lock downMoreScrollUncategorizedಸಿನೆಮಾ ಹಂಗಾಮ

“ಬಹದ್ದೂರ್” ಸಿನಿಮಾ ನಿರ್ದೇಶಕನ “ಭರ್ಜರಿ” ಮದುವೆ..

ಬೆಂಗಳೂರು: ಲಾಕ್​ಡೌನ್​ನಲ್ಲಿ ಅನೇಕ ಸೆಲೆಬ್ರಿಟಿಗಳು ಸಿಂಪಲ್​ ಆಗಿ ಮದುವೆ ಆಗುತ್ತಿದ್ದಾರೆ. ಸ್ಯಾಂಡಲ್‍ವುಡ್ನ ಭರ್ಜರಿ ಸಿನಿಮಾ ಖ್ಯಾತಿಯ ನಿರ್ದೇಶಕ ಚೇತನ್ ಕುಮಾರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಮೈಸೂರಿನ ಕಲ್ಪವೃಕ್ಷ ರಾಘವೇಂದ್ರ ಸ್ವಾಮಿ ಮಠದಲ್ಲಿ ಇಂದು ಬೆಳಗ್ಗೆ ಮದುವೆ ನೆರವೇರಿದೆ. ಕೆಲವೇ ಕೆಲವು ಮಂದಿ ಮಾತ್ರ ಈ ಶುಭ ಸಮಾರಂಭಕ್ಕೆ ಸಾಕ್ಷಿ ಆಗಿದ್ದರು. ಚಿತ್ರರಂಗದ ಕೆಲವು ಆಪ್ತರಿಗಷ್ಟೇ ಆಹ್ವಾನ ನೀಡಲಾಗಿತ್ತು.  ಉಮಾಪತಿ ಶ್ರೀನಿವಾಸ್​ ಗೌಡ, ಪುನೀತ್​ ರಾಜ್​ಕುಮಾರ್​, ಶ್ರೀಮುರಳಿ, ಧ್ರುವ ಸರ್ಜಾ, ನಿರ್ದೇಶಕ ಮಹೇಶ್​ ಕುಮಾರ್​ ಮುಂತಾದವರು ಮದುವೆಗೆ ಆಗಮಿಸಿ ನವ ಜೋಡಿಗೆ ಆಶೀರ್ವಾದ ಮಾಡಿದರು. ಲಾಕ್​ಡೌನ್​ ಕಾರಣದಿಂದ ಅಭಿಮಾನಿಗಳಿಗೆ ಆಹ್ವಾನ ಇರಲಿಲ್ಲ.

ಸ್ಯಾಂಡಲ್​ವುಡ್​ನಲ್ಲಿ ಬಹುಬೇಡಿಕೆಯ ನಿರ್ದೇಶಕನಾಗಿ ಗುರುತಿಸಿಕೊಂಡಿರುವ ಚೇತನ್​ ಕುಮಾರ್​ ಅವರನ್ನು ಕೈ ಹಿಡಿರುವ ಹುಡುಗಿ ಯಾರು ಎಂಬ ಕೌತುಕ ಪ್ರಶ್ನೆ ಅಭಿಮಾನಿಗಳ ಮನದಲ್ಲಿ ಮೂಡುವುದು ಸಹಜ. ಚೇತನ್​ ಕೈ ಹಿಡಿದಿರುವ ಹುಡುಗಿ ಹೆಸರು ಮಾನಸಾ. ಮೈಸೂರಿನ ಇನ್ಫೋಸಿಸ್‍ನಲ್ಲಿ ಮಾನಸ ಕೆಲಸ ಮಾಡುತ್ತಿದ್ದಾರೆ. ಈ ಮುದ್ದಾದ ಜೋಡಿ ಇಂದು ದಾಂಪತ್ಯಜೀವನಕ್ಕೆ ಕಾಲಿಟ್ಟಿದೆ.

ಭರ್ಜರಿ, ಬಹದ್ದೂರ್ ಮತ್ತು ಭರಾಟೆ ಚಿತ್ರಗಳಿಂದ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡ ಇವರು, ಗೀತರಚನಕಾರರಾಗಿ ಮತ್ತು ಸಂಭಾಷಣಾಕಾರನಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಸದ್ಯ ಅಪ್ಪು ನಟನೆಯ ಜೇಮ್ಸ್ ಸಿನಿಮಾವನ್ನು ಚೇತನ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ.

Spread the love

Related Articles

Leave a Reply

Your email address will not be published.

Back to top button
Flash News