CORONA VIRUSlock downMoreScrollUncategorized

ಕೊರೊನಾ ಹೊಡೆತಕ್ಕೆ ಸಿಲುಕಿ, ದುಡಿಮೆ ಇಲ್ಲದೇ ಫೇಸ್ಬುಕ್ ಲೈವ್ ನಲ್ಲಿಯೇ ಆತ್ಮಹತ್ಯೆಗೆ ಯತ್ನಿಸಿದ ಕಿರುತೆರೆ ನಟ..

ಕೊರೋನಾ ಸೋಂಕಿನಿಂದ ಸಾವೀಗೀಡಾಗುತ್ತಿರುವ ಸಂಖ್ಯೆ ಆತಂಕ ತರುತ್ತಿದೆ ನಿಜ. ಆದರೆ ಕೊರೋನಾ ಹಾಗೂ ಲಾಕ್‌ಡೌನ್ ಕಾರಣ ಆರ್ಥಿಕ, ಮಾನಸಿಕ, ಬಡತನ ಸೇರಿದತೆ ಹಲವು ಸಂಕಷ್ಟದಿಂದ ಪ್ರಾಣಬಿಡುತ್ತಿರುವವರ ಸಂಖ್ಯೆ ಮತ್ತಷ್ಟು ಆತಂಕ ತರುತ್ತಿದೆ. ಅದರಲ್ಲೂ ಕಲಾವಿದರ ಸಂಕಷ್ಟ ಹೇಳತೀರದು.

ಕೊರೊನಾ ವೈರಸ್​ ಎರಡನೇ ಅಲೆ ಜೋರಾದ ಹಿನ್ನೆಲೆಯಲ್ಲಿ ಲಾಕ್​ಡೌನ್​ ಘೋಷಣೆ ಮಾಡಲಾಗಿದೆ. ಚಿತ್ರರಂಗದ ಕೆಲಸಗಳು ಅರ್ಧಕ್ಕೆ ನಿಂತಿದ್ದು, ಸಾಕಷ್ಟು ಕಲಾವಿದರು ಕೆಲಸ ಇಲ್ಲದೆ ಮನೆಯಲ್ಲಿ ಕೂರುವಂತಾಗಿದೆ. ಕೆಲ ಕಲಾವಿದರಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ. ಅದೇ ರೀತಿ ಕೆಲಸ ಇಲ್ಲದೆ, ಕಿರುತೆರೆ ನಟನೋರ್ವ ಫೇಸ್​ಬುಕ್​ ಲೈವ್​ನಲ್ಲೇ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ.

ಸುವೋ ಚಕ್ರವರ್ತಿ ಬೆಂಗಾಲಿ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ. ಸರ್ಕಾರ ಹೇರಿರುವ ಲಾಕ್​ಡೌನ್​ನಿಂದ ಅವರಿಗೆ ಕೆಲಸ ಇಲ್ಲದಾಗಿದೆ. ಹೀಗಾಗಿ, ಆರ್ಥಿಕ ಮುಗ್ಗಟ್ಟು ಎದುರಿಸಲು ಸಾಧ್ಯವಾಗದೇ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ.

ಜೀವನದಲ್ಲಿ ಜಿಗುಪ್ಸೆಗೊಂಡು ನಟ ಫೇಸ್ ಬುಕ್ ಲೈವ್ ನಲ್ಲಿದ್ದಾಗಲೇ ನಿದ್ದೆ ಮಾತ್ರೆ ತೆಗೆದುಕೊಂಡು ಸಾವಿನ ದಾರಿ ಹಿಡಿಯಲು ಮುಂದಾಗಿದ್ದಾರೆ. ಲೈವ್ ನಲ್ಲಿ ನಟ, ಯಾಕೋ ಗೊತ್ತಿಲ್ಲ ನನಗೆ ಕಟ್ಟಡದಿಂದ ಹಾರಿ, ಕೈ ಕಟ್ ಮಾಡಿಕೊಂಡು ಹಿಂಸಾತ್ಮಕವಾಗಿ ಸಾಯಲು ಮನಸ್ಸಿಲ್ಲ. ಇದು ನನಗೆ ಇಷ್ಟನೂ ಇಲ್ಲ. ನನಗೆ ಕೊನೆಯ ಆಯ್ಕೆ ಸಿಕ್ಕಿದ್ದು ನಿದ್ದೆ ಮಾತ್ರೆ. ಹೀಗಾಗಿ ನಿದ್ದೆ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದೇನೆ. ಯಾರಿಗೆ ಅತೀ ಹೆಚ್ಚು ಬಿಪಿ ಇದೆಯೋ ಅವರು ಹೃದಯಾಘಾತವಾಗಿ ಸಾಯುತ್ತಾರೆ ಎಂದೆಲ್ಲ ಹೇಳಿದ್ದಾರೆ.

ನಟನ ಮಾತುಗಳನ್ನು ಕೇಳಿದ ಅಭಿಮಾನಿಗಳು ಒಂದು ಕ್ಷಣ ಗಾಬರಿಗೊಂಡಿದ್ದಾರೆ. ಅಲ್ಲದೆ ಅನುಮಾನಗೊಂಡು ಕೂಡಲೇ ಸ್ಥಳೀಯ ಪೊಲಿಸ್ ಠಾಣೆಗೆ ಮಾಹಿತಿ ರವಾನಿಸಿದ್ದಾರೆ. ಇತ್ತ ನಟನ ಆತ್ಮಹತ್ಯೆಯ ಯತ್ನದ ವಿಚಾರ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಜೀವ ಕಾಪಾಡಿದ್ದಾರೆ. ಸದ್ಯ ನಟನ ಆರೋಗ್ಯ ಸ್ಥಿತಿ ಸುಧಾರಿಸಿದೆ.

Spread the love

Related Articles

Leave a Reply

Your email address will not be published.

Back to top button
Flash News