CORONA VIRUSMoreScrollTop Newsದೇಶ-ವಿದೇಶ

ಕೊರೊನಾ ಚಿಕಿತ್ಸೆಗೆ ಬಳಸಬಹುದಾದ ಕೊಲ್ಚಿಸಿನ್​ ಔಷಧ ಕ್ಲಿನಿಕಲ್​ ಟ್ರಯಲ್​​ಗೆ ಗ್ರೀನ್ ಸಿಗ್ನಲ್ ಕೊಟ್ಟ ಡಿಜಿಸಿಐ..

ಕೊಲ್ಚಿಸಿನ್​ ಔಷಧಗಳ ಮೇಲೆ ಕ್ಲಿನಿಕಲ್​ ಟ್ರಯಲ್​ ನಡೆಸಲು ಡ್ರಗ್ಸ್​ ಕಂಟ್ರೋಲರ್​ ಜನರಲ್​ ಆಫ್​ ಇಂಡಿಯಾ , ಕೌನ್ಸಿಲ್​ ಆಫ್​ ಸೈಂಟಿಫಿಕ್​ ಆ್ಯಂಡ್​ ಇಂಡಸ್ಟ್ರಿಯಲ್​ ರಿಸರ್ಚ್​ ಮತ್ತು ಹೈದರಾಬಾದ್​​ನ ಲಕ್ಸಾಯ್​ ಲೈಫ್​ ಸೈನ್ಸಸ್​ ಪ್ರೈವೇಟ್​ ಲಿಮಿಟೆಡ್​ಗೆ ಅನುಮೋದನೆ ನೀಡಿದೆ ಎಂದು ಪಿಟಿಐ ವರದಿ ಮಾಡಿದೆ.

ಕೊಲ್ಚಿಸಿನ್​ ಮಾತ್ರೆಗಳಿಂದ ಕೊವಿಡ್​ 19 ಸೋಂಕಿತರಿಗೆ ಚಿಕಿತ್ಸೆ ನೀಡಬಹುದಾಗಿದೆ ಎಂದು ಹೇಳಲಾಗಿದೆ. ಹಾಗೇ ಈ ಔಷಧಗಳು ಕೊವಿಡ್​ 19 ಸೋಂಕಿತರಿಗೆ ಎಷ್ಟು ಸುರಕ್ಷಿತ, ಪರಿಣಾಮಕಾರಿ ಎಂಬುದನ್ನು ತಿಳಿಯಲು ಎರಡು ಹಂತದ ಕ್ಲಿನಿಕಲ್​ ಟ್ರಯಲ್​ ನಡೆಸಲು ಡಿಸಿಜಿಐ ಅನುಮೋದನೆ ನೀಡಿದೆ. ಈ ಬಗ್ಗೆ CSIR ಅಧಿಕೃತ ಮಾಹಿತಿ ನೀಡಿದೆ.

CSIRನ ಮಹಾ ನಿರ್ದೇಶಕರ ಸಲಹೆಗಾರ ರಾಮ್​ ವಿಶ್ವಕರ್ಮ ಪಿಟಿಐಗೆ ಮಾಹಿತಿ ನೀಡಿದ್ದು, ಕೊರೊನಾ ಸೋಂಕಿತರು ಹೃದಯ ಸಂಬಂಧಿ ತೊಂದರೆಗೆ ಒಳಗಾಗುತ್ತಾರೆ ಎಂಬುದನ್ನು ಹಲವು ಅಧ್ಯಯನಗಳು ಬಹಿರಂಗಪಡಿಸಿವೆ. ಅಷ್ಟೇ ಅಲ್ಲ, ಅದೆಷ್ಟೋ ಜನ ಕೊರೊನಾ ಸೋಂಕಿಗೆ ಒಳಗಾಗಿ, ನಂತರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಹೊಸದಾದ ಅಥವಾ ಇರುವುದರಲ್ಲೇ ಯಾವುದು ಉತ್ತಮ ಔಷಧ ಎಂಬುದನ್ನು ಕಂಡುಹಿಡಿಯುವುದು ಅನಿವಾರ್ಯವಾಗಿದೆ. ಅದರಲ್ಲಿ ಈ ಕೊಲ್ಚಿಸಿನ್​ ಔಷಧ, ಹೃದಯ ಸಮಸ್ಯೆ ಇರುವವರಿಗೆ ಅತ್ಯುತ್ತಮ ಔಷಧವಾಗಿದೆ ಎಂದು ಹೇಳಿದ್ದಾರೆ. ಹಾಗೇ, ಲಕ್ಸಾಯ್​ ಲೈಫ್​ ಸೈನ್ಸ್​​ನ ಸಿಇಒ ರಾಮ್​ ಉಪಾಧ್ಯಾಯ ಈ ಬಗ್ಗೆ ಪಿಟಿಐಗೆ ಪ್ರತಿಕ್ರಿಯೆ ನೀಡಿದ್ದು, ಕೊಲ್ಚಿಸಿನ್​ ಔಷಧಗಳ ಕ್ಲಿನಿಕಲ್ ಟ್ರಯಲ್​​ಗಾಗಿ ರೋಗಿಗಳ ದಾಖಲಾತಿ ಪ್ರಕ್ರಿಯೆ ನಡೆದಿದೆ. ಮುಂದಿನ 8-10 ವಾರಗಳಲ್ಲಿ ಟ್ರಯಲ್​ ಮುಗಿಯಲಿದೆ ಎಂದು ಹೇಳಿದ್ದಾರೆ.

Spread the love

Related Articles

Leave a Reply

Your email address will not be published.

Back to top button
Flash News