CORONA VIRUSMoreScroll

ಪರಪ್ಪನ ಅಗ್ರಹಾರದಲ್ಲಿ 2500 ಕ್ಕೂ ಹೆಚ್ಚು ಖೈದಿಗಳಿಗೆ ಕೋವಿಡ್ ವ್ಯಾಕ್ಸಿನ್..

ಸರ್ಕಾರ ಲಾಕ್‌ಡೌನ್ ಘೋಷಿಸಿರುವ ಹಿನ್ನಲೆ ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಸ್ವಲ್ಪ ಮಟ್ಟಿಗೆ ತಗ್ಗಿದೆ. ಅಲ್ಲದೇ ರಾಜ್ಯದಲ್ಲಿ ಎಲ್ಲರಿಗೂ ಲಸಿಕೆ ನೀಡುವ ಕೆಲಸ ಭರದಿಂದ ಸಾಗುತ್ತಿದೆ. ಇದೀಗ ಪರಪ್ಪನ ಅಗ್ರಹಾರದ 18 ರಿಂದ 44 ವರ್ಷ ವಯೋಮಾನದ ಖೈದಿಗಳಿಗೆ ಜೈಲಿನಲ್ಲಿ ಕೊವಿಡ್ ವ್ಯಾಕ್ಸಿನ್ ವಿತರಣೆ ಆರಂಭಿಸಲಾಗಿದೆ. ನ್ಯಾಯಾಧೀಶರು, ಸೆಂಟ್ರಲ್ ಜೈಲಿನ ಅಧಿಕಾರಿಗಳಿಂದ ಚಾಲನೆ ನೀಡಲಾಗಿದೆ.

ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿ 4,600 ಖೈದಿಗಳಿದ್ದು, 45 ವರ್ಷ ಮೇಲ್ಪಟ್ಟ 580 ಖೈದಿಗಳಿಗೆ ಈಗಾಗಲೇ ವ್ಯಾಕ್ಸೀನ್ ನೀಡಲಾಗಿದೆ. ಮುಂದೆ 4120 ಖೈದಿಗಳು ಮತ್ತು ವಿಚಾರಣಾಧೀನ ಖೈದಿಗಳಿಗೆ ಲಸಿಕೆ ನೀಡಲಾಗುತ್ತದೆ. ಪರಪ್ಪನ ಅಗ್ರಹಾರದಲ್ಲಿ ಸದ್ಯ ನೂರಕ್ಕೂ ಹೆಚ್ಚಿದ್ದ ಸೋಂಕಿನ ಪ್ರಮಾಣ ಧಿಡೀರ್ ಇಳಿಕೆ ಕಂಡಿದ್ದು, ಕೇವಲ 12 ಮಂದಿ ವಿಚಾರಣಾಧೀನ ಖೈದಿಗಳಲ್ಲಿ ಮಾತ್ರ ಸೋಕು ಪತ್ತೆಯಾಗಿದೆ.

ಇನ್ನು ಜೈಲಿನೊಳಗೆ ವಿಸಿಟರ್ಸ್ ಭೇಟಿಗೂ ಸಹ ಅಧಿಕಾರಿಗಳು ಬ್ರೇಕ್ ಹಾಕಿದ್ದಾರೆ. ಅಲ್ಲದೇ ಆರೋಪಿಗಳನ್ನ ಕರೆತರುವ ಪೊಲೀಸರಿಗೂ ಆರ್‌ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ಕಡ್ಡಾಯ ಮಾಡಿರುವುದು ಸೋಂಕು ಇಳಿಮುಖವಾಗಲು ಕಾರಣವಾಗಿದೆ. ಈ ಮೂಲಕ ಜೈಲಲ್ಲಿ ಸೋಂಕಿನ ಪ್ರಮಾಣ ಕಂಟ್ರೋಲ್ ತರುವಲ್ಲಿ ಜೈಲಾಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಸದ್ಯ ದೇಶ ಮತ್ತು ರಾಜ್ಯದಲ್ಲಿ ಲಸಿಕೆ ವಿತರಣೆ ವೇಗವಾಗಿ ನಡೆಯುತ್ತಿದ್ದು, ಲಸಿಕೆ ಕೊರತೆಯಿದೆ ಎಂಬ ದೂರುಗಳು ಸಹ ಕೇಳಿಬರುತ್ತಿವೆ.  ಮೇ ರಿಂದ ಕರ್ನಾಟಕದಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಆದ್ಯತಾ ವರ್ಗಕ್ಕೆ ಅನುಗುಣವಾಗಿ ಕೊವಿಡ್ ಲಸಿಕೆ ಹಾಕಲಾಗುತ್ತಿದೆ.

Spread the love

Related Articles

Leave a Reply

Your email address will not be published.

Back to top button
Flash News