CORONA VIRUSlock downMoreScrollTop NewsUncategorizedರಾಜ್ಯ-ರಾಜಧಾನಿ

ಆನ್​ಲೈನ್ ಮೂಲಕ ಸಿಇಟಿ ಪರೀಕ್ಷೆಗೆ ಅರ್ಜಿ; ಅಪ್ಲೈ ಹೇಗ್ ಮಾಡೋದು?

ಬೆಂಗಳೂರು: ವೃತ್ತಿಪರ ಕೋರ್ಸ್ ಗಳ ಆಯ್ಕೆಗಾಗಿ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) 2021ಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಸಾಮಾನ್ಯ ಪ್ರವೇಶ ಪರೀಕ್ಷೆ- 2021 ಬರೆಯಲು ಅರ್ಹ ವಿದ್ಯಾರ್ಥಿಗಳು ಆನ್​ಲೈನ್  ಮೂಲಕ ಅರ್ಜಿ ಸಲ್ಲಿಸುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸುತ್ತೋಲೆ ಹೊರಡಿಸಿದೆ. ಸರ್ಕಾರದ ಆದೇಶದಂತೆ ಇಂಜಿನಿಯರಿಂಗ್, ತಂತ್ರಜ್ಞಾನ, ಯೋಗ, ನ್ಯಾಚುರೋಪತಿ, ಬಿ ಫಾರ್ಮ, 2ನೇ ವರ್ಷದ ಬಿ ಫಾರ್ಮ, ಫಾರ್ಮಾ ಡಿ, ಕೃಷಿ ವಿಜ್ಞಾನ ಕೋರ್ಸ್​ಗಳ ಮತ್ತು ವೆಟರ್ನರಿ ಕೋರ್ಸ್​ಗಳ ಪ್ರವೇಶಕ್ಕಾಗಿ ನಡೆಯುವ ಪರೀಕ್ಷೆಯ ದಿನಾಂಕ ಈಗಾಗಲೇ ನಿಗದಿಯಾಗಿದೆ.

ಸಾಮಾನ್ಯ ಪ್ರವೇಶ ಪರೀಕ್ಷೆ 2021, ಮುಂಬರುವ ಆಗಸ್ಟ್ 28 ಮತ್ತು ಆಗಸ್ಟ್ 29ರಂದು ನಡೆಯಲಿರುವ ಬಗ್ಗೆ ದಿನಾಂಕ ಘೋಷಿಸಲಾಗಿದೆ. ಇದೀಗ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಸಲ್ಲಿಸಲು ಪರೀಕ್ಷಾ ಪ್ರಾಧಿಕಾರ ತಿಳಿಸಿದೆ. ಅರ್ಹ ಅಭ್ಯರ್ಥಿಗಳು ಪ್ರಾಧಿಕಾರದ ವೆಬ್​ಸೈಟ್​ನಲ್ಲಿ ನಿಗದಿತ ಲಿಂಕ್ ಕ್ಲಿಕ್ ಮಾಡಿಕೊಂಡು ಅರ್ಜಿ ಸಲ್ಲಿಸಬಹುದಾಗಿದೆ.

ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ, ಅಭ್ಯರ್ಥಿಯ ಅರ್ಹತೆ, ಶೈಕ್ಷಣಿಕ ಅರ್ಹತೆಗಳನ್ನು ಇಲಾಖೆಯ ವೆಬ್​ಸೈಟ್​ನಲ್ಲಿ ನೀಡಲಾಗಿದೆ. ಈ ಎಲ್ಲಾ ವಿವರಗಳನ್ನು ಒಳಗೊಂಡ ‘ಯುಜಿಸಿಇಟಿ- 2021 ಮಾಹಿತಿ ಪುಸ್ತಕ’ ಪ್ರಾಧಿಕಾರದ ವೆಬ್​ಸೈಟ್​ನಲ್ಲಿ ಪ್ರಕಟಿಸಲಾಗಿದೆ. ಅದನ್ನು ಅಭ್ಯರ್ಥಿಗಳು ಡೌನ್​ಲೋಡ್ ಮಾಡಿಕೊಳ್ಳಬಹುದಾಗಿದೆ.

ಆನ್​ಲೈನ್ ಮೂಲಕ ಅರ್ಜಿ ಸಲ್ಲಿಕೆ, ಶುಲ್ಕ ಪಾವತಿ, ವಿಶೇಷ ಪ್ರವರ್ಗಗಳ ಮೂಲ ಪ್ರಮಾಣ ಪತ್ರ ಸಲ್ಲಿಸುವ ವೇಳಾಪಟ್ಟಿ ಇಲ್ಲಿದೆ.

ಸಿಇಟಿ- 2021 ನೋಂದಣಿ ಹಾಗೂ ಆನ್​ಲೈನ್ ಮೂಲಕ ಅರ್ಜಿ ಸಲ್ಲಿಕೆ :     ದಿನಾಂಕ 15-06-2021 ರ ಮಧ್ಯಾಹ್ನ 12 ಗಂಟೆಯಿಂದ ದಿನಾಂಕ 10-07-2021ರ ಸಂಜೆ 5.30ರ ವರೆಗೆ.

ಆನ್​ಲೈನ್ ಮೂಲಕ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 13-07-2021

ವಿಶೇಷ ಪ್ರವರ್ಗಗಳ ಮೂಲ ಪ್ರಮಾಣ ಪತ್ರಗಳನ್ನು ನಿಗದಿತ ದಿನಾಂಕದಂದು ಸಲ್ಲಿಸುವುದು (ವೆಬ್​ಸೈಟ್​ನ ಇ-ಮಾಹಿತಿ ಪುಸ್ತಕದಲ್ಲಿ ನೀಡಿರುವ ವೇಳಾಪಟ್ಟಿಯಂತೆ : 14-07-2021 ರಿಂದ 20-07-2021

ಆನ್​ಲೈನ್ ಮೂಲಕ ಸಲ್ಲಿಸಿದ ಅರ್ಜಿಯ ಮಾಹಿತಿಗಳನ್ನು ಅವಶ್ಯವಿದ್ದಲ್ಲಿ ತಿದ್ದುಪಡಿ ಮಾಡಿಕೊಳ್ಳುವುದು: ದಿನಾಂಕ 19-07-2021 ಬೆಳಗ್ಗೆ 11 ರಿಂದ 22-07-2021ರ ಸಂಜೆ 5.30ರ ವರೆಗೆ

ಸಿಇಟಿ-2021 ಪ್ರವೇಶ ಪತ್ರಗಳನ್ನು ಡೌನ್​ಲೋಡ್ ಮಾಡಿಕೊಳ್ಳುವುದು: 13-08-2021 ಬೆಳಗ್ಗೆ 11 ರಿಂದ

Spread the love

Related Articles

Leave a Reply

Your email address will not be published.

Back to top button
Flash News