ಕೊರೊನಾ ಸಾವಿನ ಸಂಖ್ಯೆಯಲ್ಲಿ ಸರ್ಕಾರ ಕಣ್ಣಾಮುಚ್ಚಾಲೆ : ಸಾವುಗಳ ಸತ್ಯವನ್ನು ಮುಚ್ಚಿಡ್ತಿರೊದ್ಯಾಕೆ ಸರ್ಕಾರ..?

0

ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಅತ್ಯಂತ ಭೀಕರವಾಗಿದೆ. ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತಗ್ತಿದ್ದು, ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಆದರೆ ಸರ್ಕಾರ ಕೊರೊನಾ ಸಾವಿನ ಸಂಖ್ಯೆಯಲ್ಲಿ ಕಣ್ಣಾಮುಚ್ಚಾಲೆಯಾಡ್ತಿದೆ. ಹೌದು. ಬೆಂಗಳೂರಲ್ಲಿ ಕೊರೊನಾದಿಂದ ಸಂಭವಿಸುತ್ತಿರುವ ಸಾವುಗಳ ಬಗ್ಗೆ ನೀಡುತ್ತಿರುವ ಅಂಕಿ ಅಂಶಗಳೆಲ್ಲಾ ಸುಳ್ಳು. ಬೆಂಗಳೂರು ಮಹಾನಗರ ಪಾಲಿಕೆ ಕೊಡುತ್ತಿರುವ ಲೆಕ್ಕಕ್ಕೂ ಚಿತಾಗಾರಗಳಲ್ಲಿ ಆಗ್ತಿರೋ ಸಾವಿನ ಲೆಕ್ಕಕ್ಕೂ ಸಂಬಂಧವೇ ಇಲ್ಲ.2021 ಏಪ್ರಿಲ್ 18 ರಿಂದ 24ರ ವರೆಗೆ ರಾಜಧಾನಿಯಲ್ಲಿ 451ಸಾವು ಸಂಭವಿಸಿವೆ. ಪ್ರತಿಯೊಂದು ಚಿತಾಗಾರದಲ್ಲಿ ಸ್ವಲ್ಪವೂ ವಿರಾಮವಿಲ್ಲದೇ ಶವಸಂಸ್ಕಾರ ಮಾಡಲಾಗ್ತಿದೆ. ಆದರೂ ಬಿಬಿಎಂಪಿ ಸಾವಿನ ಸಂಖ್ಯೆಯನ್ನು ಮರೆಮಾಚುತ್ತಿದೆ. ಏಪ್ರಿಲ್ 8 ರಿಂದ 22ರ ವರೆಗೆ ಆರು ಚಿತಾಗಾರದಲ್ಲಿ 860 ಶವಗಳ ಅಂತ್ಯಕ್ರಿಯೆ ನಡೆದಿದೆ. ಆದರೆ ಈ ಅವಧಿಯಲ್ಲಿ ಹೆಲ್ತ್ ಬುಲೆಟಿನ್‌ನಲ್ಲಿ ಉಲ್ಲೇಖವಾಗಿರುವ ಸಾವಿನ ಸಂಖ್ಯೆ ಕೇವಲ 461. ಬೆಂಗಳೂರು ಗ್ರಾಮಾಂತರ ಚಿಲ್ಲೆಯಲ್ಲಿ ಸತ್ತವರ ಸಂಖ್ಯೆಯೂ ಇದರಲ್ಲಿ ಸೇರಿದೆ. ಬಿಟ್ಟು ಹೋಗಿರಬಹುದಾದ 17ರಂದು ಸಂಭವಿಸಿದ 60 ಸಾವುಗಳನ್ನ ಸೇರಿಸಿದರೂ 527 ಸಾವುಗಳಾಗುತ್ತವೆ. ಆದರೆ ಚಿತಾಗಾರಗಳು ಕೊಟ್ಟ 820 ಸಾವಿನ ಸಂಖ್ಯೆಗೂ ಹೆಲ್ತ್ ಬುಲೆಟಿನ್‌ನಲ್ಲಿರುವ 527 ಸಾವಿಗೂ ಅದ್ಯಾಕಿಷ್ಟು ವ್ಯತ್ಯಾಸ..? ಬಿಬಿಎಂಪಿ ಇವೆಲ್ಲ ಸಾವಿನ ಸಂಖ್ಯೆಯನ್ನು ಮರೆಮಾಚುತ್ತಿರೋದ್ಯಾಕೆ..? ಮಾರ್ಚ್ 1 ರಿಂದ ಏಪ್ರಿಲ್ 26ರವರೆಗೆ 1,422 ಕೋವಿಡ್ ಸಾವಿಗಳು ಸಂಭವಿಸಿವೆ. ಆದರೆ ಚಿತಾಗಾರಗಳಲ್ಲಿ ನಡೆದಿರುವ ಅಂತ್ಯಸಂಸ್ಕಾರಗಳ ಪ್ರಕಾರ 3104 ಸಾವು ಸಂಭವಿಸಿವೆ. 1688 ಸಾವುಗಳು ಹೆಲ್ತ್ ಬುಲೆಟಿನ್ ನಲ್ಲಿ ಬಿಟ್ಟೋಗಿರುವುದಕ್ಕೆ ಕಾರಣ ಏನು..?ಸಾವುಗಳ ಸಂಖ್ಯೆ ಮುಚ್ಚಿಡುವುದರ ಹಿಂದೆ ಸರ್ಕಾರ ಹುನ್ನಾರವೇನು.? ಏಪ್ರಿಲ್ 18ರಿಂದ ಏಪ್ರಿಲ್ 22ರ ಅವಧಿಯಲ್ಲಿ ಎಂ.ಎಸ್.ಪಾಳ್ಯ ಚಿತಾಗಾರದಲ್ಲಿ 168 ಸಾವು, ಕುಡ್ಲು ಚಿತಾಗಾರದಲ್ಲಿ 98 ಸಾವು ಪೀಣ್ಯಾ ಚಿತಾಗಾರದಲ್ಲಿ 134, ಸುಮನಹಳ್ಳಿ ಚಿತಗಾರದಲ್ಲಿ 147, ಕೆಂಗೇರಿ ಚಿತಾಗಾರದಲ್ಲಿ 143 ಪಣತ್ತೂರು ಚಿತಾಗಾರದಲ್ಲಿ 78, ಇನ್ನು ಕ್ರಿಶ್ಚಿಯನ್ ಸಮಾಧಿಗಳಲ್ಲಿ 59 ಅಂತ್ಯಸಂಸ್ಕಾರಗಳು, ಮುಸ್ಲಿಂ ಖಬರಸ್ಥಾನ್‌ಗಳಲ್ಲಿ 33 ಅಂತ್ಯಸಂಸ್ಕಾರ. ಎಲ್ಲಾ ಸೇರಿ 860 ಸಾವಿಗಳು. ಆದರೆ ಹೆಲ್ತ್ ಬುಲೆಟಿನ್‌ನಲ್ಲಿ ದಾಖಲಾದ ಸಾವುಗಳ ಸಂಖ್ಯೆ 467.ಬಿಬಿಎಂಪಿ ಕೊಡುತ್ತಿರುವ ಸಾವಿನ್ನ ಆರೋಗ್ಯ ಕುಟುಂಬ ಇಲಾಖೆ ಸೇರಿಸಿಕೊಳ್ಳುತ್ತಿಲ್ವಾ..? ಹೆಲ್ತ್ ಬುಲೆಟಿನ್ ನಲ್ಲಿ ಉಲ್ಲೇಖಿತ ಸಾವುಗಳಲ್ಲಿ ಬಿಬಿಎಂಪಿ ವ್ಯಾಪ್ತಿಯ ಸಾವುಗಳನ್ನ ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ವಾ..? ಬಿಬಿಎಂಬಿಯಿಂದ ಸಾರ್ವಜನಿಕರನ್ನು ದಾರಿ ತಪ್ಪಿಸುವ ಕೆಲಸ ನಡೀತಿದ್ಯಾ..? ಕಡಿಮೆ ಅಂಕಿಅಂಶಗಳನ್ನು ಕೊಟ್ಟು ಸರ್ಕಾರ ಜನರಿಗೆ ಮಂಕು ಬೂದಿ ಎರಚುತಿದ್ಯಾ..? ಈ ಪ್ರಶ್ನೆಗಳಿಗೆಲ್ಲಾ ಉತ್ತರ ಸರ್ಕಾರವೇ ಕೊಡಬೇಕು

Spread the love
Leave A Reply

Your email address will not be published.

Flash News