ಮೂಗಿನಲ್ಲಿ ನಿಂಬೆರಸ ಹಾಕಿಕೊಂಡ ಆರೋಗ್ಯವಾಗಿದ್ದ ವ್ಯಕ್ತಿ ಸಾವು

0

ರಾಯಚೂರು: ಆರೋಗ್ಯವಾಗಿದ್ದ ವ್ಯಕ್ತಿಯೊಬ್ಬರು ಮೂಗಿನಲ್ಲಿ ನಿಂಬೆಹಣ್ಣಿನ ರಸ ಹಾಕಿಕೊಂಡು ಮೃತಪಟ್ಟ ಘಟನೆ ಸಿಂಧನೂರಿನ ನಟರಾಜ ಕಾಲೋನಿಯಲ್ಲಿ ನಡೆದಿದೆ. ನಗರದ ಶರಣಬಸವೇಶ್ವರಕಾಲೋ‌ನಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದ ಬಸವರಾಜ (43) ಮೃತರು. ಮೂಗಿನಲ್ಲಿ ನಿಂಬೆಹಣ್ಣಿನ ರಸ ಹಾಕಿಕೊಂಡ ಪರಿಣಾಮ ಆರೋಗ್ಯದಲ್ಲಿ ಏರುಪೇರಾಗಿ ಸಾವನ್ನಪ್ಪಿದ್ದಾರೆ ಎಂದು ಮನೆಯವರು ಹೇಳಿದ್ದಾರೆ. ಬೆಳಗ್ಗೆ ಇವರು ಆರೋಗ್ಯವಾಗಿಯೇ ಇದ್ದರು. ಆದರೆ ನಿಂಬೆರಸ ಹಾಕಿಕೊಂಡ ಬಳಿಕ ಏಕಾಏಕಿ ಒದ್ದಾಡಿ ಮೃತಪಟ್ಟರು ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.ಈ ಹಿಂದೆ  ಮೂಗಿನಲ್ಲಿ ನಾಲ್ಕು ಹನಿ ಲಿಂಬೆ ರಸ ಹಾಕುವುದರಿಂದ ಆಕ್ಸಿಜನ್ ಸಮಸ್ಯೆ ನಿವಾರಣೆಯಾಗುತ್ತದೆ ಎಂದು ಇತ್ತೀಚೆಗೆ ವಿಆರ್‌ಎಲ್ ಸಂಸ್ಥೆಯ ಮುಖ್ಯಸ್ಥ ವಿಜಯ್ ಸಂಕೇಶ್ವರ್ ಹೇಳಿದ್ದರು. ಇದು ಭಾರೀ ಚರ್ಚೆ ಆಗಿತ್ತು. ಅನೇಕರು ವಿಜಯಸಂಕೇಶ್ವರರ ಅಭಿಪ್ರಾಯಕ್ಕೆ ಸಮ್ಮತಿ ಸೂಚಿಸಿದ್ದರು.
ಇದನ್ನು ಸ್ವತಃ ನಾನು ಪ್ರಯೋಗಿಸಿದ್ದೇನೆ. ಪರಿಚಯದ 200 ಜನರ ಮೇಲೆ ಪ್ರಯೋಗ ಮಾಡಿ ಅರ್ಧ ಗಂಟೆಯಲ್ಲಿ ಉತ್ತಮ ಫಲಿತಾಂಶ ದೊರೆತಿದೆ ಎಂದು ಹೇಳಿದ್ದರು. ಮೂಗಿನಲ್ಲಿ ಲಿಂಬೆರಸ ಹಾಕುವುದರಿಂದ ಲಂಗ್ಸ್‌ನಲ್ಲಿರುವ ಕಫ ಹೊರ ಬರುತ್ತದೆ. ಆಗ ಆಕ್ಸಿಜನ್ ಪ್ರಮಾಣ ಹೆಚ್ಚಾಗಿ ಉಸಿರಾಟದ ಸಮಸ್ಯೆ ನಿವಾರಣೆಯಾಗುತ್ತದೆ ಎಂದು ಸಂಕೇಶ್ವರ್ ಹೇಳಿದ್ದರು.

Spread the love
Leave A Reply

Your email address will not be published.

Flash News