಸ್ ಠಾಣೆ ಬಳಿಯೇ ಆಂಬ್ಯುಲೆನ್ಸ್ ಕರೆಸಿಕೊಂಡಿದ್ದಾರೆ.

ಆಂಬ್ಯುಲೆನ್ಸ್ ನಲ್ಲಿ  ರಸ್ತೆ ಬಳಿಯ ಖಾಸಗಿ ಆಸ್ಪತ್ರೆಗೆ ತೆರಳಿದ್ದಾರೆ. ಆದರೆ ಅಲ್ಲಿ ಬೆಡ್ ಹಾಗೂ ಆಕ್ಸಿಜನ್ ಸಿಕ್ಕಿಲ್ಲ. ಬಳಿಕ ಕುಟುಂಬಸ್ಥರು ಲಗ್ಗೆರೆ ಬಳಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುತ್ತಿರುವಾಗಲೇ ತೀವ್ರ ಉಸಿರಾಟ ತೊಂದರೆಯಿಂದ ಮಾರ್ಗ ಮಧ್ಯೆ ನಿಧನರಾಗಿದ್ದಾರೆ ಎನ್ನಲಾಗಿದೆ.

ಎಎಸ್ಐ ಮುನಿಯಪ್ಪ ಮೂಲತಃ ನೆಲಮಂಗಲ ಬಳಿಯ ಮಧುರೈ ನಿವಾಸಿ. ಇವರಿಗೆ ಹೆಂಡ್ತಿ ಇಬ್ಬರು ಮಕ್ಕಳು ಸಹ ಇದ್ದಾರೆ. ದುರ್ದೈವ ಅಂದ್ರೆ ಎಎಸ್ಐ ಮುನಿಯಪ್ಪ ಪತ್ನಿಗೂ ಕೊರೊನಾ ಪಾಸಿಟಿವ್ ಬಂದಿದ್ದು,ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪತಿ ಸಾವನ್ನಪ್ಪಿರೋ ವಿಷಯ ಅವರಿಗೆ ತಿಳಿಸಿಲ್ಲ.. ಮೃತ ಎಎಸ್ಐ ಮುನಿಯಪ್ಪ ಅವರ ಅಂತ್ಯ ಸಂಸ್ಕಾರ ಇಂದು ಸುಮ್ಮನಹಳ್ಳಿಯ ಚಿತಾಗಾರದಲ್ಲಿ ನಡೆಯಲಿದೆ ಎಂದು ತಿಳಿದು ಬಂದಿದೆ. ಇತ್ತಿಚ್ಚಿನ ದಿನಗಳಲ್ಲಿ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಕೊರೊನಾ ಟೆಸ್ಟ್ ಮಾಡಲಾಗುತ್ತಿದೆ. 100 ಮಂದಿಯಲ್ಲಿ 50 ಮಂದಿ ಪಾಸಿಟಿವ್ ಗೆ ಒಳಗಾಗುತ್ತಿದ್ದಾರೆ. ಒಂದು ಕಡೆ ಅನಾರೋಗ್ಯ,ಮತ್ತೊಂದೆಡೆ ಕರ್ಪ್ಯೂ ವಿಧಿಸಿರುವುದರಿಂದ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಲು ಪೊಲೀಸ್ ಸಿಬ್ಬಂದಿಗೆ ಸಾಧ್ಯವಾಗುತ್ತಿಲ್ಲ ಎಂಬ ಮಾತುಗಳು ಕೇಳಿ ಬರ್ತಿವೆ..

ಘಟ್ಟಿಮುಟ್ಟಾಗಿದ್ದ ಎಎಸ್ಐ ಮುನಿಯಪ್ಪ ಕೊರೊನಾ ಸೋಂಕು ತಗಲಿದ ಒಂದೇ ದಿನದಲ್ಲಿ ಸಾವನ್ನಪ್ಪಿದ್ದು,ಬ್ಯಾಟರಾಯನಪುರ ಪೊಲೀಸ್ ಸಿಬ್ಬಂದಿಗೆ ಆಘಾತ ಉಂಟು ಮಾಡಿದೆ. ಕೊರೊನಾ ಎರಡನೇ ಅಲೆ ಅತೀ ವೇಗವಾಗಿ ಹರಡುತ್ತಿದೆ ಎಂಬ ಅಂಶ ಇದರಿಂದಲೇ ಗೊತ್ತಾಗಿದೆ..ಎಲ್ಲರೂ ಮಾಸ್ಕ್ ಹಾಕಿ,ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಹಾಗಾಗೇ ಸ್ಯಾನಿಟೈಸ್ ಬಳಸಿ. ನೀವೂ ಸುರಕ್ಷತೆಯಿಂದಿರಿ ನಿಮ್ಮಿಂದ ಬೇರೊಬ್ಬರಿಗೂ ಸೋಂಕು ತಗುಲದಂತೆ ಜಾಗರೂಕರಾಗಿರಿ.

Spread the love
Leave A Reply

Your email address will not be published.

Flash News