MoreScrollTop NewsUncategorizedಕ್ರೈಮ್ /ಕೋರ್ಟ್ರಾಜಕೀಯ

ನಿಖಿಲ್ ಕುಮಾರಸ್ವಾಮಿ ಬೆಂಬಲಿಗರು ಹಾಗೂ ಜಮೀರ್ ಬೆಂಬಲಿಗರ ನಡುವೆ ಗಲಾಟೆ..?

ಬೆಂಗಳೂರು: ಜೆಡಿಎಸ್​ ನಾಯಕ ಹೆಚ್.ಡಿ ಕುಮಾರಸ್ವಾಮಿಯವರ ಪುತ್ರ ನಟ ನಿಖಿಲ್​​ ಕುಮಾರಸ್ವಾಮಿ ಬೆಂಬಲಿಗರು ಹಾಗೂ ಕಾಂಗ್ರೆಸ್​ ಶಾಸಕ ಜಮೀರ್​ ಅಹಮ್ಮದ್​ ಖಾನ್​ ಬೆಂಬಲಿಗರ ಮಧ್ಯೆ ಗಲಾಟೆ ನಡೆದಿದ್ದು, ಸದಾಶಿವನಗರದಲ್ಲಿರುವ ಗೆಸ್ಟ್​​​ಹೌಸ್​ ಎನ್ನಲಾದ ರಂಕಾ ಅಪಾರ್ಟ್​​ಮೆಂಟ್​ ಬಳಿ ಈ ಇಬ್ಬರ ಬೆಂಬಲಿಗರು ಗಲಾಟೆ ಮಾಡಿಕೊಂಡಿದ್ದಾರೆ.

ಗಲಾಟೆ ಸದಾಶಿವನಗರ ಠಾಣೆ ಮೆಟ್ಟಿಲೇರಿದೆ. ಗೆಸ್ಟ್ ಹೌಸ್ ಬಳಿ ನಿಖಿಲ್ ಕುಮಾರಸ್ವಾಮಿಯವರ ಮೂವರು ಬಾಡಿ ಗಾರ್ಡ್ ಗಳು ತೆರಳಿದ್ದಾರೆ. ಗೆಸ್ಟ್ ಹೌಸ್ ಬಳಿಯಿದ್ದ ಕೇರ್ ಟೇಕರ್ ರನ್ನ ಓಡಸಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ. ಗೆಸ್ಟ್ ಹೌಸ್ ನಮ್ಮದು ಎಂದು ಕೇರ್ ಟೇಕರ್ ರನ್ನ ಓಡಿಸಿದ್ದಾರೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗಲಾಟೆ ನಡೆದಿದೆ.

ಬೆಂಬಲಿಗರ ಗಲಾಟೆ ಠಾಣೆ ಮೆಟ್ಟಿಲೇರುತ್ತಿದ್ದಂತೆ ಸದಾಶಿವನಗರ ಠಾಣೆಗೆ ಜಮೀರ್ ಪಿಎ ಫಾರುಕ್ ದೌಡಾಯಿಸಿದ್ದಾರೆ. ಸದ್ಯ ಈ ಫ್ಲ್ಯಾಟ್ ಜಮೀರ್ ಅವರ ಹೆಸರಲ್ಲಿ ಇದೆ ಎಂದು ಫಾರೂಕ್​​ ತಿಳಿಸಿದ್ದಾರೆ. ಸದಾಶಿವನಗರ ರಂಕಾ ಎನ್ ಕ್ಲೇವ್ ಅಪಾರ್ಟ್ಮೆಂಟ್ ಗೆ ಆಗಮಿಸಿದ ಸದಾಶಿವನಗರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ

Spread the love

Related Articles

Leave a Reply

Your email address will not be published.

Back to top button
Flash News