CORONA VIRUSMoreScrollUncategorizedವಿಚಿತ್ರ-ವಿಶೇಷ

ಕೊವಿಶೀಲ್ಡ್ ಎರಡೂ ಡೋಸ್​ ಲಸಿಕೆ ಪಡೆದ ವರ ಬೇಕೆಂದು ಮ್ಯಾಟ್ರಿಮೋನಿಯಲ್ಲಿ ಜಾಹೀರಾತು ಹಾಕಿದ ಯುವತಿ..

ನಮ್ಮ ಅಜ್ಜ-ಅಜ್ಜಿಯರ ಕಾಲದಲ್ಲಿ ಹಿರಿಯರು ನೋಡಿದ ವಧು ಅಥವಾ ವರನನ್ನು ಕಣ್ಣುಚ್ಚಿಕೊಂಡು ವಿವಾಹವಾಗುವ ಸಂಪ್ರದಾಯವಿತ್ತು. ಹಿರಿಯ ಮಾತಿಗೆ ಎದುರು ಮಾತನಾಡದೇ ವಿವಾಹ ಮಂಟಪದಲ್ಲಿಯೇ ಮೊದಲ ಬಾರಿಗೆ ಮುಖನೋಡುವ ಅನುಭವವನ್ನೂ ಮನೆಯಲ್ಲಿ ವಯಸ್ಕರು ಆಗಾಗ ಹೇಳುತ್ತಿರುತ್ತಾರೆ. ಆದರೆ ಕಾಲ ಬದಲಾಗುತ್ತಿದ್ದಂತೆ, ತಂತ್ರಜ್ಞಾನ ಮುಂದುವರೆಯುತ್ತಿದ್ದಂತೆಯೇ ಮಧು-ವರರು ಅವರು ಇಷ್ಟಪಟ್ಟ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಟ್ರೆಂಡ್​ ಶುರುವಾಯಿತು. ಅದೊಂದೇ ಅಲ್ಲದೇ ತಮ್ಮ ಅರ್ಹತೆಗಳನ್ನು ಹವ್ಯಾಸಗಳನ್ನು ಮ್ಯಾಟ್ರಿಮೋನಿಯಂತಹ ವಧು-ವರರ ವಿವಾಹ ವೇದಿಕೆಯಲ್ಲಿ ನಮೂದಿಸುವ ಅವಕಾಶವೂ ನಮ್ಮ ಮುಂದಿದೆ. ಕಾಲ ತಕ್ಕಂತೆಯೇ ಎಲ್ಲವೂ ಬದಲಾಗುತ್ತಿದೆ.

ವಧು ಅಥವಾ ವರನಿಗೆ ತನ್ನ ಸಂಗಾತಿ ಹೀಗೆ ಇರಬೇಕು ಎಂಬ ಆಸೆ ಇರುವುದು ಸಹಜ. ಶಿಕ್ಷಣವಂತನಾಗಿರಬೇಕು.. ಒಳ್ಳೆಯ ಕೆಲಸದಲ್ಲಿರಬೇಕು.. ನೋಡಲು ಸುಂದರವಾಗಿರಬೇಕೆಂಬ ಆಸೆ ಇದ್ದೇ ಇರುತ್ತದೆ. ಆದರಿಲ್ಲಿ ಯುವತಿಯೊಬ್ಬಳು ಒಂದು ವಿಚಿತ್ರ ಬೇಡಿಕೆಯನ್ನೂ ಇಟ್ಟಿದ್ದಾಳೆ. ತಾನು ಮದುವೆಯಾಗುವ ವರ ಎರಡೂ ಡೋಸ್​ ಕೊವಿಶೀಲ್ಡ್​ ಲಸಿಕೆ ಪಡೆದಿರಬೇಕು ಎಂದು ಬೇಡಿಕೆ ಇಟ್ಟಿದ್ದಾಳೆ. ಈ ಜಾಹೀರಾತೀಗ ಸಿಕ್ಕಾಪಟೆ ವೈರಲ್ ಆಗಿದೆ. ಇದು ಸ್ವಲ್ಪ ಅತಿರೇಕ ಎನ್ನಿಸಿದರೂ, ಸಮಯಕ್ಕೆ ಹೊಂದಿಕೊಳ್ಳಲೇಬೇಕಾದ ಪರಿಸ್ಥಿತಿಯಿದೆ.

ರೋಮನ್​ ಕ್ಯಾಥೋಲಿಕ್​ ಪಂಥದ 24 ವರ್ಷದ ಯುವತಿಯೊಬ್ಬಳು ಈ ಜಾಹೀರಾತು ನೀಡಿದ್ದಾಳೆ. ತನ್ನ ಸಂಪೂರ್ಣ ವಿವರದ ಜತೆಗೆ ವರ ಹೇಗಿರಬೇಕು ಎಂಬುದನ್ನು ಮ್ಯಾಟ್ರಿಮೋನಿಯಲ್ಲಿ ಹೇಳಿಕೊಂಡಿದ್ದಾಳೆ. ಅವಳು ಎಮ್​ಎಸ್​ಸಿ ಪದವಿ ಪಡೆದಿದ್ದಾಳೆ. ಆಕೆ ಎರಡೂ ಡೋಸ್ ಕೊವಿಶೀಲ್ಡ್​​​​ ಕೊವಿಡ್​ ವ್ಯಾಕ್ಸಿನ್​​ ಪಡೆದಿದ್ದಾಳೆ. ಜತೆಗೆ ತಾನು ಮದುವೆಯಾಗುವ ವರ ಹೇಗಿರಬೇಕು ಎಂಬುದನ್ನೂ ಹೇಳಿದ್ದಾಳೆ. ಆತ ರೋಮನ್​ ಕ್ಯಾಥೋಲಿಕ್​ ಪಂಥಕ್ಕೆ ಸೇರಿದವನಾಗಿದ್ದು, 28-30 ವರ್ಷದವನಾಗಿರಬೇಕು. ಸ್ವತಂತ್ರವಾಗಿ ಜೀವನ ನಡೆಸುತ್ತಿರಬೇಕು. ತಾಳ್ಮೆಯಿರಬೇಕು..ಸ್ನಾತಕೋತ್ತರ ಪದವಿ ಪಡೆದಿರಬೇಕು ಎಂದು ಹೇಳಿದ್ದಾಳೆ. ಅದೆಲ್ಲದರ ಜತೆಗೆ, ಎರಡೂ ಡೋಸ್​ ಕೊವಿಶೀಲ್ಡ್ ಲಸಿಕೆಯನ್ನೇ ಪಡೆದಿರಬೇಕು ಎಂದೂ ಜಾಹೀರಾತಿನಲ್ಲಿ ಉಲ್ಲೇಖಿಸಿದ್ದಾಳೆ.

 

Spread the love

Related Articles

Leave a Reply

Your email address will not be published.

Back to top button
Flash News