MoreScrollUncategorizedಸಿನೆಮಾ ಹಂಗಾಮ

ರಿಯಲ್ ಹೀರೋ ಸೋನು ಸೂದ್ ಸಮಾಜಮುಖಿ ಕೆಲಸಗಳಿಗೆ ಸ್ಪೂರ್ತಿ ಯಾರು ಗೊತ್ತಾ..?

ಬಹುಭಾಷಾ ನಟ ಸೋನು ಸೂದ್​ ಅವರು ಮಾಡುವ ಕೆಲಸಗಳನ್ನು ಗಮನಿಸಿದರೆ ಅವರು ಮುಂದೊಂದು ದಿನ ರಾಜಕಾರಣಿ ಆಗುತ್ತಾರೆ ಎಂಬುದು ಹಲವರ ಭಾವನೆ. ಆದರೆ ಸೋನುಸೂದ್‍ರವರು ನನಗೆ ರಾಜಕೀಯ ಪ್ರವೇಶಿಸಲು ಇಷ್ಟ ಇಲ್ಲ. ಆದರೆ ಈ ರಾಜಕಾರಣಿ ನನಗೆ ಸ್ಪೂರ್ತಿ ಎಂದು ತಿಳಿಸಿದ್ದಾರೆ.

ಕೊರೊನಾ ಸಂಕಷ್ಟದಲ್ಲಿರುವ ಹಲವಾರು ಮಂದಿಗೆ ಸೆಲೆಬ್ರೆಟಿಗಳು ಸಹಾಯ ಮಾಡುತ್ತಿದ್ದಾರೆ. ಅಲ್ಲದೇ ಬಾಲಿವುಡ್ ನಟ ಸೂನ್ ಸೂದ್ ಕೂಡ ಲಾಕ್‍ಡೌನ್ ವೇಳೆ ಸಂಕಷ್ಟಕ್ಕೆ ಸಿಲುಕಿ ಆರ್ಥಿಕವಾಗಿ ಹಾಗೂ ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿರುವ ಅನೇಕ ಜನರಿಗೆ ನೆರವಾಗುತ್ತಿದ್ದಾರೆ.

ಇಷ್ಟೆಲ್ಲಾ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ನಟ ಸೋನು ಸೂದ್‍ರವರಿಗೆ ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಎಂದರೆ ಬಹಳ ಇಷ್ಟ ಹಾಗೂ ಅವರು ಅಭಿವೃದ್ಧಿ ಪಡಿಸಿದ ಕಾರ್ಯಗಳು ತಮಗೆ ಸ್ಫೂರ್ತಿ ಎಂದು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ಎನ್​ಟಿಆರ್​ ಟ್ರಸ್ಟ್​ ಆಯೋಜಿಸಿದ್ದ ಝೂಮ್​ ಸಂವಾದದಲ್ಲಿ ಸೋನು ಸೂದ್​ ಭಾಗವಹಿಸಿದ್ದರು. ಆಗ ಅವರು ಯುವ ಜನತೆಯ ಜೊತೆ ಈ ವಿಚಾರವನ್ನು ಹಂಚಿಕೊಂಡರು. ‘ನಾನು ನಟನಾಗಿ ಕೆಲಸ ಆರಂಭಿಸಿದಾಗ ಹೈದರಾಬಾದ್​​ನಲ್ಲಿ ಶೂಟಿಂಗ್​ ಇರುತ್ತಿತ್ತು. ಈ ನಗರ ಮತ್ತು ಸುತ್ತಮುತ್ತಲಿನ ಪ್ರದೇಶ ತುಂಬ ಸುಂದರವಾಗಿತ್ತು. ಇಲ್ಲಿನ ಬೆಳವಣಿಗೆ ಕಂಡು ಅಚ್ಚರಿ ಆಗಿತ್ತು. ಅದಕ್ಕೆ ಚಂದ್ರಬಾಬು ನಾಯ್ಡು ಅವರು ಕಾರಣ ಎಂಬುದು ತಿಳಿಯಿತು.

ಅವರನ್ನು ಬೇರೆ ರಾಜ್ಯಗಳಿಗೂ ಕರೆದುಕೊಂಡು ಹೋಗಿ ಅಲ್ಲಿನ ನಗರಗಳನ್ನೂ ಹೈದರಾಬಾದ್​ ರೀತಿ ಅಭಿವೃದ್ಧಿ ಪಡಿಸಬೇಕು ಅಂತ ನನ್ನ ಸ್ನೇಹಿತರ ಜೊತೆ ಚರ್ಚೆ ಮಾಡುತ್ತಿದ್ದೆ’ ಎಂದು ಸೋನು ಸೂದ್​ ಹೇಳಿದ್ದಾರೆ.  ತಾವು ಮಾಡುತ್ತಿರುವ ಅನೇಕ ಕೆಲಸಗಳಿಗೆ ಅವರೇ ಸ್ಪೂರ್ತಿ ಹಾಗೂ ಇಂದಿನ ಯುವ ಜನತೆ ಕೂಡ ಅವರನ್ನು ಪ್ರೇರಣೆಯಾಗಿ ಪಡೆದುಕೊಳ್ಳಬೇಕು ಎಂದಿದ್ದಾರೆ

 

Spread the love

Related Articles

Leave a Reply

Your email address will not be published.

Back to top button
Flash News