CORONA VIRUSlock downMoreScrollUncategorizedಸಿನೆಮಾ ಹಂಗಾಮ

ಅರ್ಧಕ್ಕೆ ನಿಂತ “ಬಿಗ್ ಬಾಸ್” ಸೀಸನ್ 8.. ಮತ್ತೆ ಶೋ ಮುಂದುವರಿಯುತ್ತಾ..?

ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 8 ಕೊರೋನಾ ಲಾಕ್‌ಡೌನ್‌ ಕಾರಣದಿಂದ ಅರ್ಧಕ್ಕೇ ನಿಲ್ಲಿಸುವಂತ  ಪರಿಸ್ಥಿತಿ ಎದುರಾಗಿತ್ತು. ಈ ವಿಚಾರದ ಬಗ್ಗೆ ಕಲರ್ಸ್​ ಕನ್ನಡ ವಾಹಿನಿ ಅಧಿಕೃತ ಘೋಷಣೆ ಮಾಡುತ್ತಿದ್ದಂತೆಯೇ ಸ್ಪರ್ಧಿಗಳು ಹಾಗೂ ವೀಕ್ಷಕರಿಗೆ ಬಹಳಷ್ಟು ಬೇಸರವಾಗಿತ್ತು. ಈಗ ಕನ್ನಡ ‘ಬಿಗ್​ ಬಾಸ್ ಸೀಸನ್​ 8’ ಬಗ್ಗೆ ಹೊಸ ಅಪ್​ಡೇಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಕೊರೊನಾ ವೈರಸ್ ಎರಡನೇ ಅಲೆ ನಿಧಾನವಾಗಿ ಕಡಿಮೆ ಆಗುತ್ತಿದೆ. ಕೊರೊನಾ ಪ್ರಕರಣಗಳ ಸಂಖ್ಯೆ ನಿಯಂತ್ರಣಕ್ಕೆ ಬಂದ ಹಿನ್ನೆಲೆಯಲ್ಲಿ ರಾಜ್ಯದ 11 ಜಿಲ್ಲೆಗಳಲ್ಲಿ ಮಾತ್ರ ಲಾಕ್​ಡೌನ್​ ಮುಂದುವರಿಯುತ್ತಿದ್ದು, ಉಳಿದ ಕಡೆಗಳಲ್ಲಿ ಜೂನ್​ 14ರಿಂದ ಲಾಕ್​ಡೌನ್​ ತೆರವಾಗಲಿದೆ. ನಿತ್ಯ 20 ಸಾವಿರಕ್ಕೂ ಅಧಿಕ ಪ್ರಕರಣಗಳು ಬರುತ್ತಿದ್ದ ಬೆಂಗಳೂರಿನಲ್ಲಿ ಕೊವಿಡ್ ನಿಯಂತ್ರಣಕ್ಕೆ ಬಂದಿದೆ. ಈ ಕಾರಣಕ್ಕೆ ಬೆಂಗಳೂರು ಕೂಡ ಸೋಮವಾರದಿಂದ  ಅನ್​ಲಾಕ್​ ಆಗಲಿದೆ.

ಈಗ ‘ಬಿಗ್​ ಬಾಸ್ ಸೀಸನ್​ 8’ ಬಗ್ಗೆ ಹೊಸ ಅಪ್​ಡೇಟ್​ ಒಂದು ಸಿಕ್ಕಿದೆ. ಶೀಘ್ರವೇ ಬಿಗ್​ ಬಾಸ್​ ಪುನರಾರಂಭಗೊಳ್ಳಲಿದೆಯಂತೆ. ಹೌದು, ಕೊವಿಡ್​ ಇನ್ನೊಂದು ತಿಂಗಳಲ್ಲಿ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರುವ ನಿರೀಕ್ಷೆ ಇದೆ. ನಂತರ ಶೂಟಿಂಗ್​ಗೂ ಅವಕಾಶ ಸಿಗಲಿದೆ. ಹೀಗಾಗಿ, ಜೂನ್​ ಅಂತ್ಯಕ್ಕೆ ಬಿಗ್​ ಬಾಸ್​ ಮತ್ತೆ ಆರಂಭಗೊಳ್ಳಲಿದೆ ಎನ್ನುವ ಮಾತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.

ಬಿಗ್​ ಬಾಸ್ ಮನೆಯಿಂದ  ಹೊರ ಬಂದ ಸ್ಪರ್ಧಿಗಳು ಈಗಾಗಲೇ ಸಾಕಷ್ಟು ಖಾಸಗಿ ಸಂದರ್ಶನಗಳಲ್ಲಿ ಕಾಣಿಸಿಕೊಂಡಿದ್ದಾರೆ. ಬಿಗ್ ಬಾಸ್ ಮತ್ತೆ ಶುರುವಾಗುತ್ತಾ? ಎಂದು ಯಾರೇ ಪ್ರಶ್ನೆ ಮಾಡಿದ್ದರೂ ಇರಬಹುದು, ಗೊತ್ತಿಲ್ಲ ಎಂದು ಹೇಳಿದ್ದರು. ಆದರೆ ಕಾರ್ಯಕ್ರಮದ ಆಯೋಜಕರು ಇದೀಗ ಮತ್ತೆ ಶೋ ಆರಂಭಿಸುವುದಾಗಿ ಸುಳಿವು ನೀಡುತ್ತಿದ್ದಾರೆ.

ಹೌದು! ಜೂನ್ ಕೊನೆಯ ವಾರ ಅಥವಾ ಜುಲೈನ ಮೊದಲ ವಾರದಿಂದ ಬಿಗ್ ಬಾಸ್ ಮತ್ತೆ ಶುರುವಾಗುವ ಸಾಧ್ಯತೆಗಳಿವೆ.  ಸ್ಪರ್ಧಿಗಳು ಯಾರೂ ಮನೆಯಿಂದ ಹೊರ ಹೋಗದಂತೆ ಆಯೋಜಕರು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಇಷ್ಟೆಲ್ಲಾ ಸುಳಿವು ಸಿಕ್ಕಿದೆ ಅಂದ್ರೆ ಬಿಗ್ ಬಾಸ್ ಮತ್ತೆ ಶುರುವಾಗುತ್ತೆ ಎಂದೇ ಅರ್ಥ ಎಂದು ನೆಟ್ಟಿಗರು ಮಾತನಾಡುತ್ತಿದ್ದಾರೆ.

ಬಿಗ್​ ಬಾಸ್​ ಕೊನೆಯ ದಿನ ಎಲ್ಲಾ ಸ್ಪರ್ಧಿಗಳಿಗೆ ಸಂದೇಶವೊಂದು ಬಂದಿತ್ತು. ‘ಈಗ ಅರ್ಧಕ್ಕೆ ನಿಂತ ಪ್ರಯಾಣ ಯಾವಾಗ ಬೇಕಾದರೂ ಮುಂದುವರಿಬಹುದು’ ಎನ್ನುವ ಮಾತನ್ನು ಬಿಗ್​ ಬಾಸ್​ ಹೇಳಿದ್ದರು. ಆಗಲೇ ಬಿಗ್​ ಬಾಸ್ ಮತ್ತೆ ಆರಂಭವಾಗಲಿದೆ ಎನ್ನುವ ಗುಸುಗುಸು ಆರಂಭವಾಗಿತ್ತು. ಈಗ ಅದು ನಿಜವಾಗುವ ಕಾಲ ಸಮೀಪವಾಗಿದೆ.

 

Spread the love

Related Articles

Leave a Reply

Your email address will not be published.

Back to top button
Flash News