Moreಸಿನೆಮಾ ಹಂಗಾಮ

ಹೇಗಿದೆ ‘ದಿ ಫ್ಯಾಮಿಲಿ ಮ್ಯಾನ್​ 2’? ಮೊದಲ ದಿನವೇ ವೆಬ್​ ಸಿರೀಸ್​ ನೋಡಿ ಫ್ಯಾನ್ಸ್​ ಫಿದಾ..

ಸಮಂತಾ ಅಕ್ಕಿನೇನಿ, ಮನೋಜ್​ ಬಾಜಪಾಯಿ​, ಪ್ರಿಯಾಮಣಿ ನಟನೆಯ ‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್​ ಸಿರೀಸ್​ ಬಿಡುಗಡೆ ಆಗಿದೆ. ಅಮೇಜಾನ್​ ಪ್ರೈಂ ವಿಡಿಯೋದಲ್ಲಿ ಗುರುವಾರ ಸಂಜೆಯೇ ವೀಕ್ಷಣೆಗೆ ಲಭ್ಯವಾಗಿದೆ. ಬಹಳ ದಿನಗಳಿಂದ ಈ ವೆಬ್​ ಸಿರೀಸ್​ಗಾಗಿ ಕಾದಿದ್ದ ಬಹುತೇಕರು ಒಂದೇ ಬಾರಿಗೆ ಎಲ್ಲ ಎಪಿಸೋಡ್​ಗಳನ್ನು ನೋಡಿ ಮುಗಿಸುತ್ತಿದ್ದಾರೆ. ಎಲ್ಲರಿಂದಲೂ ಪಾಸಿಟಿವ್​ ಪ್ರತಿಕ್ರಿಯೆಗಳು ಬರುತ್ತಿವೆ. ಮೊದಲ ಸೀಸನ್​ಗಿಂತಲೂ ಎರಡನೇ ಸೀಸನ್​ ಚೆನ್ನಾಗಿ ಮೂಡಿಬಂದಿದೆ ಎಂಬ ಅಭಿಪ್ರಾಯ ಕೇಳಿಬರುತ್ತಿದೆ. ಸೋಶಿಯಲ್​ ಮೀಡಿಯಾ ಮೂಲಕ ಪ್ರೇಕ್ಷಕರು ತಮ್ಮ ವಿಮರ್ಶೆ ತಿಳಿಸುತ್ತಿದ್ದಾರೆ.

ಇದೇ ಮೊದಲ ಬಾರಿಗೆ ‘ದಿ ಫ್ಯಾಮಿಲಿ ಮ್ಯಾನ್​ 2’ ಮೂಲಕ ಸಮಂತಾ ಅವರು ವೆಬ್​ ಸಿರೀಸ್​ ಲೋಕಕ್ಕೆ ಕಾಲಿಟ್ಟಿದ್ದು, ರಗಡ್​ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಅಭಿನಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. 9 ಎಪಿಸೋಡ್​ಗಳ ಈ ಸಿರೀಸ್​ನಲ್ಲಿ ಭರ್ಜರಿ ಆ್ಯಕ್ಷನ್​ ದೃಶ್ಯಗಳು ಕೂಡ ಇದೆ. ಒಟ್ಟಾರೆ ಈ ವೆಬ್​ ಸರಣಿ ಕಣ್ತುಂಬಿಕೊಂಡವರು ಒಂದೇ ಮಾತಿನಲ್ಲಿ ‘ಮಾಸ್ಟರ್​ಪೀಸ್​’ ಎಂದು ಹೊಗಳುತ್ತಿದ್ದಾರೆ.

ರಾಜ್​ ಮತ್ತು ಡಿಕೆ ಜೊತೆಯಾಗಿ ನಿರ್ದೇಶನ ಮಾಡಿರುವ ‘ದಿ ಫ್ಯಾಮಿಲಿ ಮ್ಯಾನ್​ 2’ ನಿರೂಪಣೆ ಬಿಗಿಯಾಗಿದೆ. ಪ್ರತಿ ಎಪಿಸೋಡ್​ ಕೂಡ ಥ್ರಿಲ್ಲಿಂಗ್​ ಆಗಿದೆ. ನೋಡುಗರನ್ನು ಸೆಳೆದುಕೊಳ್ಳುವ ಗುಣ ಇದಕ್ಕಿದೆ. ಸಾಹಸ ದೃಶ್ಯಗಳು ಮಾತ್ರವಲ್ಲದೆ ಕಾಮಿಡಿ ಸನ್ನಿವೇಶಗಳು ಕೂಡ ಇಲ್ಲಿನ ಪ್ಲಸ್​ ಪಾಯಿಂಟ್​. ಕಥೆ ಕೂಡ ಕುತೂಹಲ ಭರಿತವಾಗಿದೆ ಎಂದು ಪ್ರೇಕ್ಷಕರು ಅನಿಸಿಕೆ ಹಂಚಿಕೊಂಡಿದ್ದಾರೆ.

ಮೊದಲ ಸೀಸನ್​ ರೀತಿಯೇ ಎರಡನೇ ಸೀಸನ್​ನಲ್ಲೂ ನಟ ಮನೋಜ್​ ಬಾಜಪಾಯಿ​ ಮೋಡಿ ಮಾಡಿದ್ದಾರೆ. ತನಿಖಾಧಿಕಾರಿಯಾಗಿ ಮತ್ತು ಫ್ಯಾಮಿಲಿ ಮ್ಯಾನ್​ ಆಗಿ ಅವರ ನಟನೆಗೆ ಪ್ರೇಕ್ಷಕರು ಫಿದಾ ಆಗುತ್ತಿದ್ದಾರೆ. ‘6ರಿಂದ 9ನೇ ಎಪಿಸೋಡ್​ವರೆಗೆ ವೇಗದ ನಿರೂಪಣೆ ಇದೆ. ಮನೋಜ್​ ಬಾಯಪಾಯಿ ನಿಜವಾಗಿಯೂ ಲೆಜೆಂಡ್​. ಅವರನ್ನು ನಾವು ಇನ್ನಷ್ಟು ಪ್ರೀತಿಸಬೇಕಿದೆ’ ಎಂದು ಅಭಿಮಾನಿಯೊಬ್ಬರು ಮೆಚ್ಚುಗೆ ಸೂಚಿಸಿದ್ದಾರೆ.

ಇಷ್ಟು ದಿನಗಳ ಕಾಲ ಸಮಂತಾ ಅವರನ್ನು ಬೇರೆ ಬೇರೆ ಪಾತ್ರಗಳಲ್ಲಿ ನೋಡಿದ್ದ ಪ್ರೇಕ್ಷಕರಿಗೆ ‘ದಿ ಫ್ಯಾಮಿಲಿ ಮ್ಯಾನ್​ 2’ನಲ್ಲಿ ಸರ್ಪ್ರೈಸ್​ ಸಿಕ್ಕಿದೆ. ಸಿಕ್ಕಾಪಟ್ಟೆ ರಫ್​ ಆ್ಯಂಡ್​ ಟಫ್​​ ಆದಂತಹ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ವೆಬ್​ ಸಿರೀಸ್​ ಲೋಕಕ್ಕೆ ಕಾಲಿಡುತ್ತಲೇ ಅವರು ಸಿಕ್ಕಾಪಟ್ಟೆ ಧೂಳೆಬ್ಬಿಸಿದ್ದಾರೆ

Spread the love

Related Articles

Leave a Reply

Your email address will not be published.

Back to top button
Flash News