CORONA LOCKDOWN HEROESCORONA VIRUSMoreScrollUncategorized

ಕೊರೊನಾ ಸೋಂಕಿತರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ಆರೋಗ್ಯಾಧಿಕಾರಿ..

ಕೊರೊನಾ ವೈರಸ್ ಇಡೀ ಮಾನವ ಸಂಕುಲವನ್ನೆ ಅಲ್ಲೋಲ ಕಲ್ಲೋಲ ಮಾಡಿದೆ. ಸಂಘಜೀವಿಯಾಗಿ ಎಲ್ಲರೊಡಗೂಡಿ ಬದುಕುತ್ತಿದ್ದ ಮನುಷ್ಯ ಈ ಕೊರೊನಾ ಮಹಾಮಾರಿಯಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾನೆ. ಕೊರೊನಾ ಸೋಂಕು ಅಂದರೆ ಎಲ್ಲರಿಗೂ ಭಯ. ಸೊಂಕಿತರ ಹತ್ತಿರ ಹೋಗಲು ಭಯ ಪಡುತ್ತಾರೆ.

ಹೀಗಿರುವಾಗ ಸಮುದಾಯ ಆರೋಗ್ಯಾಧಿಕಾರಿ ಕೊವಿಡ್ ಕೇರ್ ಸೆಂಟರ್ನಲ್ಲಿ ತಮ್ಮ ಬರ್ತ್ ಡೇ ಆಚರಿಸಿಕೊಂಡಿದ್ದಾರೆ. ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಕಲಕೇರಿ ಕೊವಿಡ್ ಕೇರ್ ಸೆಂಟರ್ನಲ್ಲಿ ಕೊರೊನಾ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಲು ಸಮುದಾಯ ಆರೋಗ್ಯಾಧಿಕಾರಿ ಸಂಜೀವ ಗಾಜೀಗೌಡ್ರ 2 ಕೆ.ಜಿ ಕೇಕ್ ತೆಗೆದುಕೊಂಡು ಬಂದು  ಸೋಂಕಿತರೊಂದಿಗೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡದ್ದಾರೆ.

ಕೋವಿಡ್ ಕೇರ್ ಸೆಂಟರ್ ನಲ್ಲೇ ನೈಟ್ ಡ್ಯೂಟಿ ಇದ್ದಿದ್ದರಿಂದ ಪಿಪಿಇ ಕಿಟ್ ಧರಿಸಿಕೊಂಡು ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಅನ್ನೋ ಹಾಡಿಗೆ ಸೋಂಕಿತರೊಂದಿಗೆ ಭರ್ಜರಿ ಸ್ಟೆಪ್ಸ್ ಹಾಕಿ ಆತ್ಮ ಸ್ಥೈರ್ಯ ತುಂಬುವ ಕಾರ್ಯ ಮಾಡಿದ್ದಾರೆ. ಮನೆಯಲ್ಲಿ ಪತ್ನಿ, ಇಬ್ಬರು ಮಕ್ಕಳು ಮತ್ತು ತಂದೆ ತಾಯಿ ಇದ್ದರು ಸೋಂಕಿತರಲ್ಲಿ ಆತ್ಮಸ್ಥೈರ್ಯ ತುಂಬಲು ಕೋವಿಡ್ ಕೇರ್ ಸೆಂಟರ್ ನಲ್ಲಿ ಬರ್ತ್ ಡೇ ಆಚರಣೆ ಮಾಡಿದ್ದು ವಿಶೇಷವಾಗಿತ್ತು. ಕೊವಿಡ್ ಕೇರ್ ಸೆಂಟರ್ನಲ್ಲಿ ತಮ್ಮ ಜನುಮ ದಿನ ಆಚರಿಸಿ ಸೋಂಕಿತರ ಮುಖದಲ್ಲಿ ನಗು ಮೂಡಿಸಿದ್ದಾರೆ.

Spread the love

Related Articles

Leave a Reply

Your email address will not be published.

Back to top button
Flash News