CORONA LOCKDOWN HEROESCORONA VIRUSlock down

ಅಂಧ ದಂಪತಿಗೆ ಸಹಾಯ ಹಸ್ತ ಚಾಚಿ ಮಾನವೀಯತೆ ಮೆರೆದ ಪೊಲೀಸರು.. ವಿಜಯನಗರ ಪೊಲೀಸರಿಂದ ಮಾನವೀಯ ಕಾರ್ಯ..

ರಾಜ್ಯದಲ್ಲಿ ಕೊರೊನಾ ಸೋಂಕನ್ನು ನಿಯಂತ್ರಿಸುವುದಕ್ಕಾಗಿ ಸರ್ಕಾರ ಲಾಕ್‌ಡೌನ್ ಮೊರೆ ಹೋಗಿದೆ. ಜನ ಕೊರೊನಾ ಹಾಗೂ ಲಾಕ್‌ಡೌನ್ ಇವೆರಡರ ಮಧ್ಯೆ ಸಿಲುಕಿ ಸಂಕಷ್ಟಕ್ಕೀಡಾಗಿದ್ದಾರೆ. ಅನೇಕರಿಗೆ ಲಾಕ್ ಇರೋದ್ರಿಂದ ಕೆಲಸ ಕಾರ್ಯ ಇಲ್ಲದೇ ಮನೆಯಲ್ಲೇ ಉಳಿದಿದ್ದಾರೆ. ಹೀಗಾಗಿ ಅದೆಷ್ಟೋ ಜನರಿಗೆ ಒಂದು ಹೊತ್ತಿನ ಊಟಕ್ಕೂ ಒದ್ದಾಡುವ ಪರಿಸ್ಥಿತಿ ಎದುರಾಗಿದೆ ಇಂತಹ ಕಷ್ಟಕಾಲದಲ್ಲಿ ಅನೇಕ ಮಂದಿ ಕಷ್ಟದಲ್ಲಿರುವವರಿಗೆ ನೆರವಿನ ಹಸ್ತ ಚಾಚಲು ಮುಂದಾಗಿದ್ದಾರೆ.

ಮನೆಯಿಂದ ಹೊರಬರುವುದಕ್ಕೂ ಭಯಪಡುವಂತಹ ಇಂತಹ ಸಮಯದಲ್ಲಿ ಪೊಲೀಸ್ ಅಧಿಕಾರಿಗಳು ಕೊರೊನಾ ವಾರಿಯರ್‌ಗಳಂತೆ ಸೇವೆ ಸಲ್ಲಿಸುತ್ತಿರುವುದಲ್ಲದೇ ಕಷ್ಟದಲ್ಲಿರುವವರಿಗೂ ತಮ್ಮ ಸಹಾಯ ಹಸ್ತ ಚಾಚುತ್ತಿದ್ದಾರೆ. ವಿಜಯನಗರದ ಪೊಲೀಸರು ಲಾಕ್‌ಡೌನ್ ಆದಾಗಿನಿಂದ ಊಟಕ್ಕಾಗಿ, ರೇಷನ್‌ಗೋಸ್ಕರ ಪರದಾಡುತ್ತಿದ್ದ ಅಂಧ ದಂಪತಿಗೆ ತಮ್ಮ ಸಹಾಯ ಹಸ್ತವನ್ನು ಚಾಚಿ ಮಾನವೀಯತೆ ಮೆರೆದಿದ್ದಾರೆ.

ಅಂಧ ದಂಪತಿಗಳಾದ ಬಸವರಾಜ್ ಮತ್ತು ಚಿನ್ನಮ್ಮ ದಂಪತಿಗಳಿಗೆ ಕೆಲವು ತಿಂಗಳಿಗಾಗುವಷ್ಟು ದಿನಸಿ ಕಿಟ್ ನೀಡಿ ಸಹಾಯ ಮಾಡಿದ್ದಾರೆ.
ಪೊಲೀಸ್ ಠಾಣೆಯ ಮಂದೆ ಅಸಹಾಯಕರಾಗಿ ನಿಂತಿದ್ದ ದಂಪತಿಗಳನ್ನು ಎಸ್.ಐ ಮನು ಅವರು ವಿಚಾರಿಸಿದ್ದಾರೆ. ಆಗ ಅಂಧ ದಂಪತಿಗಳು ನಮಗೆ ಊಟಕ್ಕೆ ಮನೆಯಲ್ಲಿ ಏನು ರೇಷನ್ ಇಲ್ಲ ಎಂದು ತಮ್ಮ ಕಷ್ಟ ಹೇಳಿಕೊಂಡಿದ್ದಾರೆ ಇವರ ಕಷ್ಟಕ್ಕೆ ಮರುಗಿದ ವಿಜಯನಗರ ಪೊಲೀಸರು, 50 KG ಅಕ್ಕಿ, 10 KG ಬೇಳೆ, 5 KG ಗೋಧಿ ಹಿಟ್ಟು, 10 ಲೀಟರ್ ಎಣ್ಣೆ, ಮೈ ಸೋಪು, ಬಟ್ಟೆಸೋಪು,10 KG ಸಕ್ಕರೆ, 2 KG ಟೀಪುಡಿ, ಹಾಗೂ ದಂಪತಿಗಳಿಗೆ ಆರು ತಿಂಗಳ ಪುಟ್ಟ ಮಗು, ಹಾಗೂ ಎರಡು ವರ್ಷದ ಮಕ್ಕಳಿರುವ ಕಾರಣ, ಮಗುವಿಗೆ ಡೈಪರ್, ಗ್ರೈಪ್ ವಾಟರ್ ಮಕ್ಕಳಿಗೆ ಬೇಕಾದ ಔಷಧಗಳನ್ನೆಲ್ಲವನ್ನು ನೀಡಿ ಅಂಧ ದಂಪತಿಗಳಿಗೆ ನೆರವಾಗಿದ್ದಾರೆ.

Spread the love

Related Articles

Leave a Reply

Your email address will not be published.

Back to top button
Flash News