MoreScrollUncategorizedಕ್ರೈಮ್ /ಕೋರ್ಟ್

ತಂಗಿಯ ಎಂಗೇಜ್ಮೆಂಟ್ ಗೆಂದು ತರಕಾರಿ ತರಲು ಹೋಗಿ,ತಂಗಿಯ ಪ್ರಿಯಕರನಿಂದಲೇ ಬರ್ಬರವಾಗಿ ಕೊಲೆಯಾದ ಅಣ್ಣ..!

ಕಲಬುರಗಿ: ತಂಗಿಯ ಎಂಗೇಜ್‍ಮೆಂಟ್‍ಗೆ ತರಕಾರಿ ಖರೀದಿಗೆಂದು ಹೋಗಿದ್ದ ಅಣ್ಣನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕಲಬುರಗಿ ಹೊರವಲಯದ ಕೋಟನೂರ ತರಕಾರಿ ಮಾರ್ಕೆಟ್‍ನಲ್ಲಿ ನಡೆದಿದೆ. ನಿಖಿಲ್(24) ಕೊಲೆಯಾದ ದುರ್ದೈವಿ. ನಿಖಿಲ್ ತಂಗಿ ಪ್ರೀತಿಸುತ್ತಿದ್ದ ಯುವಕ ಹಾಗೂ ಆತನ ಸ್ನೇಹಿತರು ಸೇರಿ ನಿಖಿಲ್‌ನನ್ನ ಬರ್ಬರವಾಗಿ ಕೊಲೆ ಮಾಡಿದ್ದಾರೆ.

ಕೊಲೆಯಾದ ನಿಖಿಲ್‌ ತಂಗಿಯ ಎಂಗೇಜ್‌ಮೆಂಟ್ ಬೇರೊಬ್ಬ ಯುವಕನ ಜೊತೆ ನಾಳೆ ನಡೆಯಬೇಕಿತ್ತು. ಹೀಗಾಗಿ ಎಂಗೇಜ್‌ಮೆಂಟ್ ಕಾರ್ಯಕ್ರಮಕ್ಕಾಗಿ ತಾಯಿ ಮತ್ತು ಅಣ್ಣನೊಂದಿಗೆ ತರಕಾರಿ ಖರೀದಿಗಾಗಿ ನಿಖಿಲ್ ತೆರಳಿದ್ದನು ಎಂದು ತಿಳಿದು ಬಂದಿದೆ.

ನಿಖಿಲ್‍ನ ತಂಗಿಯ ಎಂಗೇಜ್‍ಮೆಂಟ್ ಬೇರೊಬ್ಬ ಯುವಕನ ಜೊತೆ ನಾಳೆ ನಿಶ್ಚಯವಾಗಿತ್ತು. ಈ ದ್ವೇಷದಿಂದ ಕಾರಿನಲ್ಲಿ ಬಂದ ವಿಶಾಲ್ ಮತ್ತು ತಂಡ ಮಾರ್ಕೆಟ್‍ನಲ್ಲಿ ತರಕಾರಿ ಖರೀದಿ ವೇಳೆ ಕಾರ್‌ನಲ್ಲಿ ಬಂದ ನಿಖಿಲ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ.

ನಿಖಿಲ್ ಸ್ಥಳದಲ್ಲೇ ಸಾವನ್ನಪ್ಪಿದರೆ ಆತನ ತಾಯಿ, ಅಣ್ಣ ಗಂಭೀರವಾಗಿ ಗಾಯಗೊಂಡಿದ್ದಾರೆ. ಸಾವಿರಾರು ಜನರ ಸಮ್ಮುಖದಲ್ಲೇ ಯುವಕನ ಬರ್ಬರ ಹತ್ಯೆಯಾಗಿದೆ. ಇದರಿಂದ ಕಲಬುರಗಿ ಜನ ಭಯಭೀತರಾಗಿದ್ದಾರೆ. ಗಾಯಾಳುಗಳನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ. ಕಲಬುರಗಿಯ ವಿವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Spread the love

Related Articles

Leave a Reply

Your email address will not be published.

Back to top button
Flash News