MoreScrollTop NewsUncategorizedದೇಶ-ವಿದೇಶ

ಭಟ್ಕಳದಲ್ಲಿ 8 ವರ್ಷಗಳಿಂದ ಅಕ್ರಮವಾಗಿ ವಾಸವಿದ್ದ ಪಾಕಿಸ್ತಾನಿ ಮಹಿಳೆ ಅರೆಸ್ಟ್..!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಅಕ್ರಮವಾಗಿ ವಾಸವಿದ್ದ ಪಾಕಿಸ್ತಾನದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಪೊಲೀಸರು ಭಟ್ಕಳದಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನದ ರಾಷ್ಟ್ರೀಯತೆಯನ್ನು ಹೊಂದಿರುವ ಮಹಿಳೆಯೋರ್ವಳನ್ನು ಬಂಧಿಸಿದ್ದಾರೆ.

ಖತೀಜಾ ಮೆಹರಿನ್ ಬಂಧಿತ ಪಾಕಿಸ್ತಾನಿ ಮಹಿಳೆ, ಭಟ್ಕಳ ಮೂಲದ ಜಾವೀದ್ ಮೊಹಿದ್ದೀನ್ ರುಕ್ನುದ್ದೀನ್ ನನ್ನು 8 ವರ್ಷಗಳ ಹಿಂದೆ ದುಬೈನಲ್ಲಿ ವಿವಾಹವಾಗಿದ್ದಳು. ಈ ವೇಳೆ 2014ರಲ್ಲಿ ಪ್ರವಾಸಿ ವಿಸಾ ಪಡೆದು 3 ತಿಂಗಳು ಭಾರತಕ್ಕೆ ಬಂದು ವಾಪಸ್ ತೆರಳಿದ್ದಳು. ನಂತರ 2015ರಲ್ಲಿ ಕಳ್ಳ ಮಾರ್ಗದ ಮೂಲಕ ಭಾರತ ಪ್ರವೇಶಿಸಿ ಯಾವುದೇ ದಾಖಲೆ ನೀಡದೇ ಅಕ್ರಮವಾಗಿ ಭಾರತಕ್ಕೆ ಮರು ಪ್ರವೇಶ ಪಡೆದಿದ್ದಳು.

ನಂತರ ಭಟ್ಕಳದ ನವಾಯತ ಕಾಲೋನಿಯಲ್ಲಿ ಕಳೆದ 8 ವರ್ಷಗಳಿಂದ 3 ಮಕ್ಕಳೊಂದಿಗೆ ಭಟ್ಕಳದಲ್ಲೇ ವಾಸ್ತವ್ಯ ಹೂಡಿದ್ದಾಳೆ. ಅಲ್ಲದೆ ಸುಳ್ಳು ದಾಖಲೆ ನೀಡಿ ಓಟರ್ ಐಡಿ, ರೇಷನ್ ಕಾರ್ಡ್, ಜನ್ಮ ದಾಖಲೆ ಪಡೆದಿದ್ದಳು. ಈ ಕುರಿತು ಖಚಿತ ಮಾಹಿತಿ ಕಲೆಹಾಕಿದ್ದ ಭಟ್ಕಳ ನಗರ ಪೊಲೀಸರು, ಐಪಿಸಿ ಸೆಕ್ಷನ್ 468, 471 ಅಡಿ ಪ್ರಕರಣ ದಾಖಲಿಸಿಕೊಂಡು, ಇದೀಗ ಮಹಿಳೆಯನ್ನು ಬಂಧಿಸಿದ್ದಾರೆ.

ಈಕೆ ಭಾರತದಲ್ಲಿ ಅಕ್ರಮವಾಗಿ ನೆಲೆಸಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕೆಲವು ತಿಂಗಳುಗಳಿಂದ ಸ್ಥಳೀಯ ಪೊಲೀಸರು ಇತರ ತನಿಖಾ ಸಂಸ್ಥೆಯ ಸಹಕಾರದೊಂದಿಗೆ ಪತ್ತೆಗೆ ಸತತವಾಗಿ ಪ್ರಯತ್ನಿಸಿ, ಅಕ್ರಮವಾಗಿ ವಾಸವಾಗಿದ್ದ ಈಕೆಯನ್ನು ಅಂತೂ ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈಕೆಯ ಮೇಲೆ ವಿದೇಶಿ ಕಾಯಿದೆ ಉಲ್ಲಂಘನೆ ಮತ್ತು ಇತರೆ ಐಪಿಸಿ ಪ್ರಕರಣಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಈಕೆಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಿದೆ ಎಂದು ತಿಳಿಸಿದ್ದಾರೆ.

ಈ ಕಾರ್ಯಾಚರಣೆಯು ಎಸ್ ಪಿ ಶಿವಪ್ರಕಾಶ್ ದೇವರಾಜು, ಎಎಸ್ ಪಿ ಬದರಿನಾಥ, ಭಟ್ಕಳ ಡಿವೈಎಸ್ ಪಿ ಬೆಳ್ಳಿಯಪ್ಪ ಕೆ.ಯು. ಹಾಗೂ ಸಿಪಿಐ ದಿವಾಕರ ಪಿ.ಎಮ್ ಅವರ ಮಾರ್ಗದರ್ಶನ ಹಾಗೂ ಸೂಚನೆಯ ಮೇರೆಗೆ ಭಟ್ಕಳ ನಗರ ಪೊಲೀಸ್ ಠಾಣಿಯ ಪಿಎಸ್ಐ ಸುಮಾ ಬಿ. ಮತ್ತು ಸಿಬ್ಬಂದಿ ನಾರಾಯಣ ನಾಯ್ಕ, ಮುಗ್ದುಂ ಪತ್ತೆಖಾನ್, ಲೋಕಪ್ಪ ಪತ್ತಿ, ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ಮಹಿಳಾ ಸಿಬ್ಬಂದಿ ಹೀನಾ ಎಫ್. ತಂಡದಿಂದ ನಡೆದಿತ್ತು.

Spread the love

Related Articles

Leave a Reply

Your email address will not be published.

Back to top button
Flash News