MoreScrollTop News

ಮೈಸೂರು ಪಾಲಿಕೆ ಆಯುಕ್ತೆ ರಾಜೀನಾಮೆ, ರೋಹಿಣಿ ಸಿಂಧೂರಿ ವಿರುದ್ಧ ಗಂಭೀರ ಆರೋಪ

ಮೈಸೂರು: ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ರಾಜೀನಾಮೆ ನೀಡಿದ್ದಾರೆ. ರಾಜ್ಯದ ಮುಖ್ಯ ಕಾರ್ಯದರ್ಶಿಗೆ ರಾಜಿನಾಮೆ ಪತ್ರ ಬರೆದಿದ್ದು, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಟಾರ್ಚರ್‌ನಿಂದ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಪಾಲಿಕೆ‌ ಆಯುಕ್ತೆ ಶಿಲ್ಪಾ ನಾಗ್,  ತುಂಬಾ ನೋವಿನಲ್ಲಿಯೇ ನಾನು ಸುದ್ದಿಗೋಷ್ಠಿ ಮಾಡುತ್ತಿದ್ದೇನೆ. ಸೂಕ್ತವಾಗಿ ಕೊರೋನಾ ನಿರ್ವಹಣೆ ಮಾಡಿದ್ರೂ, ಪಾಲಿಕೆ ಕೆಲಸ ಮಾಡ್ತಿಲ್ಲ ಎಂದು ಬಿಂಬಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಗಂಭೀರ ಆರೋಪ ಮಾಡಿದರು

ಈ ರೀತಿಯ ಜಿಲ್ಲಾಧಿಕಾರಿ ಯಾವುದೇ ಜಿಲ್ಲೆಗೂ ಸಿಗಬಾರದು. ಟಾರ್ಗೆಟ್ ಮಾಡಿ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಜಿಲ್ಲಾಧಿಕಾರಿಗಳು ನಗರ ಪರಿಸ್ಥಿತಿಯನ್ನು ಗಲೀಜು ಎಬ್ಬಿಸುತ್ತಿದ್ದಾರೆ. ಯಾಕೆ ಈ ರೀತಿ ಹಠ ಮಾಡುತ್ತಿದ್ದಾಳೋ ಗೊತ್ತಿಲ್ಲ. ನಾನು 2014 ನೇ ಬ್ಯಾಚ್ ಅಧಿಕಾರಿ. ಅವರು 2009 ನೇ ಬ್ಯಾಚ್ ಅಧಿಕಾರಿ. ನನ್ನ ಮೇಲೆ ದ್ವೇಷ ಇದ್ರೆ ನನ್ನ ಮೇಲೆ ಸಾಧಿಸಲಿ. ಮೈಸೂರು ಜನರ ಮೇಲೆ ಅದು ಪರಿಣಾಮ ಬೀರುವುದು ಬೇಡ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಾನು ರಾಜೀನಾಮೆ ಕೊಟ್ಟು ಬೇರೆ ಜೀವನ ನಡೆಸುತ್ತೇನೆ‌. ಮೂರನೇ ಅಲೆಯಲ್ಲಿ ಮಕ್ಕಳಿಗೆ ಯಾವುದೇ ತೊಂದರೆ ಆಗೋದು ಬೇಡ ಅಂತ ಮಕ್ಕಳ ತಜ್ಞರನ್ನರನ್ನೂ ಒಳಗೊಂಡು ಕಾರ್ಯ ನಿರ್ವಹಣೆ ಮಾಡುತ್ತಿದ್ದೆವು‌. ನಿಮ್ಮ ದುರಂಹಕಾರ ಬಿಡದಿದ್ರೆ ಮೈಸೂರು ಬಿಡಿ. ಇಲ್ಲ ಅಂದ್ರೆ ನಾನು ಬಿಟ್ಟರೆ ಮೈಸೂರು ನಗರಕ್ಕೆ ಒಳ್ಳೆಯದು ಆಗುತ್ತದೆ ಅಂದ್ರೆ ನಾನು ಹೋಗುತ್ತೇನೆ. ಅವಾಗ್ಲಾದ್ರೂ ಮೈಸೂರು ನಗರ ಚೆನ್ನಾಗಿರಲಿ. ನಾನೇ ಸುಪ್ರೀಂ ಅಂತ ಅಧಿಕಾರಿಗಳ ಸಭೆಯಲ್ಲಿ ವರ್ತನೆ ಮಾಡುತ್ತಿದ್ದಾರೆ ಎಂದು ರೋಹಿಣಿ ಸಿಂಧೂರಿ ನಡೆಗೆ ಬೇಸರ ವ್ಯಕ್ತಪಡಿಸಿದರು

Spread the love

Related Articles

Leave a Reply

Your email address will not be published.

Back to top button
Flash News