BreakingCORONA LOCKDOWN HEROESCORONA VIRUSKANNADAFLASHNEWSFIGHTAGAINSTCORONAlock downMoreScrollTop NewsUncategorizedಕ್ರೈಮ್ /ಕೋರ್ಟ್ಫೋಟೋ ಗ್ಯಾಲರಿಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP)ರಾಜಕೀಯರಾಜ್ಯ-ರಾಜಧಾನಿ

“ಕ್ರಿಮಿನಲ್” ಗುತ್ತಿಗೆದಾರನ “270 ಕೋಟಿ ಅಕ್ರಮ”ಕ್ಕೆ ಬಿಜೆಪಿ ಪ್ರಭಾವಿ “ಸಚಿವ”ರ ಕೃಪೆ..?! “ಕಿಕ್ ಬ್ಯಾಕ್” ಆಸೆಗೆ ನೀಯತ್ತನ್ನೇ ಅಡವಿಟ್ಟ ಬಿಬಿಎಂಪಿ “ಟಿಇಸಿ” ಅಧಿಕಾರಿಗಳು..?!

ಧನಂಜಯ್ -ಗುತ್ತಿಗೆದಾರ.
ಧನಂಜಯ್ -ಗುತ್ತಿಗೆದಾರ.
ಕೆ.ಆರ್ ಪುರಂ ವ್ಯಾಪ್ತಿಯ ಕಣ್ಣೂರಿನಲ್ಲಿ ನಿರ್ಮಾಣವಾಗಿರುವ ಹಾಟ್ ಮಿಕ್ಸ್ ಪ್ಲಾಂಟ್..
ಕೆ.ಆರ್ ಪುರಂ ವ್ಯಾಪ್ತಿಯ ಕಣ್ಣೂರಿನಲ್ಲಿ ನಿರ್ಮಾಣವಾಗಿರುವ ಹಾಟ್ ಮಿಕ್ಸ್ ಪ್ಲಾಂಟ್..

ಬೆಂಗಳೂರು:ಬಿಬಿಎಂಪಿಯ ಬಾಸ್ ಗೌರವ್ ಗುಪ್ತಾರಿಗೆ ನಿಜಕ್ಕೂ ನೈತಿಕತೆ ಎನ್ನೋದೇನಾದ್ರೂ ಇದ್ದರೆ… ಆ ಸ್ಥಾನದ ಘನತೆ ಬಗ್ಗೆ ಗೌರವ ಎನ್ನೋದೇನಾದ್ರೂ ಇದ್ರೆ..ಈ ಅಕ್ರಮವನ್ನು ತನಿಖೆಗೊಳಪಡಿಸುವುದಲ್ಲ,,ತತ್ ಕ್ಷಣ ಗುತ್ತಿಗೆಯನ್ನೇ ರದ್ದುಪಡಿಸಬೇಕು..ಏಕಂದ್ರೆ ಅಕ್ರಮ ನಡೆದಿರೋದಕ್ಕೆ ಕಣ್ಣಿಗೆ ರಾಚುವಂಥ ಸಾಕ್ಷ್ಯಾಧಾರಗಳಿವೆ..

ಹಗರಣಗಳ ಕೊಂಪೆಯಾದ ಬಿಬಿಎಂಪಿಯಲ್ಲಿ ಅಕ್ರಮಗಳು ಹೇಗೆಲ್ಲಾ ನಡೆದ್ರೂ ಅದಕ್ಕೆ ಆಶ್ಚರ್ಯಪಡುವಂಗಿಲ್ಲ ಬಿಡಿ..ಇಲ್ಲಿನ ಹಡಾಲೆದ್ದ ಆಡಳಿತ ವ್ಯವಸ್ಥೆ ಅಕ್ರಮ ನಡೆಸೋರಿಗೆ ರೆಡ್ ಕಾರ್ಪೆಟ್ ಹಾಸಿಕೊಟ್ಟಂತಿದೆ.ಹಣಕ್ಕಾಗಿ ನಾಲಿಗೆ ಚಾಚಿಕೊಂಡೇ ಇರುವ ಬಹುತೇಕ ಅಧಿಕಾರಿ ಸಿಬ್ಬಂದಿಯಿಂದಾಗಿ ಬಿಬಿಎಂಪಿ ನುಂಗುಬಾಕರ ಅಡ್ಡೆಯಾಗಿದೆ.

ಯೆಸ್…ಇದು ಅಂತಿಂಥ ಹಗರಣವಲ್ಲ..ಬೆರಳೆಣಿಕೆ ಕೋಟಿಗಳ ಅಕ್ರಮವಲ್ಲ.ಬರೋಬ್ಬರಿ 270 ಕೋಟಿ ಮೊತ್ತದ ಬೃಹತ್ ಹಗರಣ. ಇಡೀ ಬೆಂಗಳೂರಿನ ರಸ್ತೆಗೆ ಡಾಂಬರುಮಿಶ್ರಣವನ್ನು ಪೂರೈಸುವ ಯೋಜನೆಗೆ ಸಂಬಂಧಿಸಿದಂತೆ ನಡೆದಿರುವ ಹಾಟ್ ಮಿಕ್ಸ್ ಪ್ಲಾಂಟ್ ಗುತ್ತಿಗೆಹಗರಣ.ತಾಂತ್ರಿಕವಾಗಿ ಗುತ್ತಿಗೆ ಪಡೆಯೊಕ್ಕೆ ಅರ್ಹನೇ ಅಲ್ಲದ ಗುತ್ತಿಗೆದಾರ  ಧನಂಜಯ್  ಗೆ ಕೊಡೊಕ್ಕೆ ಟಿಇಸಿ(ಟ್ರಾಫಿಕ್ ಎಂಜಿನಿಯರಿಂಗ ಸೆಲ್ ) ವಿಭಾಗದ ಕೆಲ ಅಧಿಕಾರಿಗಳೇ ಕಿಕ್ ಬ್ಯಾಕ್ ಪಡೆದು ಅವರ ಅಧ್ಯಕ್ಷತೆಯಲ್ಲೇ ನಡೆಸಿರುವ ಬೃಹತ್ ಹಗರಣ.ಬಹುಷಃ ಇದು ಬಿಬಿಎಂಪಿ ಕ್ಯಾಂಪಸ್ ನಲ್ಲಿ ಇತ್ತೀಚಿನ ವರ್ಷಗಳಲ್ಲಿ ನಡೆದಿರಬಹುದಾದ ಬಹುದೊಡ್ಡ ಹಗರಣ ಎನ್ನುವ ಕುಖ್ಯಾತಿಗೆ ಪಾತ್ರವಾದರೂ ಆಶ್ಚರ್ಯವಿಲ್ಲ.

ಹೇಳೋರಿಲ್ಲ..ಕೇಳೋರಿಲ್ಲದ ಕೊರೊನಾ ಲಾಕ್ ಡೌನ್ ಸಮಯದಲ್ಲಿ ಅದೇನೇನ್ ಹಗರಣಗಳು ಬಿಬಿಎಂಪಿಯಲ್ಲಿ ನಡೆದೋಗಿದೆಯೋ…? ಯಾವ್ಯಾವ್ ಅಧಿಕಾರಿ ಅದೆಷ್ಟ್ ತಿಂದು ಕೊಬ್ಬಿದ್ದಾನೋ..? ..ಅಕ್ರಮಗಳಿಗಾಗಿ ಇರೋ ಬರೋ ರೂಲ್ಸನ್ನು ಗಾಳಿಗೆ ತೂರಿದ್ದಾರೋ..? ಅಕ್ರಮಗಳಿಂದ ಯಾರ್ಯಾರಿಗೆ ಎಷ್ಟೆಷ್ಟ್ ಕಿಕ್ ಬ್ಯಾಕ್ ಹೋಗಿದೆಯೋ..? ಇಂತದೊಂದಿಷ್ಟು ಅನುಮಾನಕ್ಕೆ ಕಾರಣವಾಗಿದ್ದು ಕಣ್ಣಿಗೆ ರಾಚೋ ರೀತಿಯಲ್ಲಿ ಬಿಬಿಎಂಪಿ ನಾಲಾಯಕ್ ಅಧಿಕಾರಿಗಳ ಕೃಪಕಟಾಕ್ಷದಿಂದ ನಡೆದಿರುವ ಬೃಹತ್ ..ಬೃಹತ್ ಹಗರಣ..

ಧನಂಜಯ್…..ಬಿಬಿಎಂಪಿಯ ಗುತ್ತಿಗೆದಾರ..ಭಾರೀ ದೊಡ್ಡ ಗುತ್ತಿಗೆದಾರನೇನು ಅಲ್ಲ.ಬಿಬಿಎಂಪಿಯ ಸಿಂಹಪಾಲು ಕಾಮಗಾರಿಗಳನ್ನು ನಿರ್ವಹಿಸಿರುವ ಹಿನ್ನಲೆಯೂ ಇವರಿಗಿಲ್ಲ..ಹಾಗಂತ ಕಡಿಮೆ ತೂಕದ ಆಸಾಮಿಯೂ ಅಲ್ಲ..ರಾಜ್ಯ ಸರ್ಕಾರದ ಆಯಕಟ್ಟಿನ ಹುದ್ದೆಯಲ್ಲಿರುವ ಬಿಜೆಪಿ ಸಚಿವರೊಬ್ಬರ ಕೃಪಕಟಾಕ್ಷದಿಂದ ಪಡೆದ ಹಾಟ್ ಮಿಕ್ಸ್ ಪ್ಲಾಂಟ್ ಟೆಂಡರ್ ನಿಂದ ಪಾಲಿಕೆಯಲ್ಲಿ ದಿಢೀರ್ ಮುನ್ನಲೆಗೆ ಬಂದಿದ್ದಾರೆ.ಅರ್ಹತೆ ಇಲ್ಲದ ಹೊರತಾಗ್ಯೂ ರೇಸ್ ನಲ್ಲಿದ್ದ ಘಟಾನುಘಟಿ ಕಾಂಟ್ರ್ಯಾಕ್ಟರ್ ಗಳನ್ನೆಲ್ಲಾ ಹಿಂದಿಕ್ಕಿ ನಿಯಮಬಾಹೀರವಾಗಿ ಟೆಂಡರ್ ಪಡೆದ ಖತರ್ನಾಕ್ ಕೆಲಸದಿಂದ ಸಧ್ಯ ಬಿಸಿ ಬಿಸಿ ಚರ್ಚೆಯ ಕೇಂದ್ರವಾಗಿದ್ದಾರೆ ಧನಂಜಯ್.

ಚೀಫ್ ಎಂಜಿನಿಯರ್ ಪ್ರಹ್ಲಾದ್
ಚೀಫ್ ಎಂಜಿನಿಯರ್ ಪ್ರಹ್ಲಾದ್
ಎಕ್ಸಿಕ್ಯೂಟಿವ್ ಎಂಜಿನಿಯರ್ ಶ್ರೀನಿವಾಸ್
TEC ಎಕ್ಸಿಕ್ಯೂಟಿವ್ ಎಂಜಿನಿಯರ್ ಶ್ರೀನಿವಾಸ್

ಗುತ್ತಿಗೆ ಪಡೆಯೊಕ್ಕೆ ಮಾಡಿದ ಖತರ್ನಾಕ್ ಕೆಲಸ ಎಂತದ್ದು ಗೊತ್ತಾ..? :ಕೆ.ಆರ್ ಪುರಂ ನಿಂದ ಕೆಲ ಕಿಲೋಮೀಟರ್ ದೂರದಲ್ಲಿರುವ ಕಣ್ಣೂರಿನಲ್ಲಿ ಹತ್ತಾರು ಎಕ್ರೆ ವಿಸ್ತೀರ್ಣದಲ್ಲಿ ಗುತ್ತಿಗೆದಾರ ಎಂ.ಎಸ್ ವೆಂಕಟೇಶ್  ಅಲಿಯಾಸ್ ಗಿಲಿಗಿಲಿ ವೆಂಕಟೇಶ್, ಹಾಟ್ ಮಿಕ್ಸ್ ಪ್ಲಾಂಟ್ ನಡೆಸೊಕ್ಕೆ ಟೆಂಡರ್ ಪಡೆದಿದ್ರು. ಉಳಿದೆಲ್ಲಾ ಗುತ್ತಿಗೆದಾರರಿಗಿಂತ ಲೋಯೆಸ್ಟ್ ಬಿಡ್ ಮಾಡಿ ಗುತ್ತಿಗೆ ಪಡೆದಿದ್ದರು ವೆಂಕಟೇಶ್.ಹಾಟ್ ಮಿಕ್ಸ್ ಪ್ಲಾಂಟ್ ಗೆ ಬೇಕಾದ ಸಂಪನ್ಮೂಲಕ್ಕೆ  ಹತ್ತಾರು ಕೋಟಿ ಇನ್ವೆಸ್ಟ್ ಮಾಡಿ,ಕೆಲಸವನ್ನೂ ಶುರುಮಾಡಿದ್ದರು. ಸಾವಿರಾರು ಲೋಡ್ ಹಾಟ್ ಮಿಕ್ಸ್ ನ್ನು ರಸ್ತೆಗಳಿಗೆ ಪೂರೈಸಿದ್ರು.ಇಷ್ಟೆಲ್ಲಾ ಮಾಡಿದ್ದ ವೆಂಕಟೇಶ್ ಗುತ್ತಿಗೆಯನ್ನು ಸಣ್ಣಪುಟ್ಟ ಕಾರಣಗಳಿಂದ ರದ್ದು ಮಾಡಿ ರೀಟೆಂಡರ್ ಕರೆಯಲಾಯ್ತು..ರೀ ಟೆಂಡರ್ ಕರೆದ ಬಗ್ಗೆಯೂ ಸಾಕಷ್ಟು ಗುಮಾನಿ ಮೂಡಿತ್ತು.

ಕೆಲ ದಿನಗಳಲ್ಲಿ ಕರೆದ ರೀಟೆಂಡರ್ ನಲ್ಲಿ ನಿಕ್ಷೇಪ್ ಇನ್ಫಾಸ್ಟ್ರಕ್ಚರ್ ಕಂಪೆನಿಯ ಪಾಲುದಾರ ಧನಂಜಯ್ ಸೇರಿದಂತೆ ಅನುಭವಿ ಕಾಂಟ್ರ್ಯಾಕ್ಟರ್ಸ್ ಗಳಾದ ಮೋಹನ್ ನರಸಿಂಹಲು,ಬಿಬಿ ಉಮೇಶ್, ಮುನಿವೆಂಕಟಪ್ಪ,ವೆಂಕಟಾಚಲಪತಿ ಬಿಡ್ ಮಾಡಿದ್ರು.ಈ ವೇಳೆ ಗುತ್ತಿಗೆಯ ಒಟ್ಟಾರೆ ವ್ಯವಸ್ಥೆ ನೋಡಿಕೊಳ್ಳುವ ಚೀಫ್ ಎಂಜಿನಿಯರ್ ಪ್ರಹ್ಲಾದ್,ಎಕ್ಸಿಕ್ಯೂಟಿವ್ ಎಂಜಿನಿಯರ್ ಶ್ರೀನಿವಾಸ್ ಎಲ್ಲಾ ಗುತ್ತಿಗೆದಾರರ ತಾಂತ್ರಿಕ ಹಾಗೂ ಅನುಭವದ ಅರ್ಹತೆಯನ್ನು ಕೂಲಂಕುಶವಾಗಿ ಪರಿಶೀಲಿಸಬೇಕಿತ್ತು.

ಆದ್ರೆ ಅದನ್ನು ಮಾಡದೆ ಧನಂಜಯ್ ಗೆ ಅನುಕೂಲ ಮಾಡಿಕೊಡುವ ಏಕೈಕ ಉದ್ದೇಶಕ್ಕೆ ರೇಸ್ ನಲ್ಲಿದ್ದವರನ್ನು ಸಕಾರಣ ನೀಡದೆ ಅನರ್ಹಗೊಳಿಸಿದ್ದಾರೆನ್ನುವುದು ಅಧಿಕಾರಿಗಳು ಹಾಗೂ ಧನಂಜಯ್ ನಡುವೆ ನಡೆದಿರಬಹುದಾದ ಭಾರೀ ಗೋಲ್ಮಾಲ್ ನ ಶಂಕೆ ಮೂಡಿಸುತ್ತಿದೆಯಂತೆ. ಧನಂಜಯ್ ಅವರಿಗೆ ಗುತ್ತಿಗೆ ಕೊಡ್ಲಿಕ್ಕೆ ಉಳಿದೆಲ್ಲಾ ಕಂಪೆನಿಗಳಿಗಿಂತ ಹೆಚ್ಚಿನ ಅಂಕ ನೀಡಿ ಪಾಸ್ ಮಾಡಿಸಿರುವ ಹಿಂದೆ ಗಾಂಧೀನಗರ ಪಕ್ಕದ ವಿಧಾನಸಭಾ ಕ್ಷೇತ್ರವೊಂದರ ಪ್ರಭಾವಿ ಸಚಿವರ ಕೈವಾಡ-ಒತ್ತಡ ಇತ್ತೆನ್ನುವ ಆರೋಪ ಕೇಳಿಬರುತ್ತಿದೆ.

ಫಾರ್ಚೂನರ್ ಆರ್ ಸಿ ದಾಖಲೆಯನ್ನೇ ಟಿಪ್ಪರ್ ದಾಖಲೆ ಎಂದು ಸೃಷ್ಟಿಸಿ ವಂಚನೆ..!?
ಫಾರ್ಚೂನರ್ ಆರ್ ಸಿ ದಾಖಲೆಯನ್ನೇ ಟಿಪ್ಪರ್ ದಾಖಲೆ ಎಂದು ಸೃಷ್ಟಿಸಿ ವಂಚನೆ..!?

ಗುತ್ತಿಗೆ ಪಡೆಯೊಕ್ಕೆ “ಫಾರ್ಚೂನರ್, ಟಿಪ್ಪರ್” ಆಗುತ್ತೆ..?:ಧನಂಜಯ್ ಗೆ ತನ್ನನ್ನು ಬಿಜೆಪಿ ಸಚಿವರು ಕಾಯುತ್ತಾರೆನ್ನುವ ಕಾರಣಕ್ಕೆ ಎಷ್ಟು ಭಂಡ ಧೈರ್ಯ ಎಂದ್ರೆ, ಗುತ್ತಿಗೆ ಪಡೆಯೊಕ್ಕೆ ಮ್ಯಾನ್ ಪವರ್,ಟಿಪ್ಪರ್ ಹಾಗೂ ಇತರೆ ವಸ್ತುಗಳ ದಾಖಲೆಗಳನ್ನು ಸಲ್ಲಿಸಬೇಕಲ್ಲ..ಆ ವೇಳೆ ಈ ಖತರ್ನಾಕ್  ಹಾಟ್ ಮಿಕ್ಸ್ ಸಾಗಿಸೊ ಟಿಪ್ಪರ್ ಗಳನ್ನು ನಕಲಿಯಾಗಿ ಸೃಷ್ಟಿಸಿದ್ದಾರಂತೆ.ಭೌತಿಕವಾಗಿ ಅವರ ಬಳಿ ಅಷ್ಟೊಂದು ಟಿಪ್ಪರ್ ಗಳೇ ಇಲ್ಲ.ಆದ್ರೂ  ತನ್ನ ಫಾರ್ಚೂನರ್ ಕಾರ್ ನ (KA04MN0441) RC ದಾಖಲೆಗಳನ್ನೇ  ಟಿಪ್ಪರ್ ದಾಖಲೆಗಳೆಂದು ತಿದ್ದಿ ಬಿಬಿಎಂಪಿಗೆ ಒಪ್ಪಿಸಿದ್ದಾನೆ. ದಾಖಲೆ ಪರಿಶೀಲಿಸಬೇಕಾದ ಅಧಿಕಾರಿಗಳು ಕಿಕ್ ಬ್ಯಾಕ್ ಸಿಗ್ತಿದ್ದಂಗೆ ನೀಯತ್ತನ್ನು ಆತನಿಗೆ ಅಡವಿಟ್ಟು ಕಣ್ಮುಚ್ಚಿಕೊಂಡು ಗುತ್ತಿಗೆ ನೀಡಿದ್ದಾರಂತೆ.

ಗುತ್ತಿಗೆ ಪಡೆಯೊಕ್ಕೆ ಅರ್ಹತೆಯೇ ಇಲ್ಲ…:ಹಾಗೆ ನೋಡಿದ್ರೆ  ಬಿಬಿಎಂಪಿ ಯ ಹಲವು ಎಂಜಿನಿಯರ್ಸ್ ಗಳು ಹೇಳುವ ಪ್ರಕಾರ, ಕಾಂಟ್ರ್ಯಾಕ್ಟರ್ ಧನಂಜಯ್ ಗೆ ಗುತ್ತಿಗೆ ಪಡೆಯೋ ಅರ್ಹತೆನೇ ಇಲ್ಲ. 198 ವಾರ್ಡ್ ಗಳಿಗೆ ಹಾಟ್ ಮಿಕ್ಸ್ ಸಪ್ಲೈ ಮಾಡೋ ತಾಕತ್ತೂ ಇಲ್ಲ.ಏಕೆಂದ್ರೆ  ಗುತ್ತಿಗೆ ಪಡೆಯೊಕ್ಕೆ ಬೇಕಿರುವಷ್ಟು “ಟಿಪ್ಪರ್-ಮ್ಯಾನ್ ಪವರ್ರೇ” ಅವರಲ್ಲಿಲ್ಲವಂತೆ.  ಧನಂಜಯ್ ಪಾಲುದಾರಿಕೆಯ ನಿಕ್ಷೇಪ್ ಇನ್ಫಾಸ್ಟ್ರಕ್ಚರ್ ಕಂಪೆನಿಗೆ ಬಿಡ್ ನಲ್ಲಿ ಪಾಲ್ಗೊಳ್ಳುವ ಅರ್ಹತನೇ ಇಲ್ವಂತೆ.

ಏಕೆಂದ್ರೆ ಅವರ ಕಂಪೆನಿಯ GST ನೊಂದಣಿಯಾದದ್ದೇ 2020ರ ಫೆಬ್ರವರಿ 2ರಂದು.ಸೀನಿಯಾರಿಟಿ ಆಧಾರದಲ್ಲಿ ಧನಂಜಯ್ ಕಂಪೆನಿ ಬಿಡ್ ನಲ್ಲಿ ಪಾಲ್ಗೊಳ್ಳುವಂತೆಯೇ ಇಲ್ಲ.ಸರ್ಕಾರಿ ನಿಯಮಗಳೂ ಗುತ್ತಿಗೆ ಪಡೆಯೊಕ್ಕೆ ಅವಕಾಶ ಮಾಡಿಕೊಡುವುದಿಲ್ಲವಂತೆ.ಆದ್ರೂ ಟಿಇಸಿ ಅಧಿಕಾರಿಗಳು ಧನಂಜಯ್ ಗೆ ಯಾವ್ ಆಧಾರದಲ್ಲಿ ಗುತ್ತಿಗೆ ಕೊಟ್ಟರು ಎನ್ನೋದಕ್ಕಿಂತ  ಟೆಂಡರ್ ನಲ್ಲಿ ಪಾಲ್ಗೊಳ್ಳಲು ಹೇಗೆ ಅವಕಾಶ ಕೊಟ್ಟರೆನ್ನೋದೇ ಮಿಲಿಯನ್ ಡಾಲರ್ ಪ್ರಶ್ನೆ.

ಧನಂಜಯ್ ಕಪ್ಪು ಪಟ್ಟಿಗೆ ಸೇರಬೇಕು: ಬಿಜೆಪಿ ಸಚಿವರೊಬ್ಬರ ಕೃಪಕಟಾಕ್ಷದಿಂದ ಅಡ್ಡದಾರಿ ಮೂಲಕ 270 ಕೋಟಿ ಮೊತ್ತದ ಗುತ್ತಿಗೆ ಪಡೆಯೋ ಮೂಲಕ ಅರ್ಹ ಗುತ್ತಿಗೆದಾರರ ಬಾಯಿಗೆ ಮಣ್ಣಾಕಿದ ಧನಂಜಯ್ ಹಾಗೂ ಅದಕ್ಕೆ ಅವಕಾಶ ಮಾಡಿಕೊಟ್ಟ ಬಿಬಿಎಂಪಿ ಅಧಿಕಾರಿಗಳ ಕೃತ್ಯಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಗುಂಡಿ ತುಂಬುವ ಟೆಂಡರ್ ಪಡೆಯೊಕ್ಕೆ ಅಡ್ಡದಾರಿ ಹಿಡಿದ ಧನಂಜಯ್ ಗೆ ಕಠಿಣ ಶಿಕ್ಷೆಯಾಗಬೇಕು  ಅಷ್ಟೇ ಅಲ್ಲ, ತತ್ ಕ್ಷಣವೇ ಕ್ರಿಮಿನಲ್ ಧನಂಜಯ್ ವಿರುದ್ಧ ಎಫ್ ಐಆರ್ ದಾಖಲಿಸಬೇಕು. ಕಪ್ಪುಪಟ್ಟಿಗೆ ಸೇರಿಸಿ ಶಾಶ್ವತವಾಗಿ ಲೈಸೆನ್ಸ್ ರದ್ದು ಪಡಿಸಬೇಕು ಎಂದು ಒತ್ತಾಯಿಸಿರುವ ಗುತ್ತಿಗೆದಾರರು, ಧನಂಜಯ ವಿರುದ್ದ ಸರ್ಕಾರಕ್ಕೆ ದೂರು ಸಲ್ಲಿಸೊಕ್ಕೆ ಚಿಂತನೆ ನಡೆಸಿದ್ದಾರಲ್ಲದೇ, ಕಾನೂನಾತ್ಮಕ ಹೋರಾಟಕ್ಕೂ ನಿರ್ದಾರ ಕೈಗೊಂಡಿದ್ದಾರೆ.

ತನಿಖೆಗೆ ಆದೇಶ:ಸಧ್ಯ ಭಾರೀ ಸದ್ದು ಮಾಡಿರುವ ಹಾಟ್ ಮಿಕ್ಸ್ ಟೆಂಡರ್ ಅಕ್ರಮಕ್ಕೆ ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಗರಂ ಆಗಿದ್ದಾರೆನ್ನಲಾಗಿದೆ. ಈ ನಡುವೆ ಪ್ರಕರಣದ ತನಿಖೆಗೆ ಟಿವಿಸಿಸಿಗೆ ಮುಖ್ಯ ಆಯುಕ್ತರ ಆದೇಶ ನೀಡಲಾಗಿದೆ.  ವಾರದೊಳಗೆ ತನಿಖೆ ನಡೆಸಿ ವರದಿ ಸಲ್ಲಿಕೆಗೆ ಸೂಚನೆ ಕೂಡ ನೀಡಿದ್ದಾರೆ. ಪ್ರಕರಣದ ತನಿಖೆ ಕೈಗೆತ್ತಿಕೊಂಡ ಟಿವಿಸಿಸಿ ವಿಚಾರಣೆ ತೀವ್ರಗೊಳಿಸಿದೆ.

ಟಿಇಸಿ ಅಧಿಕಾರಿಗಳ ಶಾಮೀಲು ಶಂಕೆ:ಅಕ್ರಮ ಕಣ್ಣಿಗೆ ರಾಚುವ ರೀತಿಯಲ್ಲಿ ನಡೆಯೊಕ್ಕೆ ಟಿಇಸಿ ಅಧಿಕಾರಿಗಳೇ ಕಾರಣ ಎನ್ನಲಾಗುತ್ತಿದೆ.ಚೀಫ್ ಎಂಜಿನಿಯರ್ ಪ್ರಹ್ಲಾದ್ ಅವರ ಮೇಲೆಯೂ ಗುಮಾನಿ ಇದೆಯಾದ್ರೂ ದೊಡ್ಡ ಶಂಕೆ ವ್ಯಕ್ತವಾಗಿರುವುದು ಎಕ್ಸಿಕ್ಯೂಟಿವ್ ಎಂಜಿನಿಯರ್ ಶ್ರೀನಿವಾಸ್ ಮೇಲೆ.ದಾಖಲೆಗಳನ್ನು ಸರಿಯಾಗಿ ಪರಿಶೀಲಿಸಿದ್ದರೆ ಇಷ್ಟೆಲ್ಲಾ ಅಕ್ರಮ ನಡೆಯುತ್ತಿರಲಿಲ್ಲ.ಹಾಗಾಗಿ ಶ್ರೀನಿವಾಸ್ ಅವರನ್ನು ಸರಿಯಾಗಿ ತನಿಖೆಗೊಳಪಡಿಸಿದ್ರೆ ಹಗರಣದ ಮತ್ತಷ್ಟು ಹೂರಣ ಬಯಲಾಗಬಹುದೇನೋ..?

Spread the love

Related Articles

Leave a Reply

Your email address will not be published.

Back to top button
Flash News