CORONA LOCKDOWN HEROESCORONA VIRUSMore

ಹಾಸನ ಜಿಲ್ಲೆಯ ಐದು ಆಸ್ಪತ್ರೆಗಳಿಗೆ ಒಬ್ಬರೇ ಡಾಕ್ಟರ್.. ನೂರಾರು ರೋಗಿಗಳ ಆರೈಕೆಯಲ್ಲಿ ನಿರತರಾಗಿರುವ ಡಾ.ಮಧುಸೂಧನ್..

ಹಾಸನ: ಕೊರೊನಾ ಎರಡನೇ ಅಲೆ ಪ್ರಾರಂಭವಾದ ದಿನದಿಂದ ಒಂದಿಲ್ಲಾ ಒಂದು ಸಮಸ್ಯೆ ಇದ್ದೇ ಇದೆ. ಅದರಲ್ಲೂ ಕೊರೊನಾ ನಗರಗಳಿಂದ ಹಿಡಿದು ಹಳ್ಳಿಗಳ ವರೆಗೆ ಹಬ್ಬಿದು ಜನರು ಕಂಗಾಲಾಗಿದ್ದಾರೆ. ಹೀಗಾಗಿ ಕೊರೊನಾ ತಡೆಗೆ ಸರ್ಕಾರ ಇನ್ನಿಲ್ಲದ ಕಸರತ್ತು ಮಾಡುತ್ತಿದೆ. ವೈದ್ಯರು ಮತ್ತು ಸಿಬ್ಬಂದಿಗಳ ಕೊರತೆ, ವೆಂಟಿಲೇಟರ್​, ಆಕ್ಸಿಜನ್ ಹೀಗೆ ಹತ್ತಾರು ಸಮಸ್ಯೆಗಳನ್ನು ನಿಗಿಸಲು ಪ್ರಯತ್ನಪಡುತ್ತಿದೆ. ಆದರೆ ಇನ್ನು ಕೂಡ ಈ ಸಮಸ್ಯೆಗಳು ಪರಿಹಾರವಾಗಿಲ್ಲ ಎನ್ನುವುದಕ್ಕೆ ಸಾಕಷ್ಟು ನಿದರ್ಶನಗಳಿದೆ. ಈಗ ಮತ್ತೊಮ್ಮೆ ಈ ವಿಷಯ ಸಾಭೀತಾಗಿದ್ದು, ಹಾಸನ ಜಿಲ್ಲೆಯ 5 ಆಸ್ಪತ್ರೆಗಳಿಗೆ ಒಬ್ಬರೆ ವೈದ್ಯರು ಇರುವುದು ಬೆಳಕಿಗೆ ಬಂದಿದೆ. ಆದರೆ ನೂರಾರು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಈ ವೈದ್ಯರು ಮಾತ್ರ ಇದನ್ನು ಸವಾಲಾಗಿ ತೆಗೆದುಕೊಂಡಿದ್ದು, ಇತರರಿಗೆ ಮಾದರಿಯಾಗಿದ್ದಾರೆ.

ಹಾಸನ ಜಿಲ್ಲೆ ಸಕಲೇಶಫುರ ತಾಲ್ಲೂಕಿನ ಕೂಡುರಸ್ತೆ ಸರ್ಕಾರಿ ಪ್ರಾಥಮಿಕ ಆಸ್ಪತ್ರೆಗೆ ನೇಮಕಾರಿಯಾಗಿರುವ ಯುವ ವೈದ್ಯ ಡಾ.ಮಧುಸೂಧನ್, ಹೆತ್ತೂರು, ಚಂಗಡಿಹಳ್ಳಿ, ಶುಕ್ರವಾರ ಸಂತೆ, ಅತ್ತಿಹಳ್ಳಿ ಪ್ರಾಥಮಿಕ ಆಸ್ಪತ್ರೆಗೂ ಇವರೇ ವೈದ್ಯರಾಗಿದ್ದಾರೆ. ನಿತ್ಯವೂ ಎಲ್ಲೆಡೆ ಸುತ್ತಾಡಿ ಎಲ್ಲರಿಗೂ ಚಿಕಿತ್ಸೆ ನೀಡುತ್ತಾ ಸೇವೆ ಸಲ್ಲಿಸುತ್ತಿದ್ದಾರೆ. ಇನ್ನು ಕೊರೊನಾ ಸೋಂಕಿನಿಂದಾಗಿ ಮನೆಯಲ್ಲಿರುವ ಹಳ್ಳಿ ಜನರನ್ನೂ ಭೇಟಿಯಾಗಿ ಮನೋಸ್ಥೈರ್ಯ ತುಂಬುತ್ತಾ ಎಲ್ಲರ ಮನ ಗೆದ್ದಿದ್ದಾರೆ.

ವೈದ್ಯ ಡಾ.ಮಧುಸೂಧನ್ ಕೆಲಸ ಮಾಡುವ ಐದು ಪಿಎಚ್​ಸಿ ವ್ಯಾಪ್ತಿಯಲ್ಲಿ ಸಾವಿರ ಸೋಂಕಿತರಿದ್ದರೂ ಎದೆಗುಂದದೆ, ಎಲ್ಲರಿಗೂ ಧೈರ್ಯಹೇಳಿ, ಎಲ್ಲರನ್ನೂ ಅಪಾಯದಿಂದ ಪಾರುಮಾಡಿ ಸಾವಿನ ಸಂಖ್ಯೆಯನ್ನು ಕಡಿಮೆ ಮಾಡಿದ್ದಾರೆ. ತಮ್ಮ ವ್ಯಾಪ್ತಿಯಲ್ಲಿರುವ ಆಸ್ಪತ್ರೆಯ ಸಿಬ್ಬಂದಿ, ನರ್ಸ್, ಟೆಕ್ನೀಷಿಯನ್ಸ್​ರ ತಂಡ ಮಾಡಿಕೊಂಡು ಎಲ್ಲರನ್ನು ಹುರಿದುಂಬಿಸಿ ಜನರನ್ನು ಅಪಾಯದಿಂದ ಪಾರುಮಾಡುವುದಕ್ಕೆ ಮಧುಸೂಧನ್ ದಿನನಿತ್ಯ ಪ್ರಯತ್ನ ಪಡುತ್ತಿದ್ದಾರೆ.

ನಿತ್ಯ ಬೆಳಿಗ್ಗೆ ಒಂದು ಆಸ್ಪತ್ರೆಯಿಂದ ಕರ್ತವ್ಯ ಆರಂಭಿಸಿ, ಒಂದೊಂದು ಆಸ್ಪತ್ರೆಯಲ್ಲಿ ಒಂದೊಂದು ಸಮಯದಲ್ಲಿ ರೋಗಿಗಳಿಗೆ ತಪಾಸಣೆ ನಡೆಸಲಾಗುತ್ತದೆ. ಅಲ್ಲೇ ಎಲ್ಲಾ ಪರೀಕ್ಷೆ ಮಾಡಿಸಿ ಕೊರೊನಾ ಲಕ್ಷಣಗಳಿದ್ದರೆ ಕೊವಿಡ್ ಪರೀಕ್ಷೆ ಮಾಡಲಾಗುತ್ತದೆ. ಇಲ್ಲವಾದರೆ ಅಲ್ಲೇ ಚಿಕಿತ್ಸೆ ಕೊಟ್ಟು, ಲಕ್ಷಣಗಳಿರುವವರಿಗೆ ಕೌನ್ಸಿಲಿಂಗ್ ನೀಡಿ ಧೈರ್ಯ ತುಂಬಲಾಗುತ್ತದೆ ಎಂದು ವೈದ್ಯ ಡಾ. ಮಧುಸೂಧನ್ ತಿಳಿಸಿದ್ದಾರೆ.

ಔಷದಿ ಕೊಡೋದು, ಪರೀಕ್ಷಾ ವರದಿ ಬರುತ್ತಲೆ ಅದು ಪಾಸಿಟೀವ್ ಆಗಿದ್ದರೆ ನಿರಂತರವಾಗಿ ಆಶಾ ಕಾರ್ಯಕರ್ತೆ, ದಾದಿಯರ ಮೂಲಕ ಮಾನೀಟರ್ ಮಾಡಿಸೋದು, ಹಗಲು ರಾತ್ರಿ ಎನ್ನದೆ ಎಲ್ಲರಿಗೂ ಲಭ್ಯರಾಗಿ ಎಲ್ಲರ ಆರೈಕೆ ಮಾಡುವತ್ತ ಡಾ. ಮಧುಸೂಧನ್ ಗಮನ ಹರಿಸುತ್ತಿದ್ದಾರೆ.

Spread the love

Related Articles

Leave a Reply

Your email address will not be published.

Back to top button
Flash News