MoreScrollUncategorizedಸಿನೆಮಾ ಹಂಗಾಮ

ಡಿಕೆ ರವಿ ಪಾತ್ರದಲ್ಲಿ ನಟಿಸೋಕೆ ಚಕ್ರವರ್ತಿ ಚಂದ್ರಚೂಡ್​ಗೆ ಬಂದಿದೆಯಂತೆ ಆಫರ್​: ಆದ್ರೆ 2 ಕಂಡೀಷನ್ಸ್ ಅಪ್ಲೈ..

ಕಳೆದ ಕೆಲವು ದಿನಗಳಿಂದ ರೋಹಿಣಿ ಸಿಂಧೂರಿ ಅವರ ಹೆಸರು ದೊಡ್ಡ ಮಟ್ಟದಲ್ಲಿ ಸುದ್ದಿ ಆಗುತ್ತಿದೆ. ಮೈಸೂರಿನಲ್ಲಿ ರಾಜಕೀಯ ಜಟಾಪಟಿ ಜೋರಾಗುತ್ತಿದ್ದಂತೆಯೇ ಗಾಂಧಿನಗರದಲ್ಲಿ ರೋಹಿಣಿ ಸಿಂಧೂರಿ ಅವರ ಕುರಿತು ಸಿನಿಮಾ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ರೋಹಿಣಿ ಪಾತ್ರದಲ್ಲಿ ನಟಿ ಅಕ್ಷತಾ ಪಾಂಡಪುರ ನಟಿಸುತ್ತಾರೆ ಎಂಬ ಸುದ್ದಿ ಕೇಳಿಬಂದಿದೆ.

ಈ ನಡುವೆ ಪತ್ರಕರ್ತ ಹಾಗೂ ಸಿನಿಮಾ ನಿರ್ದೇಶಕ, ಬಿಗ್‍ಬಾಸ್ ಸೀಸನ್-8ರಲ್ಲಿ ಸ್ಪರ್ಧಿಸುವ ಮೂಲಕ ಫೇಮಸ್ ಆದ ಚಕ್ರವರ್ತಿ ಚಂದ್ರಚೂಡ್‍ರವರಿಗೆ ದಿವಂಗತ ಐಎಎಸ್ ಅಧಿಕಾರಿ ಡಿ.ಕೆ ರವಿ ಪಾತ್ರದಲ್ಲಿ ಅಭಿನಯಿಸಲು ಸಿನಿಮಾ ಒಂದರ ಆಫರ್ ಸಿಕ್ಕಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಬಿಗ್‍ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟು, ಇದ್ದ ಅಲ್ಪಾವಧಿಯಲ್ಲಿಯೇ ಚಕ್ರವರ್ತಿ ಚಂದ್ರಚೂಡ್‍ರವರು ಸಖತ್ ಸುದ್ದಿಯಾಗಿದ್ದರು. ಆದರೆ ಕೊರೊನಾದಿಂದ ಅರ್ಧದಲ್ಲಿಯೇ ಬಿಗ್‍ಬಾಸ್ ಕಾರ್ಯಕ್ರಮವನ್ನು ರದ್ದುಗೊಳಿಸಬೇಕಾಯಿತು. ಸದ್ಯ ಕೊರೊನಾ ಲಾಕ್‍ಡೌನ್‍ನಿಂದ ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿರುವ ಚಕ್ರವರ್ತಿ ಚಂದ್ರಚೂಡ್‍ರವರಿಗೆ ದಿವಂಗತ ಐಎಎಸ್ ಅಧಿಕಾರಿ ಡಿ.ಕೆ ರವಿಯವರ ಪಾತ್ರದಲ್ಲಿ ಅಭಿನಯಿಸಲು ಆಫರ್ ಬಂದಿದ್ಯಂತೆ. ಆದರೆ ನಟಿಸಬೇಕೋ ಬೇಡವೋ ಎಂಬ ಬಗ್ಗೆ ಅವರಿನ್ನೂ ತೀರ್ಮಾನ ತೆಗೆದುಕೊಂಡಿಲ್ಲ.

ಈ ಕುರಿತಂತೆ ಅವರು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಸಾ ರಾ ಮಹೇಶೂ ಡಿಕೆ ರವಿ ಪಿಕ್ಚರ್ ತಗೀತಾರಂತೆ. ಇತ್ತ ರೋಹಿಣಿ ಸಿಂಧೂರಿ ಸಿನಿಮಾ ಘೋಷಣೆಯಾಗಿದೆ. ನಿನ್ನೆ ಹೊಸ ಡೈರೆಕ್ಟರೊಬ್ಬರು ಡಿ.ಕೆ. ರವಿ ಪಾತ್ರ ಮಾಡ್ತೀರಾ ಅಂತ ಕೇಳಿದ್ರು. ಎರಡು ಕಂಡಿಷನ್ ಹಾಕಿದೀನಿ. ಆ 37 ಮೆಸೇಜ್ ತೋರಿಸ್ತೀರಾ ಸಿನಿಮಾದಲ್ಲಿ? ಇನ್ನೊಂದು bxjwoaabxಹೊಝಖಿಧಟಿ#*%833 (ದುಡ್ಡಲ್ಲ). ನೋಡಣ.. ಮುಂದಾ…’ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

ಚಕ್ರವರ್ತಿ ಚಂದ್ರಚೂಡ್​ ಅವರ ಈ ಪೋಸ್ಟ್ ಕಂಡು ನೆಟ್ಟಿಗರು ಹಲವು ಬಗೆಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಇದು ಸೂಕ್ತ ಆಯ್ಕೆ ಎಂದು ಕೆಲವರು ಹೇಳಿದ್ದಾರೆ. ಆದರೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ‘ಈ ಸಿನಿಮಾ ಮಾಡಬೇಡಿ. ರಾಜಕೀಯ ಕೆಸರೆರೆಚಾಟದಲ್ಲಿ ನಿಮ್ಮ ಹೆಸರು ಬೇಡ. ಒಳ್ಳೆಯ ಸಂದೇಶ ಇರುವ ಪಾತ್ರಗಳನ್ನು ಮಾಡಿ. ಆದಷ್ಟು ಜಾಗ್ರತೆ ಇರಲಿ. ಪರಿಸ್ಥಿತಿ ಸರಿಯಿಲ್ಲ’ ಎಂಬಿತ್ಯಾದಿ ಕಮೆಂಟ್​ಗಳು ಬಂದಿವೆ.

Spread the love

Related Articles

Leave a Reply

Your email address will not be published.

Back to top button
Flash News