cricketMoreScrollUncategorized

ಕುದುರೆ ಜೊತೆ ರೇಸಿಗಿಳಿದ ಮಾಹಿ.. ವಿಡಿಯೋ ವೈರಲ್..!

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಪಿಚ್‍ನಲ್ಲಿ ವೇಗವಾಗಿ ಓಡಿ ರನ್ ಕದಿಯುವುದನ್ನು ನೋಡಿದ್ದೇವೆ. ಇದೀಗ ಧೋನಿ ಕುದುರೆ ಜೊತೆ ವೇಗವಾಗಿ ಓಡುವ ಮೂಲಕ ರೇಸ್‍ಗೆ ಇಳಿದಿದ್ದಾರೆ.

ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿ ಮುಂದೂಡಲ್ಪಟ್ಟ ಕಾರಣ ಕೂಲ್​ ಕ್ಯಾಪ್ಟನ್ ಎಂ ಎಸ್​​ ಧೋನಿ ತಮ್ಮ ರಾಂಚಿ ಫಾರಂ ಹೌಸ್​ನಲ್ಲಿ ತಮ್ಮ ಅಚ್ಚುಮೆಚ್ಚಿನ ಪ್ರಾಣಿಗಳ ಜೊತೆ ಕೂಲ್​ ಕೂಲ್​ ಆಗಿದ್ದಾರೆ. ಅವುಗಳನ್ನು ಮುದ್ದಾಡುತ್ತಾ ಆನಂದಿಂದ ಸಮಯ ಕಳೆಯುತ್ತಿದ್ದಾರೆ. ಹೀಗೆ ಹೆಂಡತಿ ಮಕ್ಕಳೊಂದಿಗೆ ತಮ್ಮ ಫಾರಂ ಹೌಸ್​ನಲ್ಲಿರುವ ಧೋನಿ, ಮನೆಗೆ ಬಂದಿರುವ ಹೊಸ ಅತಿಥಿಯೊಂದಿಗೆ ರೇಸಿಗಿಳಿದಿದ್ದಾರೆ. ಸ್ವತಃ ಈ ವಿಡಿಯೋವನ್ನು ಸಾಕ್ಷಿ ಧೋನಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಈಗ ಆ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

ಕುದುರೆಯೊಂದಿಗೆ ವೇಗವಾಗಿ ಓಡುತ್ತಿರುವ ಧೋನಿಯನ್ನು ಕುದುರೆ ರೇಸ್‍ನಲ್ಲಿ ಸೋಲಿಸಿದೆ. ಆದರೆ ಧೋನಿ ಕ್ರಿಕೆಟ್‍ನಲ್ಲಿ ಮಾತ್ರ ರನ್ ಕದಿಯಲು ಕುದುರೆಯಂತೆ ವೇಗವಾಗಿ ಓಡಿ ಸಹ ಆಟಗಾರನ್ನು ಬೆವರಿಳಿಸಿದ್ದನ್ನು ನಾವು ಸಾಕಷ್ಟು ಬಾರಿ ನೋಡಿದ್ದೇವೆ. ಆದರೆ ಇಲ್ಲಿ ಮಾತ್ರ ಮಾಹಿಯನ್ನು ಕುದುರೆ ಬೆವರಿಳಿಸಿದೆ. ಕೆಳದಿನಗಳ ಹಿಂದೆ ಧೋನಿ ಚೇತಕ್ ಹಾಗೂ ಲಿಲ್ಲಿ ಎಂಬ ಹೆಸರಿನ ಎರಡು ಕುದುರೆಗಳನ್ನು ಖರೀದಿಸಿದ್ದರು. ಕುದುರೆಯೊಂದಿಗಿನ ಫೋಟೋವನ್ನು ಸಾಕ್ಷಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಟೀಂ ಇಂಡಿಯಾ ಆಟಗಾರನಾಗಿ, ನಾಯಕನಾಗಿ ಒಂದೂವರೆ ದಶಕಗಳ ಕಾಲ ಎಂ.ಎಸ್.ಧೋನಿ, ಭಾರತೀಯ ಕ್ರಿಕೆಟ್​ಗೆ ಮರೆಯಲಾಗದಷ್ಟು ಕೊಡುಗೆ ನೀಡಿದ್ದಾರೆ. ಟೀಂ ಇಂಡಿಯಾ ಸದ್ಯ ದೂರವಿರುವ ಧೋನಿ, ನಮಗೆಲ್ಲ ತಿಳಿದಿರುವಂತೆ ಸಾಮಾಜಿಕ ಜಾಲತಾಣಗಳಿಂದ ಕೊಂಚ ದೂರವೇ ಇದ್ದಾರೆ. ಅವರ ಅಭಿಮಾನಿಗಳಿಗೆ ಧೋನಿಯನ್ನು ಸಾಮಾಜಿಕ ಜಾಲತಾಣದಲ್ಲಿ ಕಾಣಬೇಕೆಂದರೆ ಸಾಕ್ಷಿ ಧೋನಿಯ ಸಾಮಾಜಿಕ ಜಾಲತಾಣದ ಖಾತೆಯನ್ನು ಹುಡುಕಬೇಕು. ಸಾಕ್ಷಿಯೂ ಕೂಡ ಅಭಿಮಾನಿಗಳಿಗೆ ಬೇಕಾಗಿರುವ ಮಾಹಿತಿಯನ್ನು ಆಗಾಗ್ಗೆ ಹಂಚಿಕೊಳ್ಳುತ್ತಿರುತ್ತಾರೆ.

Spread the love

Related Articles

Leave a Reply

Your email address will not be published.

Back to top button
Flash News