ಖಾಸಗಿ ಶಾಲೆಗಳ ಹಗಲು ದರೋಡೆ: ಪೋಷಕರ ಸುಲಿಗೆಗಿಳಿದ ಪ್ರೈವೇಟ್ ಸ್ಕೂಲ್ಸ್..

0

ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಅತ್ಯಂತ ಭೀಕರವಾಗಿ ಪರಿಣಾಮಿಸುತ್ತಿದೆ. ಎಷ್ಟೋ ಜನ ಕೊರೊನಾ ಸೊಂಕಿತರು ಆಸ್ಪತ್ರೆಗಳಲ್ಲಿ ಬೆಡ್ ಸಿಗದೇ, ಒಳ್ಳೆಯ ಚಿಕಿತ್ಸೆ ಸಿಗದೇ, ಊಟ, ಆಕ್ಸಿಜನ್ ಸಿಗದೇ ಒದ್ದಾಡುತ್ತಿದ್ದಾರೆ. ಇನ್ನದೆಷ್ಟೋ ಜನರ ಪ್ರಾಣವನ್ನೇ ಬಲಿ ಪಡೆದಿದೆ ಈ ಕೊರೊನಾ ಎಂಬ ಮಹಾಮಾರಿ. ಇನ್ನು ಕೆಲವರು ಕೆಲಸ ಕಳೆದುಕೊಂಡು ನಿರುದ್ಯೋಗಿಗಳಾಗಿದ್ದಾರೆ. ಹೀಗೆ ಸಾವು ನೋವುಗಳು ಸಂಭವಿಸುತ್ತಿರುವ ಸಂಧರ್ಭ ದಲ್ಲಿ ಖಾಸಗಿ ಶಿಕ್ಷಣ ಇಲಾಖೆಗಳು ಖ್ಯಾತೆ ಶುರುಮಾಡಿಕೊಂಡಿವೆ. ಖಾಸಗಿ ಶಾಲೆಗಳಲ್ಲಿ ಮುಂದಿನ ಶೈಕ್ಷಣಿಕ ವರ್ಷಕ್ಕೆ ಪ್ರವೇಶಾತಿಆರಂಭವಾಗಿದ್ದು, ಅನೇಕ ಖಾಸಗಿ ಶಾಲೆಗಳು ಶುಲ್ಕವನ್ನು ಏಕಾಏಕಿ ಶೇಕಡಾ 20 ರಷ್ಟು ಹೆಚ್ಚಿಸಿದೆ. ಕೊರೊನಾ ಎರಡನೇ ಅಲೆಯ ನಡುವೆಯೂ ಈ ಖಾಸಗಿ ಶಾಲೆಗಳ ಧನದಾಹಿ ನಡುವಳಿಕೆ ಎಷ್ಟು ಸರಿ..? ಕಳೆದ ಬಾರಿ ಅಲ್ಪ ಸ್ವಲ್ಪ ಫೀಸನ್ನು ಇಳಿಕೆ ಮಾಡಿದ್ದ ಪ್ರೈವೇಟ್ ಸ್ಕೂಲ್‌ಗಳು ಇದೀಗ ಕೋವಿಡ್ ಎರಡನೇ ಅಲೆ ಆರ್ಭಟಿಸುತ್ತಿರುವಾಗ ಏಕಾಏಕಿ ಹಿಂದೆ ಇಳಿಕೆ ಮಾಡಿದ್ದಕ್ಕಿಂತ ದುಪ್ಪಟ್ಟು ಶುಲ್ಕ ಜಾಸ್ತಿ ಮಾಡಿ ಪೋಷಕರಿಗೆ ಸಂದೇಶ ರವಾನಿಸಿದ್ದಾರಂತೆ. ಶಿಕ್ಷಣದ ಹೆಸರಿನಲ್ಲಿ ಹಗಲು ದರೋಡೆ ಮಾಡುತ್ತಿವೆ ಈ ಖಾಸಗಿ ಶಾಲೆಗಳು. ಪೋಷಕರನ್ನ ಸುಲಿಗೆ ಮಾಡ್ತಿವೆ ಈ ಪ್ರೈವೇಟ್ ಸ್ಕೂಲ್‌ಗಳು. ವಿದ್ಯೆ ಯಾರಪ್ಪನ ಸ್ವತ್ತೂ ಅಲ್ಲ. ಸರಸ್ವತಿಯನ್ನ ಮಾರಾಟಕಿಟ್ಟಿದ್ದೀರಾ..? ಛೀ.. ನಾಚಿಕೆಯಾಗ್ಬೇಕು..

ಅಲ್ಲದೇ ಖಾಸಗಿ ಶಿಕ್ಷಣ ಕ್ಷೇತ್ರದ ಈ ನಿರ್ಧಾರ ಸರ್ಕಾರದ ಗಮನಕ್ಕೇ ಬರಲಿಲ್ವಾ..? ಬಂದಿದ್ರೂ ಸುಮ್ಮನಿದ್ದಾರಾ..? ಅನ್ನೋದೇ ಒಂದು ಯಕ್ಷಪ್ರಶ್ನೆ..! ಅಥವಾ ಸರ್ಕಾರವೇನಾದ್ರೂ ಈ ನಿರ್ಧಾರವನ್ನು ವರದಾನವಾಗಿ ಬಳಕೆ ಮಾಡಿಕೊಳ್ಳಲು ಖಾಸಗಿ ಶಿಕ್ಷಣ ಸಂಸ್ಥೆಯ ಮೊರೆ ಹೋಗಿದೆಯಾ..? ಕೊರೊನಾ ಎರಡನೇ ಅಲೆಯ ಸಂದರ್ಭದಲ್ಲಿ ಸರ್ಕಾರವು ತಮ್ಮ ಖಜಾನೆ ನಿರ್ವಹಣೆಗೆ ಈ ರೀತಿ ಶುಲ್ಕ ಹೆಚ್ಚಳಕ್ಕೆ ಬೆಂಬಲ ನೀಡುತ್ತಿದೆಯೇ..? ಈ ಮಧ್ಯೆ ಸರ್ಕಾರಕ್ಕೆ ಜನರ ಸಂಕಷ್ಟ ಮರೆತುಹೋಯಿತೇ..? ಈ ಸಮಯದಲ್ಲಿ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ರೆ ಶುಲ್ಕ ಹೆಚ್ಚಳಕ್ಕೆ ಅನುಗುಣವಾಗಿ ಮಕ್ಕಳಿಗೆ ಶಿಕ್ಷಣ ಸೇವೆಯೂ ಒದಗುತ್ತಿಲ್ಲ.ಏಕೆಂದ್ರೆ ಈಗ ನಡೀತಿರೋದು ಆನ್ ಲೈನ್ ಕ್ಲಾಸ್‌ಗಳು, ಈ ಆನ್ ಲೈನ್ ಶಿಕ್ಷಣದಿಂದ ಮಕ್ಕಳು ಅದೇನು ಕಲೀತಿದರೋ..? ಅವರ ಪಾಡು ಅವರಿಗೇ ಗೊತ್ತು. ಇದರ ನಡುವೆಯೂ ಖಾಸಗಿ ಶಾಲೆಗಳು ಈ ರೀತಿ ಶುಲ್ಕ ಹೆಚ್ಚಳ ಮಾಡಿರೋದು ಎಷ್ಟು ಸರಿ ಎಂದು ಸರ್ಕಾರ ಅವಲೋಕಿಸಬೇಕಾಗಿದೆ.

ಈ ಶುಲ್ಕ ಹೆಚ್ಚಳದ ನಿರ್ಧಾರ ತಮ್ಮ ಮಕ್ಕಳು ಪ್ರೈವೇಟ್ ಸ್ಕೂಲ್‌ಗಳಲ್ಲೇ ಓದಬೇಕು ಎಂದು ಖಾಸಗಿ ಶಿಕ್ಷಣದ ಮೊರೆ ಹೋಗಿರುವ ಪೋಷಕರಿಗೆ ಇದು ಶಾಪವಾಗಿ ಪರಿಣಮಿಸಿವುದರಲ್ಲಿ ಎರಡು ಮಾತಿಲ್ಲ. ಯಾಕಂದ್ರೆ ಕೊರೊನಾದ ಕಾರಣ ದೇಶದಲ್ಲಿ ಅದರಲ್ಲೂ ಅಸಂಘಟಿತ ಕ್ಷೇತ್ರದಲ್ಲಿ ನಿರುದ್ಯೋಗ ತಲೆದೋರಿದೆ. ಇದರ ಮಧ್ಯೆ ಈ ಖಾಸಗಿ ಶಾಲೆಗಳ ಈ ಹಗಲು ದರೋಡೆ ಪೋಷಕರುಗಳನ್ನು ಇನ್ನೆಷ್ಟು ಸಂಕಷ್ಟದಲ್ಲಿ ಸಿಲುಕಿಸಲಿದೆಯೋ..?

Spread the love
Leave A Reply

Your email address will not be published.

Flash News