MoreScrollTop NewsUncategorizedದೇಶ-ವಿದೇಶ

ಭಾರತೀಯ ಮೂಲದ ಪತ್ರಕರ್ತೆ ಮೇಘಾ ರಾಜಗೋಪಾಲನ್​ಗೆ ಈ ಬಾರಿಯ ಪುಲಿಟ್ಜರ್​ ಪ್ರಶಸ್ತಿ

ತನಿಖಾ ವರದಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವ ಭಾರತೀಯ ಮೂಲದ ಪತ್ರಕರ್ತೆ ಮೇಘಾ ರಾಜಗೋಪಾಲನ್‌ ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ತಮಿಳುನಾಡಿನ ಮೇಘಾ ರಾಜಗೋಪಾಲನ್‌ಗೆ ಅಮೆರಿಕದ ಪ್ರತಿಷ್ಠಿತ ಪ್ರಶಸ್ತಿ ಲಭಿಸಿರುವುದು ಭಾರತೀಯರಿಗೂ ಹೆಮ್ಮೆ ತಂದಿದೆ.

ಚೀನಾದಲ್ಲಿ ನಡೆಸಿದ ತನಿಖಾ ವರದಿಗೆ ಈ ಪ್ರಶಸ್ತಿ ಲಭಿಸಿದೆ. ಚೀನಾ ಕೆಲ ಕ್ಯಾಂಪ್‌ಗಳಲ್ಲಿ ಮುಸ್ಲಿಂ ಉಯಿಘರ್ ಇತರ ಅಲ್ಪ ಸಂಖ್ಯಾತರನ್ನು ಬಂಧಿಸಿ ನೀಡುತ್ತಿದ್ದ ಚಿತ್ರಹಿಂಸೆ ಕುರಿತು ಮೇಘ ರಾಜಗೋಪಾಲನ್ ತನಿಖಾ ವರದಿ ಮಾಡಿದ್ದರು. ಈ ಮೂಲಕ ಚೀನಾದ ಅಸಲಿ ಮುಖ ಬಹಿರಂಗವಾಗಿತ್ತು.  ಈ ವರದಿ ಪ್ರಕಟಗೊಂಡ ಬಳಿಕ ಚೀನಾದಿಂದ ಪರಾರಿಯಾಗಿ ಜೀವ ಉಳಿಸಿಕೊಂಡಿದ್ದರು. ಇದೇ ವರದಿಗೆ ಪ್ರಶಸ್ತಿ ಲಭಿಸಿದೆ.

ಮೇಘಾ ರಾಜಗೋಪಾಲನ್​ ಪ್ರಸ್ತುತ ಲಂಡನ್​ನಲ್ಲಿ ನೆಲೆಸಿದ್ದು, ಬಜ್​ಫೀಡ್​ ನ್ಯೂಸ್​ ಸುದ್ದಿ ಸಂಸ್ಥೆಯಲ್ಲಿ ವರದಿಗಾರ್ತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಚೀನಾ, ಥಾಯ್ಲೆಂಡ್, ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಪ್ರಾಂತ್ಯಗಳಲ್ಲಿಯೂ ಮೇಘಾ, ಈ ಹಿಂದೆ ಬಜ್​ಫೀಡ್​ ನ್ಯೂಸ್ ಸಂಸ್ಥೆಗಾಗಿ ಸೇವೆ ಸಲ್ಲಿಸಿದ್ದಾರೆ.​ ​ಅದಕ್ಕೂ ಮೊದಲು ಚೀನಾದಲ್ಲಿ ರಾಯ್ಟರ್ಸ್​ ಸುದ್ದಿ ಸಂಸ್ಥೆಗಾಗಿ ರಾಜಕೀಯ ವರದಿಗಾರರಾಗಿ ದುಡಿದಿದ್ದಾರೆ.

ಇನ್ನು, ಫೇಸ್​ಬುಕ್​ ಮತ್ತು ಶ್ರೀಲಂಕಾದ ಧಾರ್ಮಿಕ ಹಿಂಸಾಚಾರ ನಡುವಣ ಸಂಪರ್ಕಗಳನ್ನು ಪತ್ತೆ ಹಚ್ಚಿದ ತನಿಖಾ ಪತ್ರಿಕೋದ್ಯಮಿ ಮೇಘಾ ರಾಜಗೋಪಾಲನ್. 2019ರಲ್ಲಿ ಅವರಿಗೆ ಮಿರರ್​ ಅವಾರ್ಡ್​ನಿಂದ ಗೌರವಿಸಲಾಯಿತು. ಬೀಜಿಂಗ್​ನಲ್ಲಿ ಫುಲ್​ಬ್ರೈಟ್​ ಫೆಲೋ ಆಗಿದ್ದ ಮೇಘಾ ರಾಜಗೋಪಾಲನ್ ವಾಷಿಂಗ್ಟನ್​ ಡಿಸಿಯಲ್ಲಿ ರೀಸರ್ಚ್​​ ಫೆಲೋ ಆಗಿದ್ದರು. ತಮಿಳು ಮತ್ತು ಮ್ಯಾಂಡರಿನ್​ ಚೀನೀ ಭಾಷೆಗಳನ್ನು ಅವರು ಕರಗತ ಮಾಡಿಕೊಂಡಿದ್ದಾರೆ.

ಮೇಘಾ ರಾಜಗೋಪಾಲನ್, ಸಹೋದ್ಯೋಗಿಗಳಾದ ಅಲಿಸನ್ ಕಿಲಿಂಗ್, ಕ್ರಿಸ್ಟೋ ಬಶ್‌ಚೆಕ್ ಜೊತೆ ಈ ಬಾರಿಯ ಪುಲಿಟ್ಜರ್ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ.  ಚೀನಾದ ಅಸಲಿ ಮುಖ ತೋರಿಸಿದ ಕಾರಣಕ್ಕೆ ಮೇಘಾಗೆ ನಿರ್ಬಂಧ ಹೇರಲಾಗಿತ್ತು. ಚೀನಾದಿಂದ ಕಜಕಿಸ್ತಾನಕ್ಕೆ ಪರಾರಿಯಾದ ಮೇಘಾ ಮತ್ತಷ್ಟು ಉಯಿಘರ್ ಮುಸ್ಲಿಂಮರನ್ನು ಸಂದರ್ಶಿಸಿ ವರದಿ ಪ್ರಕಟಿಸಿದ್ದರು.

 

Spread the love

Related Articles

Leave a Reply

Your email address will not be published.

Back to top button
Flash News