CORONA LOCKDOWN HEROESCORONA VIRUSKANNADAFLASHNEWSFIGHTAGAINSTCORONAlock downMoreScrollTop NewsUncategorizedಕ್ರೈಮ್ /ಕೋರ್ಟ್ಜಿಲ್ಲೆಫೋಟೋ ಗ್ಯಾಲರಿಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP)ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(BDA)ಮಾಹಿತಿ/ತಂತ್ರಜ್ಞಾನರಾಜಕೀಯರಾಜ್ಯ-ರಾಜಧಾನಿ

ಸಂಬಂಧಿ ಮೇಲಿನ ವ್ಯಾಮೋಹಕ್ಕೆ ನಿಯಮ ಉಲ್ಲಂಘಿಸಿದ್ರಾ ಸಚಿವ ಅಶೋಕ್- ಕೋರ್ಟ್ ಕೆಂಗಣ್ಣಿಗೆ ಗುರಿಯಾದ “ಬೈಯಪಾ” ಅಧ್ಯಕ್ಷ ನೇಮಕ ವಿವಾದ..

ಕಂದಾಯ ಸಚಿವ ಆರ್.ಅಶೋಕ್ ಅವರ ಸಂಬಂಧಿ ಬೈಯಪಾ ಅಧ್ಯಕ್ಷ ಎಸ್.ರವಿ
ಕಂದಾಯ ಸಚಿವ ಆರ್.ಅಶೋಕ್ ಅವರ ಸಂಬಂಧಿ ಬೈಯಪಾ ಅಧ್ಯಕ್ಷ ಎಸ್.ರವಿ

ಬೆಂಗಳೂರು:ಲಾಕ್ ಡೌನ್ ಸನ್ನಿವೇಶದಲ್ಲಿ ಇಂತದ್ದೊಂದು ಬೆಳವಣಿಗೆ ಸರ್ಕಾರಕ್ಕೆ ನಿಜಕ್ಕೂ ಬೇಕಿತ್ತಾ..? ಬೇಕಿಲ್ಲ ಎನಿಸುತ್ತದೆ.ಲಾಕ್ ಡೌನ್ ನಡುವೆ ಜನರು ತಲೆ ಕೆಡಿಸಿಕೊಳ್ಳೊಲ್ಲ ಎಂಬ ಆಲೋಚನೆಯಲ್ಲಿ ಮಾಡಿರೋ ನೇಮಕಾತಿ ಇದೀಗ ಗೊಂದಲದ ಗೂಡಾಗಿ ಬಿಟ್ಟಿದೆ. ಹೈಕೋರ್ಟ್ ಮೆಟ್ಟಿಲನ್ನು ಏರಿರುವ ಪ್ರಕರಣದಲ್ಲಿ ನ್ಯಾಯಮೂರ್ತಿಗಳು ಕೂಡ ಗರಂ ಆಗಿದ್ದು ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

‘ಬೈಯಪಾ’ ಇದು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರ.ಈ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ನಡೆದಿರುವ  ನೇಮಕಾತಿಯೇ ಇವತ್ತು ವಿವಾದಸೃಷ್ಟಿಸಿದೆ.ಹಾಗೆಯೇ ಸರ್ಕಾರದ ಇಬ್ಬರು ಪ್ರಭಾವಿ ನಾಯಕರನ್ನು ಕೋರ್ಟ್ ಕಟಕಟೆಯಲ್ಲಿ ನಿಲ್ಲುವಂತೆ ಮಾಡಿದೆ.ಅಂದ್ಹಾಗೆ ಇಂತದ್ದೊಂದು ವಿಷಯದ ಮೇಲೆ ಬೆಳಕು ಚೆಲ್ಲಿ ಕೋರ್ಟ್ ನಲ್ಲಿ ಪಿಐಎಲ್ ದಾಖಲಿಸಿರೋದು ಸಾಮಾಜಿಕ ಕಾರ್ಯಕರ್ತ ನರಸಿಂಹಮೂರ್ತಿ.

ಬೈಯಪಾ ಅಧ್ಯಕ್ಷ ಸ್ಥಾನಕ್ಕೆ ನಿಯೋಜಿಸಲ್ಪಟ್ಟಿರುವ  ಎಸ್.ರವಿ  ಕಂದಾಯ ಸಚಿವ ಆರ್.ಅಶೋಕ್ ಅವರ ಸಂಬಂಧಿ ಎನ್ನುವುದು ಪ್ರಕರಣ ಗಂಭೀರತೆ ಪಡೆದುಕೊಳ್ಳೊಕ್ಕೆ ಕಾರಣ ಎನ್ನಲಾಗ್ತಿದೆ.ಅಶೋಕ್ ಅವರ ಬೆನ್ನಿಗೆ ಬಿಡಿಎ ಅಧ್ಯಕ್ಷ ಹಾಗೂ ಯಲಹಂಕ ಶಾಸಕ ಎಸ್.ಆರ್.ವಿಶ್ಚನಾಥ್ ನಿಂತಿರೋದು ಕೂಡ ಸಾಕಷ್ಟು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.

ಎಸ್.ರವಿ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ಕುರಿತು ಹೈಕೋರ್ಟ್ ಸಚಿವ ಆರ್.ಅಶೋಕ್ ಮತ್ತು ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್ ಅವರನ್ನು ಪ್ರತಿವಾದಿಯನ್ನಾಗಿ ಮಾಡಲು ಸೂಚಿಸಿದೆ.ನಿಗದಿತ ಶೈಕ್ಷಣಿಕ ಅರ್ಹತೆ ಇಲ್ಲದಿದ್ದರೂ ಕೇವಲ ಕಂದಾಯ ಸಚಿವ ಆರ್.ಅಶೋಕ್‌ರವರ ಸಂಬಂಧಿ ಅನ್ನೋ ಒಂದೇ ಕಾರಣಕ್ಕೆ ರವಿ ಅವರನ್ನು ನೇಮಕ ಮಾಡಲಾಗಿದೆ ಎನ್ನುವುದು ಆರ್‌ಟಿಐ ಕಾರ್ಯಕರ್ತ ಟಿ.ನರಸಿಂಹಮೂರ್ತಿ ಅವರ ಆರೋಪ.

ಸಾಮಾಜಿಕ ಕಾರ್ಯಕರ್ತ ನರಸಿಂಹಮೂರ್ತಿ.
ಸಾಮಾಜಿಕ ಕಾರ್ಯಕರ್ತ ನರಸಿಂಹಮೂರ್ತಿ.

ಪ್ರಾಧಿಕಾರದ ಅಧ್ಯಕ್ಷರಾಗಿರುವ ರವಿ ಕೇವಲ ಪಿಯುಸಿವರೆಗೂ ಓದಿದ್ದೂ ಪದವಿ ಕೂಡ ಪೂರೈಸಿಲ್ಲ, ಆದ್ರೂ ಸಿಎಂ ಮತ್ತು ಅಶೋಕ್ ಪ್ರಭಾವ ಬಳಸಿ ಉನ್ನತ ಹುದ್ದೆಯನ್ನು ಪಡೆದುಕೊಂಡಿದ್ದಾರೆ ಎಂದು ಅರ್ಜಿದಾರರು ಆರೋಪಿಸಿದ್ದರು.

ಆ ಅರ್ಜಿಯನ್ನು ಸಿಜೆ.ಎ.ಎಸ್ ಓಕ್ ನೇತೃತ್ವದ ವಿಭಾಗೀಯ ಪೀಠ ನಿನ್ನೆ ವಿಚಾರಣೆ ನಡೆಸಿತು.ವಿಚಾರಣೆ ವೇಳೆ, ನ್ಯಾಯಪೀಠವು ‘ಸಚಿವ ಆರ್.ಅಶೋಕ್ ಮತ್ತು ಶಾಸಕ.ಆರ್.ವಿಶ್ವನಾಥ್ ರವರ ಶಿಫಾರಸು ಪತ್ರವನ್ನಾಧರಿಸಿ, ರವಿ ಅವರ ನೇಮಕ ಮಾಡಿದ್ದಾರೆ.

ರಾಜಕಾರಣಿಗಳ ಶಿಫಾರಸಿನ ಮೇಲೆ ರವಿ ಅವರನ್ನ ನೇಮಕ ಮಾಡಲಾಗಿದ್ದು, ಅಧ್ಯಕ್ಷ ಹುದ್ದೆಗೆ ಅವರೊಬ್ಬರ ಹೆಸರನ್ನೇ ಯಾಕೆ ಶಿಫಾರಸು ಮಾಡಲಾಗಿದೆ ಎಂದು ಪ್ರಶ್ನಿಸಿತು.ಸರ್ಕಾರದ ನೇಮಕಾತಿ ಮಾನದಂಡಗಳ ಬಗ್ಗೆ ಬೇಸರ ವ್ಯಕ್ತಪಡಿಸಿತು.

ಬೈಪಾಗೆ ಅಧ್ಯಕ್ಷರನ್ನಾಗಿ ಮಾಡುವ ವೇಳೆ ರವಿ ಅವರನ್ನು ಬಿಟ್ಟು ಬೇರೆ ಯಾರೂ ಕಾಣಲಿಲ್ವೇ..ನೇಮಕಾತಿ ಮಾನದಂಡಗಳನ್ನೇಕೆ ಅನುಸರಿಸಿಲ್ಲ ಎಂದು ಪ್ರಶ್ನಿಸಿದ ಮುಖ್ಯ ನ್ಯಾಯಮೂರ್ತಿ ಓಕಾ,ಎಸ್.ರವಿ ಅವರ ಬದಲು  ಅರ್ಹತೆ ಇರೋರು ಬೇರ‍್ಯಾರೂ ಇರ‍್ಲಿಲ್ವಾ? ನೇಮಕಕ್ಕೆ ಬೇಕಾದ ಅರ್ಹತೆ, ಪ್ರಕ್ರಿಯೆ ಯಾವುದೂ ಅನ್ವಯವಾಗುವುದಿಲ್ವೇ ಎಂದು ಪ್ರಶ್ನಿಸಿದರು.ಅಲ್ಲದೇ, ರವಿ ಅವರನ್ನು ಶಿಫಾರಸು ಮಾಡಿರುವ ರಾಜಕಾರಣಿಗಳು ಈ ಬಗ್ಗೆ ಏನ್ ಹೇಳ್ತಾರೆ ಅಂತ ಕೇಳಬೇಕಿರುವುದರಿಂದ, ಆ ಇಬ್ಬರನ್ನು ಪ್ರತಿವಾದಿಯನ್ನಾಗಿ ಮಾಡಬೇಕು ಅಂದು ಅಭಿಪ್ರಾಯ ಪಟ್ಟರು.

ಸಚಿವ ಆರ್.ಅಶೋಕ್ ಹಾಗೂ ವಿಶ್ವನಾಥ್ ಅವರನ್ನು ಪ್ರತಿವಾದಿ ಮಾಡಿ ಎರಡು ವಾರದಲ್ಲಿ ತಿದ್ದುಪಡಿಯ ಅರ್ಜಿ ಸಲ್ಲಿಸಲು ಸೂಚಿಸಿ ನ್ಯಾಯಪೀಠ ವಿಚಾರಣೆಯನ್ನು ಮುಂದೂಡಿದೆ.ತಮ್ಮ ಸಂಬಂಧಿ ಮೇಲಿನ ಪ್ರೀತಿಗೆ ಸಿಲುಕಿ ಸಚಿವ ಆರ್.ಅಶೋಕ್ ನಿಯಮ ಉಲ್ಲಂಘಿಸಿದ್ರಾ? ಅಶೋಕ್ ಬೆನ್ನಿಗೆ ನಿಂತು ಎಸ್.ಆರ್. ವಿಶ್ವನಾಥ್ ನಿಯಮ ಉಲ್ಲಂಘಿಸೋಕೆ ಕಾರಣರಾದ್ರಾ ..? ಎನ್ನುವಂತಾಗಿದೆ.

ಈ ಬಗ್ಗೆ ಅರ್ಜಿದಾರ ನರಸಿಂಹಮೂರ್ತಿ ಕನ್ನಡ ಫ್ಲಾಶ್ ನ್ಯೂಸ್ ಗೆ ಮಾಹಿತಿ ನೀಡಿದ್ದು ಆರ್.ಅಶೋಕ್ ಸಂಬಂಧಿ ಎನ್ನುವುದನ್ನು ಬಿಟ್ಟರೆ ಎಸ್.ರವಿ ಅವರಿಗೆ ಅಧ್ಯಕ್ಷರಾಗೊಕ್ಕೆ ಯಾವುದೇ ರೀತಿಯ ಅರ್ಹತೆಗಳಿಲ್ಲ.ನೇಮಕಾತಿ ಸಂಬಂಧ ಇರುವ ಎಲ್ಲಾ ಮಾನದಂಡವನ್ನು ಸರ್ಕಾರ ಉಲ್ಲಂಘಿಸಿದೆ.ಶಿಫಾರಸ್ಸು ಪತ್ರಗಳನ್ನು ಬ್ಲೈಂಡ್ ಆಗಿ ನಂಬಿ ನೇಮಕಾತಿ ಮಾಡುವ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಅವರೂ ವಿವಾದಕ್ಕೆ ಸಿಲುಕಿದ್ದಾರೆ ಎಂದು ತಿಳಿಸಿದ್ದಾರೆ.

ಆದ್ರೆ ನಿಗಮ ಮಂಡಳಿಗಳ ಅಧ್ಯಕ್ಷಗಾಧಿ ನೇಮಕಾತಿಗೆ ಸಂಬಂಧಿಸಿದಂತೆ ಸರ್ಕಾರದ ಕರ್ನಾಟಕ ಟೌನ್ ಅಂಡ್ ಕಂಟ್ರಿ ಪ್ಲಾನಿಂಗ್ ಆಕ್ಟ್ 1961 ರಲ್ಲಿ ಅಧ್ಯಕ್ಷಗಾದಿಗೆ ಇಂತಿಷ್ಟೇ ವಿದ್ಯಾರ್ಹತೆ ಎನ್ನುವುದರ ಉಲ್ಲೇಖವಿಲ್ಲ.ಹಾಗಾಗಿ ನರಸಿಂಹಮೂರ್ತಿ ಅವರ ವಾದದಲ್ಲಿ ಹುರುಳಿಲ್ಲ ಎನ್ನೋದು ಆರ್ ಟಿ ಐ ಕಾರ್ಯಕರ್ತ ಅಮರೇಶ್ ವಾದ.

ವಾದ ಏನೇ ಇರಲಿ, ಎಸ್ ರವಿ ಅವರ ನೇಮಕಾತಿ ವಿಚಾರವನ್ನು ಕೋರ್ಟ್ ಗಂಭೀರವಾಗಿ ಪರಿಗಣಿಸಿರುವುದಷ್ಟೇ ಅಲ್ಲ, ಅಶೋಕ್ ಹಾಗೂ ವಿಶ್ವನಾಥ್ ಅವರನ್ನು ಪ್ರತಿವಾದಿಗಳನ್ನಾಗಿಸಿರುವುದರಿಂದ ಪ್ರಕರಣ ಗಂಭೀರ ತಿರುವು ಪಡೆದುಕೊಂಡಿದೆ.

Spread the love

Related Articles

Leave a Reply

Your email address will not be published.

Back to top button
Flash News