MoreScrollUncategorizedಸಿನೆಮಾ ಹಂಗಾಮ

ಸಿಂಪಲ್ ಆಗಿ ಮದುವೆಯಾದ ಆಕ್ಟರ್ ಕಮ್ ಕಾಮಿಡಿಯನ್ ಡ್ಯಾನಿಶ್ ಸೇಠ್..

ಬೆಂಗಳೂರು: ಕಾಮಿಡಿಯನ್ ಮತ್ತು ನಟ ಡ್ಯಾನಿಶ್ ಸೇಠ್ ಅನ್ಯಾ ರಂಗಸ್ವಾಮಿ ಜೊತೆ ಸಿಂಪಲ್ ಆಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಂಡಿಯನ್ ಪ್ರಿಮಿಯರ್ ಲೀಗ್ ಪಂದ್ಯದ ವೇಳೆ ಆರ್​ಸಿಬಿ ತಂಡದ ಜೊತೆ ಇದ್ದು, ಕ್ರಿಕೆಟಿಗರ ಕಾಲೆಳೆಯುತ್ತ ಅಭಿಮಾನಿಗಳಿಗೆ ನಗುವಿನ ಕಚಗುಳಿ ನೀಡುವ ಮೂಲಕ ಕನ್ನಡಿಗರ ಮನಗೆದ್ದಿದ್ದ ಡ್ಯಾನಿಶ್ ಸೇಠ್ ತಮ್ಮ ಬಹುಕಾಲದ ಗೆಳತಿ ಕೈ ಹಿಡಿದಿದ್ದಾರೆ.

ಈ ಬಗ್ಗೆ ದಾನಿಶ್​ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ‘ನಾನು ಮತ್ತು ಅನ್ಯಾ ನಮ್ಮ ಕುಟುಂಬದವರು ಹಾಗೂ ಆಪ್ತರು ಎನಿಸಿಕೊಂಡ 15 ಜನರ ಸಮ್ಮುಖದಲ್ಲಿ ಉಂಗುರ ಬದಲಾಯಿಸಿಕೊಂಡೆವು. ಜೂನ್​ 9ರಂದು ನಾವು ಮದುವೆ ನೋಂದಣಿ ಮಾಡಿಕೊಂಡಿದ್ದೆವು. ನಮ್ಮನ್ನು ನೀವು ಆಶೀರ್ವದಿಸಿ’ ಎಂದು ಡ್ಯಾನಿಶ್​ ಬರೆದುಕೊಂಡಿದ್ದಾರೆ. ಜತೆಗೆ, ಫೋಟೋಗಳನ್ನು ಕೂಡ ಅವರು ಹಂಚಿಕೊಂಡಿದ್ದಾರೆ.

ಫೋಟೋದಲ್ಲಿ ಡ್ಯಾನಿಶ್ ಹಾಗೂ ಅನ್ಯಾ ರಂಗಸ್ವಾಮಿ ಆಡಂಬರದ ಮದುವೆಗೆ ಬ್ರೇಕ್ ಹಾಕಿ ಕೊರೊನಾ ಮಧ್ಯೆ ಬಹಳ ಸರಳವಾಗಿ ರಿಜಿಸ್ಟರ್ ಮ್ಯಾರೇಜ್ ಆಗಿರುವುದನ್ನು ಕಾಣಬಹುದಾಗಿದೆ. ಇನ್ನೂ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ಡ್ಯಾನಿಶ್ ಅಭಿಮಾನಿಗಳು ಸೇರಿದಂತೆ ಅನೇಕ ಸೆಲೆಬ್ರೆಟಿಗಳು ಶುಭ ಹಾರೈಸುತ್ತಿದ್ದಾರೆ.

2018ರಲ್ಲಿ ಡ್ಯಾನಿಶ್ ಸೇಠ್ ಕನ್ನಡದ ಹಂಬಲ್ ಪೊಲಿಟಿಷಿಯನ್ ನಾಗರಾಜ್ ಸಿನಿಮಾದಲ್ಲಿ ಅಭಿನಯಿಸಿದ್ದರು. ಕಳೆದ ವರ್ಷಫ್ರೆಂಚ್ ಬಿರಿಯಾನಿ ಸಿನಿಮಾದಲ್ಲಿ ನಟಿಸುವ ಮೂಲಕ ಪ್ರೇಕ್ಷಕರನ್ನು ಹಾಸ್ಯದ ಹೊನಲಿನಲ್ಲಿ ತೇಲಿಸಿದ್ದರು. 2020ರ ಡಿಸೆಂಬರ್​ 11ರಂದು  ಡ್ಯಾನಿಶ್ ತಮ್ಮ ರಿಲೇಶನ್​ಶಿಪ್​ ಬಗ್ಗೆ ಹೇಳಿಕೊಂಡಿದ್ದರು. ‘ಅವಳು ಯೆಸ್​ ಎಂದಳು. ನಿನ್ನ ಉಳಿದ ಜೀವನವನ್ನು ನನ್ನ ಜತೆ ಕಳೆಯೋಕೆ ನಿರ್ಧರಿಸಿದ್ದಕ್ಕೆ ಧನ್ಯವಾದಗಳು’ ಎಂದು ಅನ್ಯಾ ರಾಘವನ್​ ಫೋಟೋವನ್ನು ​ಡ್ಯಾನಿಶ್ ಪೋಸ್ಟ್​ ಮಾಡಿದ್ದರು.

Spread the love

Related Articles

Leave a Reply

Your email address will not be published.

Back to top button
Flash News