CORONA LOCKDOWN HEROESCORONA VIRUSlock downMoreScrollUncategorizedಸಿನೆಮಾ ಹಂಗಾಮ

ಸೋನು ಸೂದ್ ಭೇಟಿಯಾಗಲು 700 ಕಿ.ಮೀ. ಪಾದಯಾತ್ರೆ ಮಾಡಿದ ಯುವಕ: ಬುದ್ಧಿಮಾತು ಹೇಳಿದ ರಿಯಲ್​ ಹೀರೋ..

ನಟ ಸೋನು ಸೂದ್​ ಅವರು ಲಕ್ಷಾಂತರ ಜನರ ಪಾಲಿಗೆ ರಿಯಲ್​ ಹೀರೋ ಆಗಿದ್ದಾರೆ ಎಂಬುದರಲ್ಲಿ ಎರಡನೇ ಮಾತಿಲ್ಲ. ಕಳೆದ ವರ್ಷ ಲಾಕ್​ಡೌನ್​ ಆರಂಭ ಆದಾಗಿನಿಂದಲೂ ಅವರು ಹಲವು ಬಗೆಯಲ್ಲಿ ಜನರಿಗೆ ಸಹಾಯ ಮಾಡಿದ್ದಾರೆ. ಹಾಗಾಗಿ ಅವರಿಗೆ ಅಸಂಖ್ಯ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ನೂರಾರು ಬಗೆಯಲ್ಲಿ ತಮ್ಮ ಅಭಿಮಾನವನ್ನು ವ್ಯಕ್ತಪಡಿಸುವ ಜನರಿದ್ದಾರೆ. ಇತ್ತೀಚೆಗೆ ವೆಂಕಟೇಶ್​ ಎಂಬ ಯುವಕ ಎಲ್ಲರ ಗಮನ ಸೆಳೆದಿದ್ದಾನೆ. ಸೋನು ಸೂದ್​ ಅವರನ್ನು ಭೇಟಿ ಮಾಡಬೇಕು ಎಂಬ ಕಾರಣಕ್ಕೆ ಆತ ಬರೋಬ್ಬರಿ 700 ಕಿಲೋ ಮೀಟರ್​ ನಡೆದಿದ್ದಾನೆ.

ಸೋನು ಅವರ ಅಭಿಮಾನಿ ವೆಂಕಟೇಶ್ ಹೈದರಾಬಾದ್ ಮೂಲದವನು. ಈತನಿಗೆ ಸೋನು ಸೂದ್ ಕಂಡರೆ ಅಪಾರ ಗೌರವ. ಹೀಗಾಗಿ ಸೋನು ಅವರನ್ನು ಭೇಟಿ ಮಾಡಲು ಬರಿಗಾಲಿನಲ್ಲಿ ಹೈದರಾಬಾದ್‍ನಿಂದ ಮುಂಬೈವರೆಗೆ ಬರೋಬ್ಬರಿ 700 ಕಿಲೋಮೀಟರ್ ಪಾದಯಾತ್ರೆ ಮಾಡಿದ್ದಾನೆ. ಈತನ ಅಭಿಮಾನ ಕಂಡು ಸೋನು ಸೂದ್ ಖುಷಿ ಆಗಿದ್ದಾರೆ ಎಂಬುದೇನೋ ನಿಜ. ಆದರೆ ಬೇರೆ ಯಾರೂ ಹೀಗೆ ಮಾಡಬೇಡಿ ಎಂದು ತಮ್ಮ ಅಭಿಮಾನಿ ಬಳಗಕ್ಕೆ ಅವರು ಬುದ್ಧಿಮಾತು ಹೇಳಿದ್ದಾರೆ.

ನನ್ನನ್ನು ಭೇಟಿಯಾಗಲು ವೆಂಕಟೇಶ್​ ಹೈದರಾಬಾದ್​ನಿಂದ ಮುಂಬೈವರೆಗೆ ಬರಿಗಾಲಿನಲ್ಲಿ ನಡೆದುಕೊಂಡು ಬಂದಿದ್ದಾನೆ. ಅವನಿಗೆ ವಾಹನದ ವ್ಯವಸ್ಥೆ ಮಾಡಿದರೂ ಕೂಡ ಅವನು ಅದನ್ನು ಒಪ್ಪಲಿಲ್ಲ. ಅವನು ನನಗೆ ಸ್ಫೂರ್ತಿದಾಯಕವಾಗಿದ್ದಾನೆ. ಆದರೆ ಬೇರೆ ಯಾರೂ ಕೂಡ ಈ ರೀತಿ ಬರಿಗಾಲಿನಲ್ಲಿ ಪಾದಯಾತ್ರೆ ಮಾಡುವ ಕಷ್ಟವನ್ನು ತೆಗೆದುಕೊಳ್ಳಲು ನಾನು ಪ್ರೇರಣೆ ನೀಡುವುದಿಲ್ಲ’ ಎಂದು ಸೋನು ಸೂದ್​ ತಿಳಿಸಿದ್ದಾರೆ.

ಈ ವರ್ಷ ದೇಶಾದ್ಯಂತ ಕೊರೊನಾ ವೈರಸ್​ ಎರಡನೇ ಅಲೆ ಆರಂಭ ಆದಾಗ ಸೋನು ಸೂದ್​ ಅವರು ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡಿದರು. ಅವರ ಸೂದ್ ಚಾರಿಟಿ ಫೌಂಡೇಶನ್ ಮೂಲಕ ಲಕ್ಷಾಂತರ ಜನರಿಗೆ  ನೆರವಾಗಿದ್ದಾರೆ. ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಥೆ ಮಾಡಿಸುವುದು, ಆಕ್ಸಿಜನ್ ಸಿಲಿಂಡರ್‍ಗಳನ್ನು ಪೂರೈಸುವುದು, ಹಸಿದವರಿಗೆ ಉಚಿತವಾಗಿ ಊಟ ನೀಡುವ ಕೆಲಸವನ್ನು ಮಾಡುತ್ತಿದ್ದಾರೆ. ಸೋನು ಅವರ ಈ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Spread the love

Related Articles

Leave a Reply

Your email address will not be published.

Back to top button
Flash News