MoreScrollTop NewsUncategorizedಕ್ರೈಮ್ /ಕೋರ್ಟ್

ಅರ್ಧಗಂಟೆ ಜಾಹೀರಾತು ನೋಡಿದ್ರೆ ಹಣ ಸಂಪಾದನೆಯ ಆಮಿಷ: ಸಿಸಿಬಿ ಪೊಲೀಸರಿಂದ ಆರೋಪಿ ಕೆ.ವಿ.ಜಾನಿ ಅರೆಸ್ಟ್..

ಬೆಂಗಳೂರು: ಅರ್ಧಗಂಟೆ ಜಾಹಿರಾತು ನೋಡಿದರೆ ದಿನಕ್ಕೆ 240 ರೂಪಾಯಿ ಹಣ ಬರುತ್ತೆ ಎಂದು ಆನ್​ಲೈನ್​ನಲ್ಲಿ ಹೂಡಿಕೆ ಮಾಡಿಸಿ ವಂಚನೆ ಮಾಡುತ್ತಿದ್ದ ಆರೋಪಿಯನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಅರ್ಧ ಗಂಟೆ ಜಾಹಿರಾತು ನೋಡಿದ್ರೆ ಹಣ ಬರುತ್ತೆ ಎಂದು ಚೈನ್ ಲಿಂಕ್ ರೀತಿಯಲ್ಲಿ ಆನ್​​ಲೈನ್ ಮುಖಾಂತರ ವಂಚನೆಯ ಜಾಲ ಹೆಣೆದಿದ್ದ ಖದೀಮನನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ. ‘ಅಡ್ವರ್​ಟೈಸ್​ಮೆಂಟ್ ಪ್ರಾಜೆಕ್ಟ್’ ಎಂದು ಹೇಳಿ ಸುಮಾರು ನಾಲ್ಕು ಲಕ್ಷ ಜನರಿಂದ ಹಣ ಹೂಡಿಕೆ ಮಾಡಿಸಿಕೊಂಡು ಧೋಖಾ ಮಾಡುತ್ತಿದ್ದ ಕೆ.ವಿ.ಜಾನಿ ಬಂಧಿತ ವ್ಯಕ್ತಿ. Www.jalilifestyle.com ಎಂಬ ವೆಬ್​ಸೈಟ್ ಮುಖಾಂತರ ಈತ ಮೋಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

ಪ್ರಾಮಾಣಿಕವಾಗಿ ದುಡಿಯುವ ಹಾದಿಯ ಬಗ್ಗೆ ಜನರು ನಂಬುವುದಿಲ್ಲ. ಆದರೆ, ಅತಿ ಸುಲಭವಾಗಿ ದುಡಿಮೆ ಮಾಡುವ ಹಾದಿ ಹುಡುಕುವ ಮಂದಿ ಬ್ಲೇಡ್ ಸ್ಕೀಮ್ ಗಳ ಅಮಿಷೆಗಳಿಗೆ ಒಳಗಾಗಿ ನಾಮ ಹಾಕಿಸಿಕೊಳ್ಳುವ ಜನರು ಕಡಿಮೆ ಏನಿಲ್ಲ. ಕೆ.ವಿ. ಜಾನಿ ‘ಜಾಲಿಲೈಫ್ ಸ್ಟೈಲ್.ಕಾಮ್’ ನ ನಿರ್ದೇಶಕ. ಮೆ. ಜೆಎಎ ಲೈಫ್ ಸ್ಟೈಲ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಎಂಬ ಕಂಪನಿಯನ್ನು ಬಸವೇಶ್ವರನಗರದ ಕೆಎಚ್ ಬಿ ಕಾಲೋನಿಯಲ್ಲಿ ನೋಂದಣಿ ಮಾಡಿಸಿದ್ದ.

ಈ ಕಂಪನಿ ಹೆಸರಿನಲ್ಲಿ ಕಚೇರಿ ತೆರೆದಿದ್ದ ಜಾನಿ, jaalifestyle.com ಎಂಬ ಅಂತರ್ಜಾಲ ತಾಣವನ್ನು ತೆರೆದು 2021 ರಲ್ಲಿ ಜಾಹೀರಾತು ಪ್ರಾಜೆಕ್ಟ್ ಪರಿಚಯಿಸಿದ್ದ. ಈ ಕುರಿತು ಹಲವಾರು ಕಂಪನಿಗಳ ಜಾಹೀರಾತು ಪ್ರದರ್ಶನ ಕುರಿತು ಒಡಂಬಡಿಕೆ ಮಾಡಿಕೊಂಡಿದ್ದ.

ಮೆ. ಜೆಎಎ ಲೈಫ್‌ ಸ್ಟೈಲ್ ಕಂಪನಿಯ ಜಾಹೀರಾತು ಪ್ರಾಜೆಕ್ಟ್ ಹೆಸರಿನಲ್ಲಿ ಸಾರ್ವಜನಿಕರಿಂದ 1109 ರೂಪಾಯಿ ನೀಡಿ ಸದಸ್ಯತ್ವ ಪಡೆದುಕೊಂಡರೆ ತಿಂಗಳಿಗೆ 7200 ರೂಪಾಯಿ ವರ್ಷಕ್ಕೆ 86,400 ರೂಪಾಯಿ ದುಡಿಯಬಹುದು ಎಂದು ಜಾನಿ‌ ಆಮಿಷ ಒಡ್ಡುತ್ತಿದ್ದು, ಅದೇ ರೀತಿ ಒಬ್ಬ ಸದ್ಯಸ್ಯ 10 ಜನರನ್ನ ಸದ್ಯಸ್ಯರನ್ನಾಗಿ ಸೇರಿಸಬೇಕು ಎಂದು ಮೋಸ ಮಾಡುತ್ತಿದ್ದ.

ಇನ್ನು ಒಬ್ಬರನ್ನು ಸದ್ಯಸರನ್ನಾಗಿ ಮಾಡಿಸಿದರೆ 4400 ರೂಪಾಯಿ ಲಾಭ ಸಿಗುತ್ತದೆ ಎಂದು ಆಮಿಷ ಒಡ್ಡಿದ ಕೆ. ವಿ. ಜಾನಿ‌ ಅದೇ ರೀತಿ 1 ಲಕ್ಷ ಸದಸ್ಯರನ್ನಾಗಿ ಮಾಡಿದರೆ 356 ಕೋಟಿ ಹಣ ಗಳಿಸಬಹುದೆಂದು ಚೈನ್ ಲಿಂಕ್ ರೀತಿಯಲ್ಲಿ ಆನ್ ಲೈನ್ ಮುಖಾಂತರ ವಂಚನೆ ನಡೆಸುತ್ತಿದ್ದ. ಇದೇ ರೀತಿ ನಾಲ್ಕು ಲಕ್ಷ ಜನರಿಂದ ಹಣವನ್ನು ಹೂಡಿಕೆ ಮಾಡಿಕೊಂಡು ಅಡ್ವೈಟೈಸ್ಮೆಂಟ್ ಪ್ರಾಜೆಕ್ಟ್ ಎಂದು ಹೇಳಿ ಜನರಿಗೆ ಮೋಸ ಮಾಡಿದ್ದ. ಸದ್ಯ ವಂಚನೆಗೆ ಒಳಗಾದವರಿಂದ ನಿರಂತರ ದೂರು ದಾಖಲಾದ ಹಿನ್ನಲೆ ಸಿಸಿಬಿ ಪೊಲೀಸರು ಆರೋಪಿ ಜಾನಿಯನ್ನು ಬಂಧಿಸಿದ್ದಾರೆ

Spread the love

Related Articles

Leave a Reply

Your email address will not be published.

Back to top button
Flash News