CORONA LOCKDOWN HEROESCORONA VIRUSlock downಸಿನೆಮಾ ಹಂಗಾಮ

ಸಂಕಷ್ಟದಲ್ಲಿರುವ‌ ಸಿನಿ ಕಾರ್ಮಿಕರ ಸಹಾಯಕ್ಕೆ ನಿಂತ ಅಪ್ಪು.. 10 ಲಕ್ಷ ಪರಿಹಾರ ಘೋಷಿಸಿದ ಪವರ್ ಸ್ಟಾರ್

ಕೊವಿಡ್​ ಎರಡನೇ ಅಲೆಯ ನಿಯಂತ್ರಣಕ್ಕೆ ಹೇರಿರುವ ಲಾಕ್​ಡೌನ್​ನಿಂದ ಸಾಕಷ್ಟು ಮಂದಿ ತೊಂದರೆ ಅನುಭವಿಸುತ್ತಿದ್ದಾರೆ. ಚಿತ್ರರಂಗದ ಸಾಕಷ್ಟು ಮಂದಿ ಕೆಲಸ ಇಲ್ಲದೆ ಕಷ್ಟಕ್ಕೆ ಒಳಗಾಗಿದ್ದಾರೆ. ಇವರಿಗೆ ಸಹಾಯ ಮಾಡೋಕೆ ಸಾಕಷ್ಟು ಮಂದಿ ಮುಂದೆ ಬಂದಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಬಳಿಕ ನಟ ಪುನೀತ್ ರಾಜ್‍ಕುಮಾರ್ ಸಿನಿ ಕಾರ್ಮಿಕರ ಸಂಕಷ್ಟಕ್ಕೆ ಮಿಡಿದಿದ್ದು, ಕಾರ್ಮಿಕರ ಒಕ್ಕೂಟಕ್ಕೆ 10 ಲಕ್ಷ ರೂ.ಗಳನ್ನು ನೀಡಿದ್ದಾರೆ. ಇತ್ತೀಚೆಗಷ್ಟೇ ಯಶ್ ಪ್ರತಿಯೊಬ್ಬ ಸಿನಿ ಕಾರ್ಮಿಕನಿಗೂ ತಲಾ 5 ಸಾವಿರ ರೂ. ನೀಡುವುದಾಗಿ ಘೋಷಿಸಿದ್ದರು.

ಇಂದು ಪುನೀತ್​ ರಾಜ್​ಕುಮಾರ್​ ಅವರು ಸಂಕಷ್ಟದಲ್ಲಿರುವ ‌ ಸಿನಿಮಾ‌ ಮಂದಿ ಸಹಾಯಕ್ಕೆ ನಿಲ್ಲುತ್ತಿದ್ದೇನೆ. 10 ಲಕ್ಷ ರೂಪಾಯಿ ಹಣದಲ್ಲಿ ಸಿನಿಮಾ ಇಂಡಸ್ಟ್ರಿಯ ಎಲ್ಲಾ ವಿಭಾಗಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ವಿತರಿಸಲು ಸೂಚಿಸಿದ್ದೇನೆ ಎಂದು ಪುನೀತ್​ ಹೇಳಿದ್ದಾರೆ. ಮಾಜಿ ಚಲನಚಿತ್ರ ವಾಣಿಜ್ಯ ಮಂಡಳಿ ಅದ್ಯಕ್ಷ ಸಾರಾಗೋವಿಂದ್ ಹಾಗೂ ಕಾರ್ಮಿಕ ಒಕ್ಕೂಟದ ಕಾರ್ಯದರ್ಶಿ ರವಿಂದ್ರನಾಥ್ ಅವರು ಪುನೀತ್​ ಸಹಾಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೊರೊನಾ ವೈರಸ್​ ಎರಡನೇ ಅಲೆ ಜೋರಾಗಿದೆ. ಇದನ್ನು ನಿಯಂತ್ರಿಸೋಕೆ ಸರ್ಕಾರ ಸಾಕಷ್ಟು ಕ್ರಮ ಕೈಗೊಳ್ಳುತ್ತಿದೆ. ಅಲ್ಲದೆ, ಕೊವಿಡ್​ ಲಸಿಕೆ ಪಡೆಯುವಂತೆಯೂ ಸರ್ಕಾರ ಜನರಲ್ಲಿ ಮನವಿ ಮಾಡಿದೆ. ಈ ಮಧ್ಯೆ, ಕೊವಿಡ್​ ಬಂದರೆ ಭಯ ಪಡುವವರ ಸಂಖ್ಯೆಯೂ ಹೆಚ್ಚಿದೆ. ಆದರೆ, ಈ ಬಗ್ಗೆ ಭಯ ಬೇಡ ಎಂದು ಪುನೀತ್​ ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡಿದ್ದಾರೆ.

‘ಕೊವಿಡ್​ ಎರಡನೇ ಅಲೆ ತುಂಬಾ ಗಂಭೀರ ವಿಚಾರ. ಮಾಸ್ಕ್​​ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡರೆ ಕೊವಿಡ್​​ನಿಂದ ದೂರ ಇರಬಹುದು. ನಿಮ್ಮ ಸರದಿ ಬಂದಾಗ ವ್ಯಾಕ್ಸಿನ್​ ಹಾಕಿಸಿಕೊಳ್ಳಿ. ನಮಗೆ ಕೊವಿಡ್​ ಬಂದರೆ ಭಯ ಬೇಡ. ಹತ್ತಿರದಲ್ಲಿರುವ ಆರೋಗ್ಯ ಕೇಂದ್ರಕ್ಕೆ ಭೇಟಿ ಕೊಡಿ. ಸರ್ಕಾರ ಹೇಳಿದ ನಿಯಮ ಪಾಲಿಸುತ್ತಾ ಕೊವಿಡ್​ ವಿರುದ್ಧ ಗೆಲ್ಲೋಣ’ ಎಂದು ಪುನೀತ್​ ಕರೆ ನೀಡಿದ್ದಾರೆ

Spread the love

Related Articles

Leave a Reply

Your email address will not be published.

Back to top button
Flash News