MoreScrollTop NewsUncategorized

ರೋಹಿಣಿ ಸಿಂಧೂರಿ ವಿರುದ್ಧ ಮತ್ತೊಂದು ಗಂಭೀರ ಆರೋಪ..! ಮೈಸೂರಿನಲ್ಲಿ 166 ಕಾಮಗಾರಿಗಳಿಗೆ 986 ಲಕ್ಷ ಖರ್ಚು.. ತುರ್ತು ಕಾಮಗಾರಿ ಹೊರತುಪಡಿಸಿಯೂ ಕೋಟ್ಯಾಂತರ ರೂಪಾಯಿ ವೆಚ್ಚ..!

ಈ ಹಿಂದೆ ಮೈಸೂರಿನ ಮಾಜಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವರ ಮೇಲೆ ಮೇ 2 ರಂದು ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ 37 ಜನ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿ, ಜಿಲ್ಲಾಸ್ಪತ್ರೆಗೆ ಆಕ್ಸಿಜನ್ ಪೂರೈಕೆ ಮಾಡದಂತೆ ಮೌಖಿಕ ಆದೇಶ ನೀಡಿದ್ರಾ ಎಂಬ ಆರೋಪ ಕೇಳಿಬಂದಿತ್ತು. ಇದರ ಬೆನ್ನಲ್ಲೇ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಯವರ ಮೇಲೆ ಮತ್ತೊಂದು ಆರೋಪ ಕೇಳಿ ಬಂದಿದೆ.

ಹೌದು ಮೈಸೂರಿನಲ್ಲಿ 2020-21ರ ಸಾಲಿನಲ್ಲಿ ನಡೆದಿರುವ 166 ಕಾಮಗಾರಿಗಳಿಗೆ 986 ಲಕ್ಷ ರೂ. ಖರ್ಚಾಗಿದ್ದು, ತುರ್ತು ಕಾಮಗಾರಿಯನ್ನು ಹೊರತುಪಡಿಸಿಯೂ ಕೋಟ್ಯಾಂತರ ವೆಚ್ಚವಾಗಿರುವು ಕಂಡುಬಂದಿದೆ.
ಲೋಕೋಪಯೋಗಿ ಇಲಾಖೆ ನೀಡಿರುವ ದಾಖಲೆಯಲ್ಲಿ ಈ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಆರ್‌ಟಿಐ ಕಾರ್ಯಕರ್ತ ಮಾಲೀಪಾಟೀಲ್ ಅವರಿಗೆ ಇದರ ಮಾಹಿತಿಯನ್ನು ನೀಡಲಾಗಿದೆ.

ತುರ್ತು ಉದ್ದೇಶಗಳಿದ್ದರೆ ಮಾತ್ರ ಯೋಜನೆಗೆ ಅವಕಾಶ ನೀಡಲಾಗಿತ್ತು. ಅತ್ಯಂತ ಅವಶ್ಯಕತೆ ಇದ್ದರೆ ಮಾತ್ರ ಮಂಜೂರಾತಿ ನೀಡಬೇಕೆನ್ನುವ ನಿಯಮವನ್ನೂ ಹೇರಲಾಗಿತ್ತು. ಅಲ್ಲದೇ 2020-21ರಲ್ಲಿ ಕೊರೊನಾ ಹಾವಳಿ ಜೋರಾಗಿತ್ತು. ಈ ಸಮಯದಲ್ಲೇ 9.86 ಕೋಟಿ ಮೊತ್ತದ ಹಣಕ್ಕೆ ಮಂಜೂರಾತಿಯನ್ನ ನೀಡಲಾಗಿತ್ತು. ಇದರಲ್ಲಿ 166 ಕಾಮಗಾರಿಗಳಿಗೆ 986 ಲಕ್ಷ ಖರ್ಚು ಹೇಗಾಯ್ತು?

ಕೋವಿಡ್ ಸನ್ನಿವೇಶದಲ್ಲಿ ಎಲ್ಲಾ 166ಕಾಮಗಾರಿಗಳ ತುರ್ತಿನವದ್ದಾಗಿದ್ವಾ? ಮೇಲ್ನೋಟಕ್ಕೆ ಅವುಗಳಲ್ಲಿ ಬಹುತೇಕ ಅನಗತ್ಯ ಕಾಮಗಾರಿಗಳೆನ್ನುವುದು ಮಾಹಿತಿಯಲ್ಲಿ ಉಲ್ಲೇಖವಾಗಿದೆ. ನವೀಕರಣ ಕಾಮಗಾರಿಗಳಿಗೆ ಭರ್ಪೂರ್ ಹಣ ಬಿಡುಗಡೆ ಮಾಡಲಾಗಿದೆ. ಮಾಜಿ ಮೈಸೂರು ಡಿಸಿ ರೋಹಿಣಿ ಸಿಂಧೂರಿ, ಮುಂದಾಲೋಚನೆಯನ್ನೂ ಮಾಡ್ದೇ, ಪರಿಸ್ಥಿತಿಯನ್ನೂ ಅವಲೋಕಿಸದೇ ಮಂಜೂರಾತಿ ನೀಡಿದ್ರಾ? ಎಂದು ಸಿಂಧೂರಿ ಅವರ ಕ್ರಮಕ್ಕೆ ಸಾಮಾಜಿಕ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಸತಿ ಗೃಹ ಪ್ರವಾಸಿ ಮಂದಿರಗಳ ನವೀಕರಣಕ್ಕೆ ಹೆಚ್ಚು ಹಣ ಖರ್ಚು ಮಾಡಲಾಗಿದೆ. ಕುಡಿಯುವ ನೀರು ಪೂರೈಕೆ, ಸುಣ್ಣ-ಬಣ್ಣಕ್ಕೆ ಲಕ್ಷ ಲಕ್ಷ ಮಂಜೂರು ಮಾಡಲಾಗಿದೆ. ಇನ್ನೂ ಎಲೆಕ್ಟ್ರಿಕಲ್ ಕಾಮಗಾರಿಗಳಿಗೂ ದಾರಾಳವಾಗಿ ಹಣ ಖರ್ಚು ಮಾಡಲಾಗಿದೆ. ಎಸಿ ಮೆಟೆನ್, ಎಲ್‌ಇಡಿ ಅಳವಡಿಕೆ, ಯುಪಿಎಸ್ ರೀಪೇರಿಗೂ ಹಣ ಖರ್ಚು ಮಾಡಲಾಗಿದೆ. ಪೀಠೋಪಕರಣ, ಶೌಚಾಲಯಗಳ ನಿರ್ವಹಣೆಗೆಯೇ ಲಕ್ಷ ಲಕ್ಷ ಖರ್ಚು ಬಿಡುಗಡೆ ಮಾಡಿರುವ ಹಣದ ಬಗ್ಗೆಯೇ ಸಾಕಷ್ಟು ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಸರ್ಕಾರಕ್ಕೆ ದೂರು ನೀಡಲು ಮಾಲಿಪಾಟೀಲ್ ನಿರ್ಧರಿಸಿದ್ದಾರೆ.

Spread the love

Related Articles

Leave a Reply

Your email address will not be published.

Back to top button
Flash News