CORONA VIRUS

ಕರ್ನಾಟಕದಲ್ಲಿ ಇಂದು 12,209 ಜನರಿಗೆ ಕೊರೊನಾ ಸೋಂಕು ಧೃಢ.. 320 ಸಾವು..

ಬೆಂಗಳೂರು: ಕರ್ನಾಟಕದಲ್ಲಿ ಇಂದು ಒಟ್ಟು 12,209 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಒಟ್ಟು 320 ಜನರು ಸಾವನ್ನಪ್ಪಿದ್ದಾರೆ. ಬೆಂಗಳೂರಲ್ಲಿ 2,944 ಜನರಿಗೆ ಸೋಂಕು ದೃಢಪಟ್ಟಿದ್ದು, 187 ಜನರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 26,95,523ಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ 24,09,417 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 2,54,505 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈವರೆಗೆ ಕೊರೊನಾದಿಂದ 31,580 ಜನರು ಸಾವನ್ನಪ್ಪಿದ್ದಾರೆ.

ಬೆಂಗಳೂರಿನಲ್ಲಿ ಇಂದು ಒಂದೇ ದಿನ 2944 ಜನರಿಗೆ ಸೋಂಕು ದೃಢಪಟ್ಟಿದ್ದು, 187 ಜನರು ಮೃತಪಟ್ಟಿದ್ದಾರೆ. ಬೆಂಗಳೂರಲ್ಲಿ ಕೊರೊನಾ ಪೀಡಿತರ ಒಟ್ಟು ಸಂಖ್ಯೆ 11,83,126ಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ 10,50,910 ಜನರು ಗುಣಮುಖರಾಗಿದ್ದಾರೆ. ಬೆಂಗಳೂರಲ್ಲಿ ಈವರೆಗೆ ಕೊರೊನಾದಿಂದ 14,875 ಜನರು ಮೃತಪಟ್ಟಿದ್ದಾರೆ. 1,17,340 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಬೆಂಗಳೂರು ನಗರದಲ್ಲಿ 2944 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಬಾಗಲಕೋಟೆ 166, ಬಳ್ಳಾರಿ 285, ಬೆಳಗಾವಿ 418, ಬೆಂಗಳೂರು ಗ್ರಾಮಾಂತರ 277, ಬೀದರ್ 7, ಚಾಮರಾಜನಗರ 247, ಚಿಕ್ಕಬಳ್ಳಾಪುರ 348, ಚಿಕ್ಕಮಗಳೂರು 416, ಚಿತ್ರದುರ್ಗ 266, ಮಂಡ್ಯ 571, ದಾವಣಗೆರೆ 143, ಧಾರವಾಡ 262, ಕೊಡಗು 162, ಹಾಸನ 655, ಹಾವೇರಿ 138, ಕಲಬುರಗಿ 60, ಗದಗ 133, ಕೋಲಾರ 257, ಕೊಪ್ಪಳ 212, ದಕ್ಷಿಣ ಕನ್ನಡ 609, ಮೈಸೂರು 1237, ರಾಯಚೂರು 104, ರಾಮನಗರ 60, ಶಿವಮೊಗ್ಗ 456, ತುಮಕೂರು 698, ಉಡುಪಿ 494, ಉತ್ತರ ಕನ್ನಡ 360, ವಿಜಯಪುರ 190, ಯಾದಗಿರಿ 34 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

ಕರ್ನಾಟಕದಲ್ಲಿ ಇಂದು ಕೊರೊನಾ ಸೋಂಕಿನಿಂದ ಒಟ್ಟು 320 ಜನರು ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿ ಅತಿಹೆಚ್ಚು ಅಂದರೆ 187 ಜನರು ಮೃತಪಟ್ಟಿದ್ದಾರೆ. ಮೈಸೂರು 19, ಬೆಳಗಾವಿ 15, ಬೆಂಗಳೂರು ಗ್ರಾಮಾಂತರ 15, ಧಾರವಾಡ 9, ಹಾಸನ, ಕೋಲಾರದಲ್ಲಿ ತಲಾ 8, ಬಳ್ಳಾರಿ, ಚಾಮರಾಜನಗರ, ದಾವಣಗೆರೆ, ಹಾವೇರಿ, ತುಮಕೂರು, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ತಲಾ 6 ಜನರು ಮೃತಪಟ್ಟಿದ್ದಾರೆ. ದಕ್ಷಿಣ ಕನ್ನಡ, ಚಿಕ್ಕಮಗಳೂರಿನಲ್ಲಿ ತಲಾ ಐವರು, ಗದಗ, ಕೊಡಗು, ವಿಜಯಪುರ ಜಿಲ್ಲೆಗಳಲ್ಲಿ ತಲಾ ನಾಲ್ವರು, ಉಡುಪಿ, ರಾಯಚೂರುಗಳಲ್ಲಿ, ಕೊಪ್ಪಳ, ಕಲಬುರಗಿ ಜಿಲ್ಲೆಗಳಲ್ಲಿ ಇಂದು ತಲಾ ಒಬ್ಬರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 31580 ಜನ ಸಾವನ್ನಪ್ಪಿದ್ದಾರೆ.

Spread the love

Related Articles

Leave a Reply

Your email address will not be published.

Back to top button
Flash News