CORONA VIRUSMoreScrollTop NewsUncategorizedರಾಜ್ಯ-ರಾಜಧಾನಿ

ಚಾಮರಾಜನಗರದ ಆಕ್ಸಿಜನ್ ದುರಂತಕ್ಕೆ ರೋಹಿಣಿ ಸಿಂಧೂರಿ ಕಾರಣನಾ..? ವರ್ಗಾವಣೆ ಬೆನ್ನಲ್ಲೇ ಲೀಕ್ ಆಯ್ತು ಶಾಕಿಂಗ್ ಆಡಿಯೋ..!

ಮೇ 2 ರಂದು ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ 37 ಜನ ಸಾವನಪ್ಪಿದ ಪ್ರಕರಣಕ್ಕೆ ಸಂಬಂಧಿಸಿ, ಜಿಲ್ಲಾಸ್ಪತ್ರೆಗೆ ಆಕ್ಸಿಜನ್ ಪೂರೈಕೆ ಮಾಡದಂತೆ ಅಂದಿನ ಮೈಸೂರಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮೌಖಿಕ ಆದೇಶ ನೀಡಿದ್ದರಾ ಅನ್ನೋ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.  ಹೌದು. ಮೈಸೂರು ಡಿಸಿ ರೋಹಿಣಿ ಸಿಂಧೂರಿ ಮತ್ತು ಗ್ಯಾಸ್ ಏಜೆನ್ಸಿ ಮಾಲೀಕನ ನಡುವೆ ನಡೆದ ಸಂಭಾಷಣೆಯ ಆಡಿಯೋವನ್ನು ಬಿಜೆಪಿ ಮುಖಂಡ ಅಮ್ಮನಪುರ ಮಲ್ಲೇಶ್ ಆಡಿಯೋ ಒಂದನ್ನು ರಿಲೀಸ್ ಮಾಡಿದ್ದಾರೆ.

 ರಿಲೀಸ್ ಮಾಡಲಾಗಿರುವ ಆಡಿಯೋದಲ್ಲಿ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಏಕೆ ಅಷ್ಟು ಆಕ್ಸಿಜನ್ ಕೊಡುತ್ತಿದ್ದೀರಾ? ಸರಿಯಾಗಿ ಮಾಹಿತಿ ಪಡೆದು ಆಕ್ಸಿಜನ್ ಪೂರೈಕೆ ಮಾಡಿ. ನೀನು ಆಕ್ಸಿಜನ್ ಪೂರೈಕೆ ಮಾಡುತ್ತಿರುವ 43 ಆಸ್ಪತ್ರೆಗಳ ರೆಕಾರ್ಡ್ ತೆಗೆದು ಕೊಂಡು ಕಚೇರಿಗೆ ಬಾ ಎಂದು ಮೈಸೂರು ಡಿಸಿ ರೋಹಿಣಿ ಸಿಂಧೂರಿ ಆದೇಶಿಸಿದ್ದಾರೆ. ಇದಕ್ಕೆ ಆಯ್ತು ಮೇಡಂ ಬರುತ್ತೇನೆ ಎಂದು ಸಿಬ್ಬಂದಿ ಹೇಳಿದ್ದಾರೆ.

ಈ ಮೌಖಿಕ ನಿರ್ದೇಶನದ ಹಿನ್ನೆಲೆಯಲ್ಲಿಯೇ ಚಾಮರಾಜನಗರಕ್ಕೆ ಆಕ್ಸಿಜನ್ ಪೂರೈಕೆ ಆಗಿಲ್ಲ ಎಂಬ ಆರೋಪಗಳು ಕೇಳಿ ಬಂದಿದೆ. ದುರಂತ ನಡೆದಾಗಲೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್, ಮೈಸೂರಿನಿಂದ ಆಕ್ಸಿಜನ್ ಪೂರೈಕೆ ಆಗಿಲ್ಲ ಎಂದು ಆರೋಪಿಸಿದ್ದರು.

ಅಲ್ಲದೇ ಅಂದು ದುರಂತ ಸಂಭವಿಸಿದಾಗ ರೋಹಿಣಿ ಸಿಂಧೂರಿ ಅವರನ್ನ ಸಂಸದ ಪ್ರತಾಪ್ ಸಿಂಹ ಸಮರ್ಥಿಸಿಕೊಂಡಿದ್ದರು. ಇದೀಗ ಪರೋಕ್ಷವಾಗಿಯೇ ಚಾಮರಾಜನಗರ ಜಿಲ್ಲಾಸ್ಪತ್ರೆಯ ಆಕ್ಸಿಜನ್ ದುರಂತಕ್ಕೆ ರೋಹಿಣಿ ಸಿಂಧೂರಿ ಅವರ ಮೌಖಿಕ ನಿರ್ದೇಶನ ಅಂತ ಹೇಳಿದ್ದಾರೆ. ಚಾಮರಾಜನಗರಕ್ಕೆ ಆಕ್ಸಿಜನ್ ಸಿಲಿಂಡರ್ ಗಳು ಯಾಕೆ ಹೋಗಲಿಲ್ಲಾ ಎಂಬುದು ಗೊತ್ತಿದೆ ಈಗ ಪ್ರಾಥಮಿಕ ವರದಿ ಬಂದಿದೆ. ನ್ಯಾಯಾಲಯದ ಉಸ್ತುವಾರಿಯಲ್ಲಿ ತನಿಖೆ ನಡೆಯುತ್ತಿದ್ದು ಪೂರ್ಣ ತನಿಖೆಯ ನಂತರ ಸತ್ಯಾಸತ್ಯೆತೆ ಏನೆಂಬುದು ಗೊತ್ತಾಗಲಿದೆ. ಈಗ ತಾಂತ್ರಿಕ ಸಾಕ್ಷಿಗಳು ಸಿಗದೆ ಹೋದರೂ ಒಳಗೆ ಏನೇನು ನಡೆದಿದೆ ಎಂಬುದು ಗೊತ್ತಾಗಲಿದೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.

Spread the love

Related Articles

Leave a Reply

Your email address will not be published.

Back to top button
Flash News