ನಾಳೆಯಿಂದ ರಾಜ್ಯದಲ್ಲಿ ಕೊವಿಡ್ ಕರ್ಫ್ಯೂ: ಏನಿರುತ್ತೆ? ಏನಿರಲ್ಲ?

0

ಬೆಂಗಳೂರು: ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿನ 2ನೇ ಅಲೆ ನಿಯಂತ್ರಣ ಮೀರಿ ಹರಡುತ್ತಿದೆ. ಇದಕ್ಕೆ ಕಡಿವಾಣ ಹಾಕಲೆಂದು ರಾಜ್ಯದಲ್ಲಿ 14 ದಿನಗಳ ಬಿಗಿಕ್ರಮ ಜಾರಿಗೊಳಿಸಲಾಗಿದೆ. ಬಹುತೇಕ ಲಾಕ್​ಡೌನ್​ ನಿಯಮಗಳನ್ನೇ ಹೋಲುವ ಈ ಕ್ರಮವನ್ನು ಸರ್ಕಾರ ‘ಕೊವಿಡ್ಕರ್ಫ್ಯೂ’ ಎಂದು ಕರೆದಿದೆ. 2 ವಾರಗಳಲ್ಲಿ ಪರಿಸ್ಥಿತಿ ತಹಬದಿಗೆ ಬರದಿದ್ದರೆ ನಿರ್ಬಂಧ ಮುಂದುವರಿಸಲಾಗುವುದು ಎಂದು ಸರ್ಕಾರ ಹೇಳಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೋಮವಾರ ಘೋಷಿಸಿದ ಕೊವಿಡ್ ಕರ್ಫ್ಯೂ ಅವಧಿಯಲ್ಲಿ ಏನಿರುತ್ತೆ ಏನಿರುವುದಿಲ್ಲ ಎಂಬ ಮಾಹಿತಿ ಇಲ್ಲಿದೆ.

ಏನಿರುತ್ತೆ?
– ಅಂಗಡಿ ಮತ್ತು ದಿನಬಳಕೆ ವಸ್ತುಗಳ ಖರೀದಿಗೆ ಬೆಳಿಗ್ಗೆ 6ರಿಂದ 10 ಗಂಟೆಯವರೆಗೆ ಅವಕಾಶ
– ಗಾರ್ಮೆಂಟ್ಸ್​, ಉತ್ಪಾದನಾ ವಲಯ, ಕಟ್ಟಡ ನಿರ್ಮಾಣಕ್ಕೆ ಅವಕಾಶ
– ಆಸ್ಪತ್ರೆ, ಮೆಡಿಕಲ್ ಸ್ಟೋರ್​, ಲ್ಯಾಬ್​ಗಳು ಕಾರ್ಯನಿರ್ವಹಿಸುತ್ತವೆ
– ಗೂಡ್ಸ್​ ವಾಹನಗಳ ಸಂಚಾರ
– ಬಾರ್​, ವೈನ್​ಶಾಪ್​ಗಳಲ್ಲಿ ಪಾರ್ಸೆಲ್​ಗೆ ಮಾತ್ರ ಅವಕಾಶ

ಏನಿರಲ್ಲ
– 9 ಗಂಟೆಯ ನಂತರ ರಾಜ್ಯದಲ್ಲಿ ಕರ್ಫ್ಯೂ ಜಾರಿಗೆ ಬರುತ್ತದೆ.
– ಜನಸಂಚಾರ, ವಾಹನ ಸಂಚಾರಕ್ಕೆ ಕಡಿವಾಣ
– ಸಾರಿಗೆ ಬಸ್, ಮೆಟ್ರೊ ರೈಲು ಸಂಚಾರ ಇರುವುದಿಲ್ಲ
– ಬೆಳಿಗ್ಗೆ 10 ಗಂಟೆಯ ನಂತರ ಎಲ್ಲ ಅಂಗಡಿಗಳೂ ಬಾಗಿಲು ಹಾಕಬೇಕುಕೊರೊನಾ ತಡೆಗೆ ಕಟ್ಟುನಿಟ್ಟಿನ ಕ್ರಮ ಜರುಗಿಸುವುದು ಅನಿವಾರ್ಯವಾಗಿತ್ತು. ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು. ನಿಯಮಗಳನ್ನು ಜಾರಿಗೊಳಿಸುವ ವಿಚಾರದಲ್ಲಿ ತಹಶೀಲ್ದಾರ್‌ಗಳು ನೋಡೆಲ್ ಅಧಿಕಾರಿಗಳಾಗಿರುತ್ತಾರೆ. ರಾಜ್ಯದಲ್ಲಿ ಇನ್ನು ಮುಂದೆ ಆ್ಯಕ್ಸಿಜನ್ ಕೊರತೆ ಆಗುವುದಿಲ್ಲ. ರಾಜ್ಯದ ಆಕ್ಸಿಜನ್ ಹಂಚಿಕೆಯ ಪ್ರಮಾಣವನ್ನು 300ರಿಂದ 800 ಮೆಟ್ರಿಕ್ ಟನ್​ಗೆ ಕೇಂದ್ರ ಸರ್ಕಾರ ಹೆಚ್ಚಿಸಿದೆ. ರೆಮ್‌ಡಿಸಿವಿರ್ ಇಂಜೆಕ್ಷನ್ ಪೂರೈಕೆಯಲ್ಲಿ ವ್ಯತ್ಯಯವಿಲ್ಲ ಎಂದು ಯಡಿಯೂರಪ್ಪ ಭರವಸೆ ನೀಡಿದ್ದಾರೆ.

Spread the love
Leave A Reply

Your email address will not be published.

Flash News