ಒಂದೇ ಆಂಬುಲೆನ್ಸ್ ನಲ್ಲಿ 22 ಹೆಣಗಳ ರಾಶಿ: ಬೆಚ್ಚಿ ಬೀಳಿಸುವಂತಿದೆ ಈ‌ ದೃಶ್ಯ..

0

ಕೊರೋನಾ ವೈರಸ್‌ ತಾಂಡವ ಹೆಚ್ಚುತ್ತಲೇ ಇದೆ. ಪ್ರತಿ ದಿನ ಈ ಮಹಾಮಾರಿಯಿಂದಾಗಿ ಪ್ರಾಣ ಬಿಡುತ್ತಿರುವವರ ಸಂಖ್ಯೆ ದಾಖಲೆ ಸೃಷ್ಟಿಸಿದೆ. ನಿಜ ಹೇಳೋದಾದ್ರೆ ಇಷ್ಟು ಕೆಟ್ಟ ದಿನಗಳನ್ನು ಮನುಷ್ಯ ಎಂದಿಗೂ ನೋಡಿರಲಿಕ್ಕಿಲ್ಲ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಆಂಬುಲೆನ್ಸ್‌ ಫೋಟೋ ಒಂದು ವೈರಲ್ ಆಗುತ್ತಿದ್ದು, ಇದರಲ್ಲಿ ಶವಗಳನ್ನು ಸಾಮಗ್ರಿಗಳ ಪ್ಯಾಕೇಟ್‌ನಂತೆ ತುಂಬುತ್ತಿರುವ  ಈ ದೃಶ್ಯ ನೊಡುಗರನ್ನು ಬೆಚ್ಚಿ ಬೀಳಿಸಿದೆ.

 ಮಹಾರಾಷ್ಟ್ರದಲ್ಲಿ ಲಾಕ್‌ಡೌನ್ ಹೇರಿದಾಗಿನಿಂದ ಕೊರೋನಾ ಸೋಂಕಿತರ ಸಂಖ್ಯೆ ಇಳಿಮುಖವಾಗಿದೆ. ಕಳೆದ ಇಪ್ಪತ್ನಾಲ್ಕು ಗಂಟೆಯಲ್ಲಿ ಇಲ್ಲಿ 48,700 ಹೊಸ ಪ್ರಕರಣಗಳು ದಾಖಲಾಗಿವೆ. ಇದು ಮಾರ್ಚ್ 1ರ ಬಳಿಕ ಇಲ್ಲಿ ದಾಖಲಾದ ಅತ್ಯಂತ ಕಡಿಮೆ ಸಂಖ್ಯೆಯಾಗಿದೆ. ಆದರೆ ಇಲ್ಲಿ ಒಟ್ಟು 534 ಮಂದಿ ಕೊರೋನಾದಿಂದಾಗಿ ಮೃತಪಟ್ಟಿದ್ದಾರೆ ಎಂಬುವುದು ಉಲ್ಲೇಖನೀಯ. ಹೀಗಿರುವಾಗ ಇಲ್ಲಿನ ಒಂದು ದೃಶ್ಯ ಬಹುತೇಕರನ್ನು ಬೆಚ್ಚಿ ಬೀಳಿಸಿದೆ.

ಬೀಡ್‌ ಜಿಲ್ಲೆಯ ಅಂಬಾಜೋಗಾಯ್‌ನ ಸ್ವಾಮಿ ರಮಾನಂದ ತೀರ್ಥ ಆಸ್ಪತ್ರೆಯಲ್ಲಿ ಕೊರೋನಾದಿಂದಾಗಿ ಮೃತಪಟ್ಟ 22 ಸೋಂಕಿತರ ಶವಗಳನ್ನೂ  ಒಂದೇ ಆಂಬುಲೆನ್ಸ್‌ಲ್ಲಿ ತುಂಬಿ ಸ್ಮಶಾನಕ್ಕೊಯ್ಯಲಾಗಿದೆ. ತಮ್ಮ ಬಳಿ ಆಂಬುಲೆನ್ಸ್‌ ಇಲ್ಲ ಎಂಬುವುದು ಆಸ್ಪತ್ರೆ ಸಿಬ್ಬಂದಿ ಮಾತಾಗಿದೆ. ಈ ದೃಶ್ಯ ನೊಡಿದ ಬಹುತೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊರೋನಾ ಸೋಂಕು ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆ ಅಂಬಾಜೋಗಾಯ್‌ ಪರಿಸ್ಥಿತಿ ಗಂಭೀರವಾಗಿದೆ. ಹೀಗಾಗಿ ಈ ಫೋಟೋ ಆಸ್ಪತ್ರೆ ವಿರುದ್ಧ ಜನರು ಭಾರೀ ಆಕ್ರೋಶ ವ್ಯಕ್ತಪಡಿಸುವಂತೆ ಮಾಡಿದೆ.

ಆಸುಪಾಸಿನ ತಾಲೂಕುಗಳ ರೋಗಿಗಳನ್ನೂ ಇಲ್ಲೇ ಕರರೆತರಲಾಗುತ್ತಿದೆ. ಹೀಗಾಗಿ ಸೋಂಕಿತರ ಹಾಗೂ ಮೃತರ ಸಂಖ್ಯೆಯೂ ಹೆಚ್ಚುತ್ತಿದೆ.
ಇನ್ನು ಕಳೆದ ಇಪ್ಪತ್ನಾಲ್ಕು ಗಂಟೆಯಲ್ಲಿ ಮಹಾರಾಷ್ಟ್ರದಲ್ಲಿ 71,736 ಮಂದಿ ಗುಣಮುಖರಾಗಿದ್ದು, ಸದ್ಯ  6,74,770 ಸಕ್ರಿಯ ಪ್ರಕರಣಗಳಿವೆ. ಈವರೆಗೂ ಇಲ್ಲಿ 43 ಲಕ್ಷದ 43 ಸಾವಿರದ 727 ಪ್ರಕರಣಗಳು ದಾಖಲಾಗಿವೆ ಹಾಗೂ 65,284  ಮಂದಿ ಮೃತಪಟ್ಟಿದ್ದಾರೆ.

 

Spread the love
Leave A Reply

Your email address will not be published.

Flash News