CORONA LOCKDOWN HEROESCORONA VIRUSlock down

ಕೊರೋನಾ ಲಾಕ್ ಡೌನ್ ನಡುವೆ ವಿದ್ಯಾರ್ಥಿಯ ಅಪೂರ್ವ ಸಾಧನೆ.. ಕೊರೋನಾ ಸಂತ್ರಸ್ಥರ ಸಂಕಷ್ಟಕ್ಕೆ ಮಿಡಿದ ಪೋರ..!

ಕೊರೊನಾ ಎರಡನೇ ಅಲೆ ಇಡೀ ಮನುಕುಲಕ್ಕೆ ಅತ್ಯಂತ ದೊಡ್ಡ ಸಂಕಷ್ಟವನ್ನು ತಂದೊಡ್ಡಿದೆ. ಈ ಕೊರೊನಾ ಹೆಮ್ಮಾರಿ ಅದೆಷ್ಟೋ ಅಮಾಯಕ ಜನರ ಪ್ರಾಣವನ್ನು ಬಲಿ ಪಡೆದಿದೆ. ಇನ್ನೆಷ್ಟೋ ಜನರನ್ನ ಬೀದಿ ಪಾಲು ಮಾಡಿದೆ. ಕೊರೊನಾದ ಹಾವಳಿಯನ್ನು ನಿಯಂತ್ರಿಸಲು ಸರ್ಕಾರ ಲಾಕ್‌ಡೌನ್ ಘೋಷಿಸಿದೆ. ಒಂದು ಕಡೆ ಕೊರೊನಾ, ಮತ್ತೊಂದು ಕಡೆ ಲಾಕ್‌ಡೌನ್, ಇವೆರಡರ ಮಧ್ಯೆ ಸಿಲುಕಿ ಜನ ನರಳಾಡುತ್ತಿದ್ದಾರೆ. ಒಂದು ಹೊತ್ತಿನ ಊಟಕ್ಕೂ ಜನ ಪರದಾಡುವಂತಹ ಸ್ಥಿತಿ ಎದುರಾಗಿದೆ.

ಈ ಮಧ್ಯೆ ಅನೇಕರು ಕಷ್ಟದಲ್ಲಿರುವವರಿಗೆ ತಮ್ಮ ಸಹಾಯ ಹಸ್ತ ಚಾಚಲು ಮುಂದಾಗಿದ್ದಾರೆ. ಚಿತ್ರರಂಗದ ಕಲಾವಿದರು ಸೇರಿದಂತೆ ಸಹಾಯ ಮಾಡುವ ಮನಸ್ಸುಳ್ಳವರೂ ಜನರಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದರೆ. ಆಕ್ಸಿಜನ್, ಫುಡ್‌ಕಿಟ್, ಹೀಗೆ ಜನರಿಗೆ ಅವಶ್ಯಕತೆ ಇರೋದನ್ನು ಒದಗಿಸುತ್ತಿದ್ದಾರೆ.

ಇಂತಹ ಸಂಕಷ್ಟ ಕಾಲದಲ್ಲಿ ಬಹಳಷ್ಟು ಮಂದಿ ತಮ್ಮ ಸಹಾಯ ಹಸ್ತ ಚಾಚುತ್ತಿರುವುದು ನಿಜಕ್ಕೂ ಖುಷಿಯ ವಿಚಾರ. ಅದರಲ್ಲೂ ವಿಶೇಷ ಏನಂದ್ರೆ ಕೊರೊನಾ ಲಾಕ್‌ಡೌನ್ ನಡುವೆ ಇಲ್ಲೊಬ್ಬ ವಿದ್ಯಾರ್ಥಿ ಅಪೂರ್ವ ಸಾಧನೆ ಮಾಡಿದ್ದಾನೆ.

ಹೌದು. ಹೆಸರುಘಟ್ಟ ಎಂಇಐ ಲೇಔಟ್ ನಿವಾಸಿ, ಹಿರಿಯ ಸರ್ವೇಯರ್ ಅಭಿನಂದನ್ ಜೈನ್ ಅವರ ಪುತ್ರ, ಮಾಯಾಂಕ್ ಎಂಬ ಪುಟ್ಟ ಪೋರ ಕೊರೊನಾ ಸಂತ್ರಸ್ಥರ ಸಂಕಷ್ಟಕ್ಕೆ ಮಿಡಿದಿದ್ದಾನೆ. ತಾನು ನಾಲ್ಕು ವರ್ಷದಿಂದ ಕೂಡಿಟ್ಟಿದ್ದ 4,190 ರೂಪಾಯಿ ಪ್ಯಾಕೆಟ್ ಮನಿಯನ್ನು ದೇಣಿಗೆಯ  ರೂಪದಲ್ಲಿ ಜಿಲ್ಲಾಧಿಕಾರಿ ಮಂಜುನಾಥ್ ಅವರಿಗೆ ಹಸ್ತಾಂತರಿಸಿದ್ದಾನೆ.

ಮಾಯಾಂಕ್‌ನ ಈ ಕಾರ್ಯಕ್ಕೆ ಜಿಲ್ಲಾಧಿಕಾರಿ ಆತನನ್ನು ಶ್ಲಾಘಿಸಿದ್ದಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲೇ ಜನರ ಸಂಕಷ್ಟಕ್ಕೆ ಮಿಡಿದ ಮಾಯಾಂಕ್‌ನ ಈ ಮಹಾನ್ ಕಾರ್ಯ ನಿಜಕ್ಕೂ ಶ್ಲಾಘನೀಯ.

Spread the love

Related Articles

Leave a Reply

Your email address will not be published.

Back to top button
Flash News