CORONA LOCKDOWN HEROESCORONA VIRUSlock down

ಕೊರೊನಾ ಕಾಲದಲ್ಲಿ ಪ್ರಾಣಿಗಳ ನೆರವಿಗೆ ನಿಂತ ಕಾರವಾರದ ಸೇವಾ ಸಂಘ; ಹಸಿದ ಶ್ವಾನಗಳಿಗೆ ಊಟ ನೀಡಿ ಸಹಾಯ

ಕೊರೊನಾ ಎರಡನೇ ಅಲೆಯ ಪರಿಣಾಮ ತೀವ್ರವಾಗಿದ್ದು, ಪರಿಸ್ಥಿತಿಯನ್ನು ಸುಧಾರಿಸಲು ಸರ್ಕಾರ ಲಾಕ್​ಡೌನ್ ಜಾರಿ ಮಾಡಿದೆ ಇದರಿಂದಾಗಿ ಬಡವರು, ನಿರ್ಗತಿಕರು ನಿತ್ಯದ ಒಂದು ಹೊತ್ತಿನ ಊಟಕ್ಕೆ ಪರದಾಡುವಂತಾಗಿದೆ. ಇಂತಹವರ ನೆರವಿಗಾಗಿ ಧಾವಿಸಿದ ಅದೆಷ್ಟೋ ಘಟನೆಗಳ ಬಗ್ಗೆ ನಾವು ಓದಿದ್ದೇವೆ ಆದರೆ ಈ ಪ್ರಕೃತಿಯಲ್ಲಿರುವ ಪ್ರಾಣಿಪಕ್ಷಿಗಳ ಪರಿಸ್ಥಿತಿ ಈಗ ಚಿಂತಾಜನಕವಾಗಿದೆ. ಅಂಗಡಿಗಳು, ಹೊಟೇಲುಗಳು ಬಂದ್ ಆಗಿದ್ದರಿಂದ ಶ್ವಾನಗಳ ಪರಿಸ್ಥಿತಿ ಶೋಚನೀಯವಾಗಿದೆ. ಇದನ್ನು ಮನಗಂಡ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಸೇವಾ ಸಂಘವೊಂದು ಶ್ವಾನಗಳಿಗೆ ಆಹಾರ ನೀಡಿ ಮಾನವೀಯತೆ ಮೆರೆದಿದ್ದಾರೆ.

ಈಗಾಗಲೇ ಕರೋನಾ ನಿಯಂತ್ರಣದ ಸಲುವಾಗಿ ಕಟ್ಟುನಿಟ್ಟಿನ ಕ್ರಮ ಜಾರಿಯಲ್ಲಿದೆ. ಶ್ವಾನಗಳು ಮನುಷ್ಯ ನೀಡಿದ ಅನ್ನವನ್ನ ನಂಬಿಕೊಂಡಿವೆ. ಬೇರೆ ಪ್ರಾಣಿ ಪಕ್ಷಿಗಳಾದರೂ, ಬೇರೆ ಯಾವುದಾದರೂ ಆಹಾರವನ್ನಾದರೂ ಹುಡುಕಿ ತಿನ್ನಬಹುದು. ಆದರೆ ನಿಯತ್ತಿಗೆ ಹೆಸರಾದ ಶ್ವಾನಕ್ಕೆ ಮನುಷ್ಯ ಆಹಾರ ನೀಡಿದರಷ್ಟೆ ಅವುಗಳ ಹೊಟ್ಟೆ ತುಂಬಬಹುದು.

ಸರಿಯಾಗಿ ಆಹಾರ ಸಿಗದೆ ಶ್ವಾನಗಳು ಪರಿತಪಿಸುವ ದೃಶ್ಯ ಈಗ ಸಾಮಾನ್ಯವಾಗಿದೆ. ಹೀಗಾಗಿ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಗುರುಪದ್ಮನಾಭ ಸೇವಾ ಸಂಘ ಶ್ವಾನಗಳಿಗೆ ಆಹಾರ ನೀಡಲು ಮುಂದಾಗಿದೆ. ಆ ಮೂಲಕ ಕಾರವಾರ ನಗರದ ಬೀದಿಬದಿಗಳಲ್ಲಿರುವ ಶ್ವಾನಗಳಿಗೆ ಪ್ರತಿನಿತ್ಯ ಆಹಾರವನ್ನ ನೀಡಿ, ಶ್ವಾನ ಪ್ರೇಮ ಮೆರೆಯುತ್ತಿದ್ದಾರೆ.

ಇಂದು ಮನುಷ್ಯರಿಗೆ ಸರಿಯಾಗಿ ಊಟ ಸಿಗುತ್ತಿಲ್ಲ. ಅಂತದರಲ್ಲಿ ಪ್ರಾಣಿಗಳಿಗೆ ಆಹಾರ ಸಿಗುವುದು ಹೇಗೆ. ಹೀಗಾಗಿ ಸಂಘದ 22 ಜನರು ಸದಸ್ಯರು ಒಂದೊಂದು ವಸ್ತುವನ್ನ ಸಂಗ್ರಹಿಸಿ ಶ್ವಾನಗಳಿಗೆ ಆಹಾರ ತಯಾರಿಸುತ್ತಿದ್ದೇವೆ. ಮಧ್ಯಾಹ್ನ ಕಾರವಾರದ ವಿವಿಧ ಭಾಗಗಳಿಗೆ ಆಟೋದಲ್ಲಿ ಬಂದು ಆಹಾರ ನೀಡಿ, ಶ್ವಾನಗಳು ಆಹಾರಕ್ಕಾಗಿ ಪರಿತಪಿಸುವ ಸ್ಥಿತಿಯನ್ನು ತಪ್ಪಿಸುತ್ತಿದ್ದೇವೆ. ಇದರಿಂದ ನಮ್ಮ ಮನಸ್ಸಿಗೆ ಖುಷಿಯಾಗುತ್ತಿದೆ ಎಂದು ಗುರುಪದ್ಮನಾಭ ಸೇವಾ ಸಂಘದ ಸದಸ್ಯೆ ಸರಸ್ವತಿ ತಿಳಿಸಿದ್ದಾರೆ.

ಒಟ್ಟಿನಲ್ಲಿ ಕೊರೊನಾ ಸಂಕಷ್ಟದ ಈ ಕಾಲದಲ್ಲಿ ಇಡೀ ಮನುಕುಲವೇ ಸಂಕಷ್ಟದ ಸ್ಥಿತಿಯಲ್ಲಿವೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಬೀದಿ ಪ್ರಾಣಿಗಳಿಗೆ ಅನ್ನ ಆಹಾರವನ್ನ ನೀಡಿ ಮಾನವೀಯತೆ ಮೆರೆಯುತ್ತಿರುವುದು ನಿಜಕ್ಕೂ ಪ್ರಶಂಸನೀಯವಾಗಿದೆ

Spread the love

Related Articles

Leave a Reply

Your email address will not be published.

Back to top button
Flash News