CORONA LOCKDOWN HEROESCORONA VIRUSlock downMoreಸಿನೆಮಾ ಹಂಗಾಮ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನವಿಗೆ ಉತ್ತಮ ಪ್ರತಿಕ್ರಿಯೆ.. ಪ್ರಾಣಿಗಳನ್ನು ದತ್ತು ಪಡೆದ ದಚ್ಚು ಫ್ಯಾನ್ಸ್..

ಸ್ಯಾಂಡಲ್ ವುಡ್ ನಟ ಚಾಲೆಂಜಿಂಗ್ ದರ್ಶನ್​ ಹೇಳಿದ್ದನ್ನು ಅವರ ಫ್ಯಾನ್ಸ್ ಚಾಚೂತಪ್ಪದೆ ಪಾಲಿಸುತ್ತಾರೆ. ಈ ಮೊದಲು ಕರ್ನಾಟಕದಲ್ಲಿ ಪ್ರವಾಹ ಉಂಟಾದ ಸಂದರ್ಭದಲ್ಲಿ ‘ನನ್ನ ಬರ್ತ್​ಡೇ ಆಚರಣೆ ಬೇಡ. ಬದಲಿಗೆ ದಿನಸಿ ತಂದುಕೊಡಿ. ಅದನ್ನು ಪ್ರವಾಹ ಪೀಡಿತ ಪ್ರದೇಶಕ್ಕೆ ತಲುಪಿಸುತ್ತೇವೆ’ ಎಂದು ದರ್ಶನ್​ ಹೇಳಿದ್ದರು.

ಇದನ್ನು ಅಭಿಮಾನಿಗಳು ಮಾಡಿದ್ದರು. ಈಗ ಕೊವಿಡ್​ ಸಂದರ್ಭದಲ್ಲಿ ಪ್ರಾಣಿಗಳನ್ನು ದತ್ತು ಪಡೆಯುವಂತೆ ದರ್ಶನ್​ ಮನವಿ ಮಾಡಿದ್ದು, ಅವರ ಕರೆಗೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅವರ ಮಾತಿನಂತೆ ಅಭಿಮಾನಿಗಳು ಪ್ರಾಣಿಗಳನ್ನು ದತ್ತು ಪಡೆಯುತ್ತಿದ್ದಾರೆ ಎಂದು ದಾಸ ತನ್ನ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.

ಕೊವಿಡ್​ನಿಂದ ಲಾಕ್​ಡೌನ್​ ಘೋಷಣೆ ಮಾಡಲಾಗಿದೆ. ಹೀಗಾಗಿ, ಪ್ರವಾಸಿ ಸ್ಥಳಗಳು, ಝೂಗಳು ಕ್ಲೋಸ್​ ಆಗಿವೆ. ಹೀಗಾಗಿ ಝೂಗಳಿಗೆ ಯಾವುದೇ ಆದಾಯ ಬರುತ್ತಿಲ್ಲ. ಇದರಿಂದ ಅಲ್ಲಿರುವ ಪ್ರಾಣಿಗಳ ನಿರ್ವಹಣೆ ಕಷ್ಟವಾಗುತ್ತಿದೆ. ಇದು ದರ್ಶನ್​ ಗಮನಕ್ಕೆ ಬಂದಿದೆ. ಕರ್ನಾಟಕದಲ್ಲಿ 9 ಝೂಗಳಿವೆ. ಎಲ್ಲಾ ಪ್ರಾಣಿ ಸಂಗ್ರಹಾಲಯದ ಪರಿಸ್ಥಿತಿಯೂ ಒಂದೇ ರೀತಿ ಇದೆ. ಹಾಗಾಗಿ ನಿಮ್ಮ ಕೈಲಾದ ಪ್ರಾಣಿಗಳನ್ನ ದತ್ತು ಪಡೆಯಿರಿ ಎಂದು ದರ್ಶನ್ ಮನವಿ ಮಾಡಿದ್ದರು. ಇದಕ್ಕೆ ದೊಡ್ಡ ಮಟ್ಟದಲ್ಲಿ ಪ್ರತಿಕ್ರಿಯೆ ಬಂದಿದೆ.

ಪರಿಸರ ದಿನಾಚರಣೆಯಂದು ವೀಡಿಯೋ ಮೂಲಕ ಅಭಿಮಾನಿ ಮತ್ತು ಆಪ್ತರ ಬಳಿ ಪ್ರಾಣಿಗಳನ್ನು ದತ್ತು ತೆಗೆದುಕೊಂಡು ಸಹಕರಿಸಿ ಎಂದು ಮನವಿ ಮಾಡಿದ್ದರು. ಪ್ರಾಣಿ ಸಂಗ್ರಹಾಲಯದಲ್ಲಿರುವ ಇಷ್ಟವಾದ ಪ್ರಾಣಿಗಳನ್ನು ದತ್ತು ಪಡೆಯಬಹುದೆಂದು ಹೇಳಿದ್ದರು. ದರ್ಶನ್ ಅವರ ಮನವಿಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಾತ್ರವಲ್ಲದೆ ಅನೇಕರಿಗೆ ಅದು ತಲುಪಿದೆ. ಇದನ್ನು ಗಮನಿಸಿದ ಅವರ ಅಭಿಮಾನಿಗಳು ಪ್ರಾಣಿಗಳನ್ನು ದತ್ತು ಸ್ವೀಕರಿಸುತ್ತಿದ್ದಾರೆ.

Spread the love

Related Articles

Leave a Reply

Your email address will not be published.

Back to top button
Flash News