14 ದಿನಗಳ ಕೊರೊನಾ ಕರ್ಫ್ಯೂ; ಬೆಂಗಳೂರಿಗೆ ವಿದಾಯ ಹೇಳಿ ತಮ್ಮ ಗೂಡು ಸೇರುತ್ತಿರುವ ಜನ

0

ಬೆಂಗಳೂರು: ಕೊವಿಡ್ ಸೋಂಕಿನ ಸರಪಳಿ ಕಳಚುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಠಿಣ ನಿರ್ಧಾರ ಕೈಗೊಂಡಿದೆ. ವೀಕೆಂಡ್ ಕರ್ಫ್ಯೂ ಮಾದರಿಯಲ್ಲೇ ಟಫ್ ರೂಲ್ಸ್ ಮುಂದುವರಿಸಲು ನಿರ್ಧರಿಸಿದೆ. ಹೀಗಾಗಿ ಬೆಂಗಳೂರಿನಲ್ಲಿದ್ದ ಬೇರೆ ಊರಿನ ಜನ ತಮ್ಮ ಸ್ವಂತ ಊರುಗಳಿಗೆ ತೆರಳಿದ್ದಾರೆ. ಹೀಗಾಗಿ ಮೆಜೆಸ್ಟಿಕ್ನಲ್ಲಿ ಭಾರಿ ಜನ ಸಂದಣಿ ಕಂಡುಬಂದಿದೆ.ರಾಜ್ಯದಲ್ಲಿ ಕಂಟ್ರೋಲ್ ತಪ್ಪಿರೋ ಕೊರೊನಾ ನಿಯಂತ್ರಣಕ್ಕೆ ಸರ್ಕಾರ ವೀಕೆಂಡ್ ಕರ್ಫ್ಯೂ ಜಾರಿಗೆ ತಂದಿತ್ತು. ಆಗಲೇ.. ಬೆಂಗಳೂರಿಗೆ ಕೆಲಸ ಅರಸಿ ಬಂದಿದ್ದ ಬಹುತೇಕರು ತಮ್ಮ ಸ್ವಂತ ಊರುಗಳಿಗೆ ತೆರಳಿದ್ರು. ಯುಗಾದಿ ಹಬ್ಬಕ್ಕೆ ಅಂತಾ ಊರಿಗೆ ಹೋದ ಹಲವರು ವಾಪಸ್ ಬಂದೇ ಇರಲಿಲ್ಲ. ಈಗ ಕೊರೊನಾ ಕಂಟ್ರೋಲ್ಗೆ ರಾಜ್ಯ ಸರ್ಕಾರ 14 ದಿನಗಳ ಟಫ್ ಕರ್ಫ್ಯೂ ಘೋಷಿಸಿದೆ. ಇದು ಜನರ ನಿದ್ದೆಗೆಡಿಸಿದ್ದು ಸಾಕಪ್ಪ ಬೆಂಗಳೂರಿನ ಸಹವಾಸ ಅಂತಾ ಸಾವಿರಾರು ಮಂದಿ ಬೆಂಗಳೂರು ಬಿಟ್ಟು ಊರು ಸೇರ್ತಿದ್ದಾರೆ. ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದ ಕಾರಣ ಕೆಎಸ್ಆರ್ಟಿಸಿ 500 ಹೆಚ್ಚುವರಿ ಬಸ್ಗಳನ್ನ ಬಿಟ್ಟಿದೆ.ಇಂದು(ಏಪ್ರಿಲ್ 27) ಸಂಜೆಯವರೆಗೂ ಜನರು ಊರುಗಳಿಗೆ ತೆರಳಲು ಮುಂದಾಗೋ ಸಾಧ್ಯತೆ ದಟ್ಟವಾಗಿದೆ. ಕೊರೊನಾ ಕರ್ಫ್ಯೂನಿಂದ ಊರುಗಳತ್ತ ತೆರಳುತ್ತಿರುವ ಪ್ರಯಾಣಿಕರಿಗಾಗಿ ಇಂದು ಸಾರಿಗೆ ನಿಗಮಗಳಿಂದ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿದೆ. ಇಂದು ಕರ್ಫ್ಯೂ ಬಿಗಿಗೊಳಿಸಿರುವುದರಿಂದ ಹೆಚ್ಚಿನ ಸಂಖ್ಯೆಯ ಜನರು ಸ್ವಂತ ಊರುಗಳಿಗೆ ತೆರಳಲು 3 ಸಾರಿಗೆ ನಿಗಮಗಳಿಂದ ಬೇಡಿಕೆಗೆ ಅನುಗುಣವಾಗಿ 12 ಸಾವಿರಕ್ಕೂ ಹೆಚ್ಚು ಬಸ್ಗಳ ವ್ಯವಸ್ಥೆ ಮಾಡಲಾಗಿದೆ ಅಂತಾ ಸಾರಿಗೆ ಸಚಿವ ಲಕ್ಷ್ಮಣ ಸವದಿ ಸ್ಪಷ್ಟಪಡಿಸಿದ್ದಾರೆ. ಇಂದು ರಾತ್ರಿ ಒಳಗೆ ತಮ್ಮ ಊರುಗಳಿಗೆ ತಲುಪಬೇಕಾದ ಪ್ರಯಾಣಿಕರು ಯಾವುದೇ ಆತಂಕವಿಲ್ಲದೇ, ಕೊವಿಡ್ ಮಾರ್ಗಸೂಚಿ ಪಾಲಿಸಿ ಸಂಚರಿಸುವಂತೆ ಮನವಿ ಮಾಡಲಾಗಿದೆ. ಬೇರೆ ಬೇರೆ ಜಿಲ್ಲೆಗಳಿಗೆ ತೆರಳಲು ಜನ ಮೆಜೆಸ್ಟಿಕ್ಗೆ ಬಂದಿದ್ದು ಜನ ಜಂಗುಳಿಯೇ ಕಂಡು ಬಂದಿದೆ. ಇನ್ನು ಬೆಂಗಳೂರಿನಲ್ಲಿದ್ದ ಜನ ಜಿಲ್ಲೆಗಳಿಗೆ ತೆರಳುತ್ತಿದ್ದು ಅಲ್ಲಿಯೂ ಕೊರೊನಾ ಹೆಚ್ಚಾಗುವ ಆತಂಕವಿದೆ.

Spread the love
Leave A Reply

Your email address will not be published.

Flash News