BreakingCORONA LOCKDOWN HEROESCORONA VIRUSKANNADAFLASHNEWSFIGHTAGAINSTCORONAlock downMoreScrollTop NewsUncategorizedಕ್ರೈಮ್ /ಕೋರ್ಟ್ಜಿಲ್ಲೆಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP)ಮಾಹಿತಿ/ತಂತ್ರಜ್ಞಾನರಾಜಕೀಯರಾಜ್ಯ-ರಾಜಧಾನಿ

ಬಿಬಿಎಂಪಿ ಅಖಾಡದಲ್ಲಿನ “ಎನ್ ಆರ್ ರಮೇಶ್- ಪ್ರಹ್ಲಾದ್” ಸಂಘರ್ಷಕ್ಕೆ ಹೊಸ ಟ್ವಿಸ್ಟ್: ಕೋರ್ಟ್ ಮಧ್ಯಪ್ರವೇಶ: FIR ದಾಖಲಿಸಿದ ನಂತ್ರ ಮೌನವಾಗಿದ್ದಕ್ಕೆ ಗರಂ: ಪೊಲೀಸರಿಗೆ “ಜೂನ್ ಎಂಡ್” ಡೆಡ್ ಲೈನ್ ವಾರ್ನಿಂಗ್

ಬೆಂಗಳೂರು:ಎನ್ ಆರ್ ರಮೇಶ್ vs  ಬಿ.ಎಸ್.ಪ್ರಹ್ಲಾದ್

ಬಿಬಿಎಂಪಿಯಲ್ಲಿ ಸಧ್ಯಕ್ಕೆ ಸುದ್ದಿಯಲ್ಲಿರುವ ಎರಡು ಹೆಸರುಗಳಿವು.ಇದಕ್ಕೆ ಕಾರಣ ಅವರಿಬ್ಬರ ನಡುವೆ ನಡೆಯುತ್ತಿರುವ ಶೀತಲ ಸಮರ,ಸಂಘರ್ಷ.ಪ್ರಹ್ಲಾದ್ ಭ್ರಷ್ಟ ಎಂದು ಎನ್ ಆರ್ ರಮೇಶ್ ಕೋರ್ಟ್-ಎಸಿಬಿ-ಲೋಕಾ ಯುಕ್ತ-ಬಿಎಂಟಿಎಫ್ ಗೆ ನಿರಂತರ ದೂರುಗಳನ್ನು ಕೊಡುತ್ತಲೇ ಬಂದ್ರೆ, ರಮೇಶ್ ಆರೋಪಗಳ ಹಿಂದೆ ಬೇರೆಯದೇ ಉದ್ದೇಶಗಳಿವೆ.ಅವರ ಅಣತಿಯಂತೆ ನಡೆಯುತ್ತಿಲ್ಲ ಎನ್ನುವ ಕಾರಣಕ್ಕೆ ನನ್ನನ್ನು ಪ್ರಜ್ಞಾಪೂರ್ವಕವಾಗಿ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಬಿ.ಎಸ್.ಪ್ರಹ್ಲಾದ್ ಹರಿಹಾಯ್ದಿದ್ದರು.ಅವರಿಬ್ಬರ ಸಮರ ಹೈಕೋರ್ಟ್ ಮೆಟ್ಟಿಲನ್ನೇರಿದ್ದು ಕೂಡ ಇತಿಹಾಸ.

ಆದ್ರೆ ಸಧ್ಯಕ್ಕೆ ಕೇಳಿ ಬಂದಿರುವ ವರ್ತಮಾನ.ಎನ್ ಆರ್ ರಮೇಶ್ ಅವರ ವಿರುದ್ಧ ದಾಖಲಾಗಿದ್ದ ಎಫ್ ಐಆರ್ (ಎಫ್‌ಐಆರ್ ಸಂಖ್ಯೆ 92/2015) ಪ್ರಕರಣವೊಂದರಲ್ಲಿ ಪೊಲೀಸರು ಸರಿಯಾಗಿ ಕೆಲಸ ಮಾಡಿಲ್ಲ ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಶ್ರೀನಿವಾಸ ಓಕಾ,ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರನ್ನೊಳಗೊಂಡ ನ್ಯಾಯಪೀಠ,   ಅವರು ಅಮೃತಹಳ್ಳಿ ಪೊಲೀಸರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆನ್ನುವುದು.

2015 ರಲ್ಲಿ ಎನ್ ಆರ್ ರಮೇಶ್ ಅವರ ವಿರುದ್ದ ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತ ಸರ್ಫರಾಜ್ ಖಾನ್ ದೂರು ನೀಡಿದ್ರು. ದೂರನ್ನಾಧರಿಸಿ ಎಫ್ ಐಆರ್ ಕೂಡ ದಾಖಲಾಗಿತ್ತಂತೆ. ಆದ್ರೆ ಆ ಎಫ್ ಐಆರ್ ಗೆ ಸಂಬಂಧಿಸಿದಂತೆ ಮುಂದಿನ ಕ್ರಮ ಕೈಗೊಳ್ಳದೆ ಸುಮ್ಮನೇಕೆ ಇದ್ದೀರಿ ಎಂದು ಓಕಾ ಸಾಹೇಬ್ರು ಹಿಗ್ಗಾಮುಗ್ಗಾ ಜಾಡಿಸಿದ್ರಂತೆ.ಅಷ್ಟೇ ಅಲ್ಲ ಈ ಪ್ರಕರಣದ ಬಗ್ಗೆ ತೆಗೆದುಕೊಂಡಿರುವ ಹಾಗೂ ತೆಗೆದುಕೊಳ್ಳಲಾ ಗುವ ಕ್ರಮಗಳ ಬಗ್ಗೆ ಮುಚ್ಚಿದ ಲಕೋಟೆಯೊಳಗೆ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆನ್ನುವುದು ಬಿಬಿಎಂಪಿ ಪರ ವಕೀಲ ಶ್ರೀನಿಧಿ ಮಾತು.

ಮಳೆ ನೀರುಗಾಲುವೆ ವಿಭಾಗದ ಮುಖ್ಯ ಎಂಜಿನಿಯರ್ ಬಿ.ಎಸ್ ಪ್ರಹ್ಲಾದ್ ವಿರುದ್ದ ಭ್ರಷ್ಟಾಚಾರದ ಆರೋಪ ಮಾಡಿದ್ದ ಎನ್.ಆರ್ ರಮೇಶ್ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿಗೆ ಅರ್ಜಿ ಹಾಕಿದ್ರು.ಎನ್ ಆರ್ ರಮೇಶ್ ತಮ್ಮ ಮೇಲೆ ಕೆಂಡ ಕಾರುತ್ತಿರುವುದಕ್ಕೆ,ಭ್ರಷ್ಟಾಚಾರದ ಆರೋಪ ಮಾಡುತ್ತಿರುವುದಕ್ಕೆ ಕಾರಣವೇನು ಎನ್ನುವುದನ್ನು ಪ್ರಹ್ಲಾದ್ ವಿವರಣೆ ನೀಡಿದ್ರು..ಬಿಬಿಎಂಪಿ ಪರ ವಕೀಲ ಶ್ರೀನಿಧಿ ಮೂಲಕ ವಿವರಣೆಯನ್ನು ನೀಡಿದ್ದ ಪ್ರಹ್ಲಾದ್ ಆ ವಿವರಣೆಯಲ್ಲಿ ಎನ್.ಆರ್ ರಮೇಶ್ ವಿರುದ್ಧ ಗಂಭೀರವಾದ ಆರೋಪಗಳನ್ನು ಮಾಡಿದ್ದರಂತೆ.

ಬಿಬಿಎಂಪಿ ಮಾಜಿ ಆಡಳಿತ ಪಕ್ಷದ ನಾಯಕ ಎನ್.ಆರ್ ರಮೇಶ್
ಬಿಬಿಎಂಪಿ ಮಾಜಿ ಆಡಳಿತ ಪಕ್ಷದ ನಾಯಕ ಎನ್.ಆರ್ ರಮೇಶ್
ಬಿಬಿಎಂಪಿ ಮಳೆನೀರುಗಾಲುವೆ ಮುಖ್ಯ ಎಂಜಿನಿಯರ್ ಬಿ.ಎಸ್.ಪ್ರಹ್ಲಾದ್
ಬಿಬಿಎಂಪಿ ಮಳೆನೀರುಗಾಲುವೆ ಮುಖ್ಯ ಎಂಜಿನಿಯರ್ ಬಿ.ಎಸ್.ಪ್ರಹ್ಲಾದ್

ತನ್ನ ಪರಿಚಯದ ಗುತ್ತಿಗೆದಾರರಿಗೇ ಗುತ್ತಿಗೆ ಕೊಡಬೇಕೆನ್ನುವುದರಿಂದ ಹಿಡಿದು, ಗುತ್ತಿಗೆ ಪಡೆಯೊಕ್ಕೆ ವೈಯುಕ್ತಿಕವಾಗಿ ಟಾರ್ಗೆಟ್ ಮಾಡಿದ್ರು..ಕೆಲಸ ಮಾಡೊಕ್ಕೆ ಬಿಡಲಿಲ್ಲ..ಸುಖಾಸುಮ್ಮನೆ ಆರೋಪ ಮಾಡಿದರೆನ್ನುವವರೆಗಿನ ಸಾಕಷ್ಟು ಆರೋಪ ಪಟ್ಟಿಯನ್ನೇ ಮಾಡಿದ್ರು.ಇದನ್ನು ಆಲಿಸಿದ ನ್ಯಾಯಪೀಠ ರಮೇಶ್ ವಿರುದ್ಧ ಗರಂ ಆಯಿತಂತೆ,ಇದೇ ವೇಳೆ ತಮ್ಮ ವಿವರಣೆಯಲ್ಲಿ ಸರ್ಫರಾಜ್ ಖಾನ್ ಅವರ 2015ರ ದೂರು-ಎಫ್ ಐಆರ್ ನ್ನು ಪ್ರಹ್ಲಾದ್ ಉಲ್ಲೇಖಿಸಿದ್ರಂತೆ.ಪೊಲೀಸರ ನಿರ್ಲಕ್ಷ್ಯಕ್ಕೆ ಕೆಂಡಾಮಂಡಲವಾದ ನ್ಯಾಯಾಧೀಶರು ಜೂನ್ ಅಂತ್ಯದೊಳಗೆ ವರದಿ ಸಲ್ಲಿಸುವಂತೆ ಸೂಚಿಸಿದ್ರೆನ್ನಲಾಗ್ತಿದೆ.

ಪ್ರಹ್ಲಾದ್ ಕೋರ್ಟ್ ಗೆ ನೀಡಿದ ವಿವರಣೆ ಏನು..? ಎನ್ ಆರ್ ರಮೇಶ್ ವಿರುದ್ಧ ಸಿಡಿದೆದ್ದಿರುವ ಪ್ರಹ್ಲಾದ್ ಆಪಾದಿಸುವಂತೆ ರಮೇಶ್ ಅವರದು ಏಕಪಕ್ಷೀಯವಾದ ಆರೋಪ.ಅವರಿಗೆ ಸಹಕರಿಸದ್ದಕ್ಕೆ,ಅವರು ಹೇಳಿದ ಮಾತು ಕೇಳದ್ದಕ್ಕೆ ನನ್ನ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ.ಆರ್ ಸತೀಶ್ ಹಾಗೂ ಮಂಜುನಾಥ್ ಅವರಿಗೆ ಗುತ್ತಿಗೆ ಕೊಡಬೇಕೆಂದು ನನ್ನ ಬಳಿಗೆ ಬಂದಿದ್ದರು.ತಾಂತ್ರಿಕ ಕಾರಣಗಳಿಂದ ಆಗೊಲ್ಲ ಎಂದು ನಿರಾಕರಿಸಿದ ದಿನಗಳಿಂದಲೇ ರಮೇಶ್ ನನ್ನನ್ನು ಟಾರ್ಗೆಟ್ ಮಾಡಲಾರಂಭಿಸಿದ್ರು.

ಒಬ್ಬ ಗುತ್ತಿಗೆದಾರನಿಗೆ 5 ಕೋಟಿ 14 ಲಕ್ಷ ಎಸ್ಟಿಮೇಷನ್ ಗೆ ಬದಲಾಗಿ 7 ಕೋಟಿ 36 ಲಕ್ಷ ಹಾಗು ಇನ್ನೊಬ್ಬನಿಗೆ 6 ಕೋಟಿ 50 ಲಕ್ಷ ಎಸ್ಟಿಮೇಷನ್ ನಂತೆ ಹೆಚ್ಚುವರಿ ಹಣ ಬರುವಂತ ದಾಖಲೆ ಸೃಷ್ಟಿಸಿ ಹಣ ಹೊಡೆಯೊಕ್ಕೆ ರಮೇಶ್ ಸಂಚು ನಡೆಸಿದ್ದರು.ಇದು ಸರ್ಕಾರಕ್ಕೆ ಗೊತ್ತಾಗಿ ಛೀಮಾರಿ ಹಾಕಿ ಕಳುಹಿಸಿದರೆನ್ನುವುದು ಪ್ರಹ್ಲಾದ್ ವಾದ.

ಘನತ್ಯಾಜ್ಯ ನಿರ್ವಹಣಾ ವಿಭಾಗದ ಜಂಟಿ ಆಯುಕ್ತ ಸರ್ಫರಾಜ್ ಖಾನ್
ಘನತ್ಯಾಜ್ಯ ನಿರ್ವಹಣಾ ವಿಭಾಗದ ಜಂಟಿ ಆಯುಕ್ತ ಸರ್ಫರಾಜ್ ಖಾನ್

ಒಬ್ಬನೇ ಕಾಂಟ್ರ್ಯಾಕ್ಟರ್- 64 ಕಾಮಗಾರಿ ..? ಇದು ಪ್ರಹ್ಲಾದ್ ಕೋರ್ಟ್ ಗೆ ನೀಡಿರುವ ವಿವರಣೆಯಲ್ಲಿ ಎನ್.ಆರ್ ರಮೇಶ್ ವಿರುದ್ಧ ಮಾಡಿರುವ ಮತ್ತೊಂದು ಆರೋಪ.ಎನ್ ಆರ್ ರಮೇಶ್ ಅವರ ಪತ್ನಿ ಪ್ರತಿ ನಿಧಿಸುವ ಯಡಿಯೂರು ವಾರ್ಡ್ ನಲ್ಲಿ ಆರ್.ಸತೀಶ್ ಎನ್ನುವ ಗುತ್ತಿಗೆದಾರನೇ 64 ಗುತ್ತಿಗೆ ಕೆಲಸ ಮಾಡಿದ್ದಾನಂತೆ. ತನ್ನ ವಾರ್ಡ್ ನಲ್ಲಿರುವ ಸಮುದಾಯ ಭವನದ ಕಾಮಗಾರಿಯನ್ನು ಸತೀಶ್ ಗೆ ಕೊಡಿಸೊಕ್ಕೆ ಒಂದೇ ಬಿಲ್ಡಿಂಗ್ ಕಾಮಗಾರಿಯನ್ನು ಕೆಳ ಅಂತಸ್ತು-ಮೊದಲ ಅಂತಸ್ತು ಹಾಗೂ ಎರಡನೇ ಅಂತಸ್ತು ಎಂದು ಡಿವೈಡ್ ಮಾಡಿ,5 ವರೆ ಕೋಟಿ ಹಣ ಲಪಟಾಯಿಸೊಕ್ಕೆ ಯತ್ನಿಸಿದ್ದಾರೆ.ಇದಕ್ಕೆ ಪ್ರಾಜೆಕ್ಟ್ ವಿಭಾಗದ ಎಕ್ಸಿಕ್ಯೂಟಿವ್ ಎಂಜಿನಿಯರ್ ಮಹಾಂತೇಶ್ ಭುರ್ನಾಪುರ ಸಾಥ್ ಕೊಟ್ಟಿದ್ದಾರೆ ಎಂದು ವಿವರಿಸಿದ್ದರು.

ಕೇವಲ ನನ್ನ ಒಬ್ಬನನ್ನೇ ಅಲ್ಲ, ಬಿಬಿಎಂಪಿಯ ಸಾಕಷ್ಟು ಅಧಿಕಾರಿಗಳನ್ನು ರಮೇಶ್ ಹೆದರಿಸುತ್ತಿದ್ದಾರೆ ಎಂದು ಪ್ರಹ್ಲಾದ್ ಕೋರ್ಟ್ ಗೆ ವಿವರಣೆ ನೀಡಿದ್ದರಂತೆ.ಇದರ ಜತೆಗೆ 2015 ರಲ್ಲಿ ಸರ್ಫರಾಜ್ ಖಾನ್ ತನ್ನನ್ನು ಹೆದರಿಸಿ ದ್ದಕ್ಕೆ ರಮೇಶ್ ವಿರುದ್ದ ದೂರು ನೀಡಿದ್ರು. ಎಫ್ ಐ ಆರ್ ಕೂಡ ದಾಖಲಾಗಿತ್ತು.ಆದ್ರೆ ಈವರೆಗೂ ಅದರ ಬಗ್ಗೆ ಯಾವುದೇ ಕ್ರಮಗಳಾಗಿಲ್ಲ ಎನ್ನುವುದನ್ನು ಕೋರ್ಟ್ ಗಮನಕ್ಕೆ ತಂದಿದ್ರಂತೆ. ಇದೆಲ್ಲವನ್ನು ಪರಿಶೀಲಿಸಿದ ಮುಖ್ಯ ನ್ಯಾಯಮೂರ್ತಿಗಳು ಎನ್ ಆರ್ ರಮೇಶ್ ವರ್ತನೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಲ್ಲದೇ ಕ್ರಮಕೈಗೊಳ್ಳದ ಅಮೃತಹಳ್ಳಿ ಪೊಲೀಸರ ಕಾರ್ಯವೈಖರಿಗೂ ಬೇಸರ ವ್ಯಕ್ತಪಡಿಸಿದರೆನ್ನುವುದು ಪ್ರಹ್ಲಾದ್ ಅವರ ವಾದ.

ಎನ್ ಆರ್ ರಮೇಶ್ ಹೇಳೋದೇನು..? ಪ್ರಹ್ಲಾದ್ ಅವರ ಆರೋಪಗಳನ್ನು ಸಾರಾಸಗಟಾಗಿ ತಳ್ಳಿ ಹಾಕುವ ಎನ್ ಆರ್ ರಮೇಶ್ ತನ್ನ ಅಕ್ರಮ ಮುಚ್ಚಿಕೊಳ್ಳೊಕ್ಕೆ ಪ್ರಹ್ಲಾದ್ ಸುಳ್ಳು ಮಾಹಿತಿ ನೀಡಿರಬಹುದು.ಪ್ರಹ್ಲಾದ್ ಯಾರು..? ಅದರ ಯೋಗ್ಯತೆ ಏನು..? ಅವರ ವಿರುದ್ದ ಕೇಳಿಬಂದ ಅಕ್ರಮಗಳ ಬಗ್ಗೆ ಬಿಬಿಎಂಪಿ ಕ್ಯಾಂಪಸ್ಸೇ ಮಾತ್ನಾಡುತ್ತದೆ.ನಾನು ಅವರ ಬಗ್ಗೆ ಕೇಳಿಬಂದ ಅಕ್ರಮಗಳ ವಿರುದ್ಧ ಹೋರಾಟ ಮಾಡುತ್ತಾ ಬಂದಿದ್ದೇನೆ.ಇದನ್ನ ಸಹಿಸಿಕೊಳ್ಳಲಿಕ್ಕಾಗದೆ ಇಂತದ್ದೊಂದು ಆರೋಪ ಮಾಡುತ್ತಿದ್ದಾರೆ.ಕೋರ್ಟ್ ಗೂ ಪ್ರಹ್ಲಾದ್ ಅಕ್ರಮಗಳ ಪಿನ್ ಟು ಪಿನ್ ಮಾಹಿತಿ ಕೊಟ್ಟು ಮನವರಿಕೆ ಮಾಡಿಕೊಟ್ಟಿದ್ದೇವೆ.

ಕೋರ್ಟ್ ನಿಂದ ಅಮೃತಹಳ್ಳಿ ಪೊಲೀಸರಿಗೆ ವಿವರಣೆ ಕೇಳಿರುವುದು ನನ್ನ ಗಮನಕ್ಕೂ ಬಂದಿದೆ.ಆದ್ರೆ ಪ್ರಹ್ಲಾದ್ ಬಿಂಬಿಸುವಂತೆ ಏನೂ ಆಗಿಲ್ಲ..ಪ್ರಹ್ಲಾದ್ ವಿರುದ್ಧದ ನನ್ನ ಕಾನೂನಾತ್ಮಕ ಹೋರಾಟ ಯಾವುದೇ ಕಾರಣಕ್ಕೂ ನಿಲ್ಲೊಲ್ಲ. ಮುಂದುವರೆಯುತ್ತೆ..ರಾಜಕೀಯವಾಗಿ ಹೆಸರನ್ನು ಹಾಳು ಮಾಡಿಕೊಂಡವನಲ್ಲ..ಹೆದರಿಸಿ-ಬೆದರಿಸಿ ದುಡ್ಡು ಮಾಡುವ ಅಗತ್ಯವೂ ನನಗಿಲ್ಲ..ಅನೇಕ ವರ್ಷಗಳಿಂದ ಕೈಯನ್ನು ಕೊಳಕಾಗದಂತೆ ಪರಿಶುದ್ಧವಾಗಿಟ್ಟುಕೊಂಡು ಬಂದಿದ್ದೇನೆ ಎನ್ನುವ ಮೂಲಕ ಪ್ರಹ್ಲಾದ್ ವಿರುದ್ಧ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ಸೂಚನೆ ಕೊಡ್ತಾರೆ.

ಪ್ರಹ್ಲಾದ್ ಹಾಗೂ ರಮೇಶ್ ನಡುವಿನ ಈ ಕಾನೂನಾತ್ಮಕ ಸಮರ ಇನ್ನೆಷ್ಟು ತಿರುವು ಪಡೆದುಕೊಳ್ಳುತ್ತೋ..ಯಾರು ಯಾರ ಬಂಡವಾಳವನ್ನು ಬಯಲು ಮಾಡ್ತಾರೋ..ಮುಖವಾಡವನ್ನು ಕಳಚುತ್ತಾರೋ ಗೊತ್ತಿಲ್ಲ..ಆದ್ರೆ ಅವರಿಬ್ಬರ ನಡುವಿನ ಈ ಸಂಘರ್ಷ ಅನೇಕ ಕಾರಣಗಳಿಂದ ಕುತೂಹಲ ಮೂಡಿಸಿರುವುದಂತೂ ಸ್ಪಷ್ಟ.

Spread the love

Related Articles

Leave a Reply

Your email address will not be published.

Back to top button
Flash News