MoreScrollTop NewsUncategorizedದೇಶ-ವಿದೇಶರಾಜಕೀಯ

ಭಾರತದ ಚುನಾವಣಾ ಆಯೋಗದ ನೂತನ ಆಯುಕ್ತರಾಗಿ ಅನೂಪ್ ಚಂದ್ರಪಾಂಡೆ ನೇಮಕ..

ಉತ್ತರ ಪ್ರದೇಶ ರಾಜ್ಯದ ಮಾಜಿ ಮುಖ್ಯ ಕಾರ್ಯದರ್ಶಿ ಅನೂಪ್​ ಚಂದ್ರ ಪಾಂಡೆ ಅವರನ್ನು ನಿನ್ನೆ ಚುನಾವಣಾ ಆಯೋಗದ ನೂತನ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ. ಈ ಕುರಿತಂತೆ ಕೇಂದ್ರ ಕಾನೂನು ಮತ್ತು ಸಂಸದೀಯ ಸಚಿವಾಲಯ ಆದೇಶ ಹೊರಡಿಸಿದ್ದು, ಚುನಾವಣಾ ಆಯೋಗದ ನೂತನ ಆಯುಕ್ತರಾಗಿ ನಿವೃತ್ತ ಐಎಎಸ್ ಅಧಿಕಾರಿ ಅನೂಪ್ ಚಂದ್ರಪಾಂಡೆ ಅವರನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ನೇಮಕ ಮಾಡಿದ್ದಾರೆ ಎಂದು ತಿಳಿಸಿದೆ.

ಚುನಾವಣಾ ಆಯೋಗದ ಮುಖ್ಯ ಆಯುಕ್ತರಾಗಿದ್ದ ಸುನಿಲ್​ ಅರೋರಾ ಏಪ್ರಿಲ್ 12ರಂದು ನಿವೃತ್ತರಾಗಿದ್ದರು. ಬಳಿಕ ಅವರ ಹುದ್ದೆಗೆ ಆಯುಕ್ತರಾಗಿದ್ದ ಸುಶೀಲ್ ಚಂದ್ರ ಆಯ್ಕೆಯಾಗಿದ್ದರು. ಇಬ್ಬರು ಚುನಾವಣಾ ಆಯುಕ್ತರ ಪೈಕಿ ರಾಜೀವ್ ಕುಮಾರ್ ಒಂದು ಹುದ್ದೆಯನ್ನು ನಿರ್ವಹಿಸುತ್ತಿದ್ದು, ಇನ್ನೋರ್ವ ಆಯುಕ್ತರ ಹುದ್ದೆ ಖಾಲಿ ಉಳಿದಿತ್ತು. ಇದೀಗ ಉತ್ತರ ಪ್ರದೇಶ ರಾಜ್ಯದ ಮಾಜಿ ಮುಖ್ಯ ಕಾರ್ಯದರ್ಶಿ ಅನೂಪ್​ ಚಂದ್ರ ಪಾಂಡೆ ಆ ಸ್ಥಾನಕ್ಕೆ ಆಗಮಿಸಿದ್ದಾರೆ.

ಅನೂಪ್ ಚಂದ್ರಪಾಂಡೆ ಅವರು 1984ರ ಕೇಡರ್​ನ ಐಎಎಸ್ ಅಧಿಕಾರಿಯಾಗಿದ್ದು, ಈ ಹಿಂದೆ ರಕ್ಷಣಾ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಮತ್ತು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಜಂಟಿ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದರು. ಬಳಿಕ 2019 ಆಗಸ್ಟ್ ನಲ್ಲಿ ಉತ್ತರ ಪ್ರದೇಶ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ನಿವೃತ್ತಿಯಾಗಿದ್ದರು.

ಇದೀಗ ಚುನಾವಣಾ ಆಯೋಗದ ಇಬ್ಬರು ಮುಖ್ಯಸ್ಥರ ಪೈಕಿ ಒಂದು ಸ್ಥಾನಕ್ಕೆ ಅನೂಪ್ ಚಂದ್ರಪಾಂಡೆ ಆಯ್ಕೆಯಾಗಿದ್ದು, ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಮತ್ತು ರಾಜೀವ್ ಕುಮಾರ್ ಅವರೊಂದಿಗೆ ಮುಂದಿನ ಆರು ವರ್ಷ ಅಥವಾ ಅವರಿಗೆ 65 ವರ್ಷ ತುಂಬುವವರೆಗೆ ಅಧಿಕಾರ ನಿರ್ವಹಿಸಬಹುದಾಗಿದೆ.

Spread the love

Related Articles

Leave a Reply

Your email address will not be published.

Back to top button
Flash News