ಸಿನೆಮಾ ಹಂಗಾಮ

ಸೋಶಿಯಲ್ ಮೀಡಿಯಾದಲ್ಲಿ ರಶ್ಮಿಕಾ ಬಗ್ಗೆ ಕೆಟ್ಟ ಕಮೆಂಟ್ಸ್: ಪ್ರತಿಕ್ರಿಯೆ ನೀಡಿದ ರಕ್ಷಿತ್ ಶೆಟ್ಟಿ

ಕಿರಿಕ್ ಪಾರ್ಟಿ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ ಒಟ್ಟಿಗೆ ನಟಿಸಿದ್ದರು. ಆ ನಂತರ ಇಬ್ಬರೂ ಮದುವೆಯಾಗುವುದಾಗಿ ನಿಶ್ಚಯಿಸಿ ಎಂಗೇಜ್‌ಮೆಂಟ್ ಸಹ ಮಾಡಿಕೊಂಡರು. ಆದರೆ ರಕ್ಷಿತ್ ಶೆಟ್ಟಿ ಹಾಗೂ ನಟಿ ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥ ಮುರಿದ ಬಳಿಕ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ಅದರಲ್ಲೂ ರಕ್ಷಿತ್ ಇಲ್ಲವೇ ರಶ್ಮಿಕಾ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದಾಗ, ಅಥವಾ ಲೈವ್‍ಗೆ ಬಂದಾಗ ಹೆಚ್ಚು ಜನ ಈ ಬಗ್ಗೆ ಕಮೆಂಟ್ ಮಾಡುತ್ತಾರೆ.

ಮನಬಂದಂತೆ ಟ್ರೋಲ್ ಮಾಡುತ್ತಾರೆ. ಅವರ ಮಾಜಿ ಪ್ರಿಯಕರ ರಕ್ಷಿತ್​ ಶೆಟ್ಟಿಯ ವಿಚಾರ ಬಂದಾಗಲೂ ರಶ್ಮಿಕಾಗೆ ಖಾರದ ಕಮೆಂಟ್​ಗಳ ಮೂಲಕ ಜನರು ತಿರುಗೇಟು ನೀಡುತ್ತಾರೆ. ಆದರೆ ಇದೆಲ್ಲ ಸರಿಯಲ್ಲ ಎಂದು ರಕ್ಷಿತ್​ ಶೆಟ್ಟಿ ಹೇಳಿದ್ದಾರೆ. ಹಾಗೆ ನೋಡಿದರೆ, ಈಗ ರಶ್ಮಿಕಾ ಮಂದಣ್ಣ ಹಾಗೂ ರಕ್ಷಿತ್​ ಶೆಟ್ಟಿ ನಡುವೆ ಯಾವುದೇ ಕಿರಿಕ್​ ಇಲ್ಲ. ಹಾಗಿದ್ದರೂ ಕೂಡ ಅಭಿಮಾನಿಗಳು ಮಾತ್ರ ರಶ್ಮಿಕಾ ಬಗ್ಗೆ ಕೆಟ್ಟ ಕಮೆಂಟ್​ ಮಾಡುತ್ತಿರುವುದು ರಕ್ಷಿತ್​ಗೆ ಬೇಸರ ಮೂಡಿಸಿದೆ.

ರಕ್ಷಿತ್ ಶೆಟ್ಟಿ ಹುಟ್ಟುಹಬ್ಬದ ಪ್ರಯುಕ್ತ 777 ಚಾರ್ಲಿ ಸಿನಿಮಾ ಟೀಸರ್ ಬಿಡುಗಡೆಯಾಗಿದ್ದು, ಈ ಬಗ್ಗೆ ಜನರ ಅಭಿಪ್ರಾಯ ತಿಳಿಯಲು ರಕ್ಷಿತ್ ಶೆಟ್ಟಿ ಇನ್‍ಸ್ಟಾಗ್ರಾಂನಲ್ಲಿ ಲೈವ್ ಬಂದಿದ್ದರು. ಈ ವೇಳೆ ಅಭಿಮಾನಿಗಳು ಅವರ ಸಿನಿಮಾ ಜೊತೆಗೆ ವೈಯಕ್ತಿಕ ಬದುಕಿನ ಬಗ್ಗೆ ಸಹ ಪ್ರಶ್ನಿಸಿದ್ದಾರೆ. ಅಲ್ಲದೆ ರಶ್ಮಿಕಾ ಮಂದಣ್ಣ ಬಗ್ಗೆ ಸಹ ಕೆಟ್ಟದಾಗಿ ಕಮೆಂಟ್​ ಮಾಡಿದ್ದಾರೆ. ಎಷ್ಟರಮಟ್ಟಿಗೆಂದರೆ, ಆ ಕುರಿತು ಸ್ವತಃ ರಕ್ಷಿತ್​ ಶೆಟ್ಟಿ ಪ್ರತಿಕ್ರಿಯೆ ನೀಡುವುದು ಅನಿವಾರ್ಯ ಆಯಿತು.

ಈ ಕುರಿತು ಅಭಿಮಾನಿಗಳಿಗೆ ತಿಳಿಸಿದ ಅವರು, ಕೆಲವೊಂದು ಕಮೆಂಟ್​ಗಳನ್ನು ನೋಡೋಕೆ ಬಹಳ ಬೇಜಾರಾಗುತ್ತೆ. ಆದರೆ ಆ ಕಮೆಂಟ್​ಗಳು ನನ್ನ ಬಗ್ಗೆ ಇರೋದಲ್ಲ. ಬೇರೆಯವರ ಬಗ್ಗೆ ಇರುವಂಥದ್ದು. ನಾನು ಎಲ್ಲರಲ್ಲೂ ಒಂದು ಮನವಿ ಮಾಡಿಕೊಳ್ಳುತ್ತೇನೆ. ಹಳೆಯದನ್ನು ಬಿಟ್ಟು ಬಿಡೋಣ. ಮುಗಿದು ಹೋಗಿದ್ದು ಆಗಿ ಹೋಯ್ತು. ಅದರ ಬಗ್ಗೆ ಮಾತನಾಡಿ ಪ್ರಯೋಜನ ಇಲ್ಲ. ಯಾವುದೇ ಮನುಷ್ಯರಿಗೂ ಅಗೌರವ ತೋರಿಸುವುದು ಬೇಡ. ನಮ್ಮ ಬಗ್ಗೆ ನಾವೇ ಅಸಹ್ಯಪಟ್ಟುಕೊಳ್ಳುವ ರೀತಿಯ ಕಮೆಂಟ್​ಗಳನ್ನು ನಾವು ಬೇರೆಯವರಿಗೂ ಮಾಡಬಾರದು’ ಎಂದು ರಕ್ಷಿತ್​ ಹೇಳಿದ್ದಾರೆ.

‘ಎಲ್ಲರಲ್ಲೂ ನಾನು ಮನವಿ ಮಾಡಿಕೊಳ್ಳುತ್ತೇನೆ. ಮೊದಲು ಮನುಷ್ಯರಾಗೋಣ. ಎಲ್ಲರನ್ನೂ ಗೌರವಿಸೋಣ. ಎಲ್ಲರಿಗೂ ಅವರದ್ದೇ ಆದ ಬದುಕು ಇದೆ. ಈ ಕಮೆಂಟ್​ ಸೆಕ್ಷನ್​ನಲ್ಲಿ ನಾನು ಒಳ್ಳೆಯ ಕಮೆಂಟ್​ಗಳನ್ನು ನೋಡೋಕೆ ಇಷ್ಟಪಡ್ತೀನಿ. ನಮ್ಮ ಸಿನಿಮಾ ಬಗ್ಗೆ ಕಮೆಂಟ್ಸ್​ ನೋಡೋಕೆ ಇಷ್ಟಪಡ್ತೀನಿ’ ಎನ್ನುವ ಮೂಲಕ ಅಭಿಮಾನಿಗಳಿಗೆ ರಕ್ಷಿತ್​ ಶೆಟ್ಟಿ ಬುದ್ಧಿಮಾತು ಹೇಳಿದ್ದಾರೆ.

Spread the love

Related Articles

Leave a Reply

Your email address will not be published.

Back to top button
Flash News