MoreScrollTop NewsUncategorizedಕ್ರೈಮ್ /ಕೋರ್ಟ್ಸಿನೆಮಾ ಹಂಗಾಮ

‘ರಾಬರ್ಟ್’ ಚಿತ್ರದ ನಿರ್ಮಾಪಕ ಉಮಾಪತಿಯನ್ನು ಕೊಲೆ ಮಾಡಲು ಯತ್ನಿಸಿದ್ದ ರೌಡಿ ಶೀಟರ್ ರಾಜೀವ್ ಅಲಿಯಾಸ್ ಕರಿಯ ಅರೆಸ್ಟ್..!

ಚಾಲೆಂಜಿಂಗ್ ಸ್ಟಾರ್ ದರ್ಶನ್​ ನಟನೆಯ ರಾಬರ್ಟ್​ ಸಿನಿಮಾಗೆ ಬಂಡವಾಳ ಹೂಡಿದ್ದ ನಿರ್ಮಾಪಕ ಉಮಾಪತಿ ಶ್ರೀನಿವಾಸ್​ ಗೌಡ ಅವರಿಗೆ ಕೊಲೆ ಬೆದರಿಕೆ ಹಾಕಲಾಗಿತ್ತು. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಾಚರಣೆ ನಡೆಸಿರುವ ಪೊಲೀಸರು ಕೆ.ಜೆ ನಗರ ಠಾಣೆಯ ರೌಡಿ ಶೀಟರ್, ಬಾಂಬೆ ರವಿ ಸಹಚರನಾದ ರಾಜೇಶ್​ ಅಲಿಯಾಸ್​ ಕರಿಯ ರಾಜೇಶ್​ನನ್ನು ಬಂಧಿಸಿದ್ದಾರೆ. ಬಾಂಬೆ ರವಿ ತಂಡಕ್ಕೆ ಸೇರಿದವನಾಗಿದ್ದ ಈತ ನೇಪಾಳದಲ್ಲಿ ತಲೆ ಮರೆಸಿಕೊಂಡಿದ್ದ. ಆದರೆ ಈಗ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಕಳೆದ ವರ್ಷ ಉಮಾಪತಿ ಶ್ರೀನಿವಾಸ್​ ಗೌಡ ಮತ್ತು ಅವರ ಸಹೋದರ ದೀಪಕ್​ ಅವರ ಹತ್ಯೆಗೆ ಸಂಚುರೂಪಿಸಲಾಗಿತ್ತು. ಅಲ್ಲದೆ, ಕೊಲೆ ಬೆದರಿಕೆ ಹಾಕಿದ್ದರು. ವ್ಯವಸ್ಥಿತವಾಗಿ ಸಂಚು ರೂಪಿಸಿ ದರೋಡೆ ಮುಂತಾದ ಭೂಗತ ಚಟುವಟಿಕೆಗಳನ್ನು ನಡೆಸಲು ಬಾಂಬೆ ರವಿ ಮತ್ತು ಆತನ ಸಹಚರರು ಪ್ಲ್ಯಾನ್​ ರೂಪಿಸಿದ್ದರು. ಬೆಂಗಳೂರಿನಿಂದ ಹೊರಗೆ ಇದ್ದುಕೊಂಡು, ನಗರದಲ್ಲಿನ ಹಣವಂತರಿಗೆ ಧಮ್ಕಿ ಹಾಕುತಿದ್ದ ಈ ಗ್ಯಾಂಗ್​ನ ಹಲವರನ್ನು ಈ ಮೊದಲೇ ವಶಕ್ಕೆ ಪಡೆಯಲಾಗಿತ್ತು.

ಘಟನೆ ಕುರಿತಂತೆ ಜಯನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿಂದೆ ಹನ್ನೊಂದು ಜನರನ್ನು ಪೊಲೀಸರು ಅರೆಸ್ಟ್ ಮಾಡಿದ್ದರು. ಬಳಿಕ ಎರಡು ತಿಂಗಳಿಗೂ ಹೆಚ್ಚು ಕಾಲ ಕಾರ್ಯಚರಣೆ ನಡೆಸಿದ್ದ ದಕ್ಷಿಣ ವಿಭಾಗದ ಪೊಲೀಸರು ಈಗ ರಾಜೇಶ್​ ಅಲಿಯಾಸ್​ ಕರಿಯ ರಾಜೇಶ್​ನ್ನು ಬಂಧಿಸಿದ್ದಾರೆ. ಅಲ್ಲದೇ ಇಟ್ಟಮಡು ಡಬಲ್ ಮರ್ಡರ್ ಕೇಸ್ ನಲ್ಲೂ ಈತ ಆರೋಪಿಯಾಗಿದ್ದ. ಈ ಹಿಂದೆ ಕೊಲೆಯಾದ ಹಳೆ ರೌಡಿ ಪರಂದಾಮಯ್ಯನ ಜೊತೆ ಇರುತ್ತಿದ್ದ ಕರಿಯ ರಾಜೇಶ್​ನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗುತ್ತಿದೆ.

 

ಚಾಲೆಂಜಿಂಗ್​ ಸ್ಟಾರ್​’ ದರ್ಶನ್ ‘ರಾಬರ್ಟ್​’ ಚಿತ್ರವನ್ನು ನಿರ್ಮಾಣ ಮಾಡಿರುವ ಉಮಾಪತಿ ಶ್ರೀನಿವಾಸ್​ ಗೌಡ ಅವರು ಈ ಚಿತ್ರದಿಂದ ಗೆಲುವು ಪಡೆದುಕೊಂಡಿದ್ದಾರೆ. ಲಾಕ್​ಡೌನ್​ ಸಡಿಲಿಕೆ ಬಳಿಕ ಬಿಡುಗಡೆಯಾದ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಕಲೆಕ್ಷನ್​ ಮಾಡಿತು. ನೂರು ಕೋಟಿಗೂ ಹೆಚ್ಚು ಗಳಿಕೆ ಮಾಡಿದ್ದು ರಾಬರ್ಟ್​ ಸಿನಿಮಾದ ಹೆಚ್ಚುಗಾರಿಕೆ. ಈಗ ಶ್ರೀಮುರಳಿ ನಟನೆಯ ‘ಮದಗಜ’ ಚಿತ್ರಕ್ಕೆ ಉಮಾಪತಿ ಶ್ರೀನಿವಾಸ್​ ಗೌಡ ಅವರು ಬಂಡವಾಳ ಹೂಡುತ್ತಿದ್ದಾರೆ.

Spread the love

Related Articles

Leave a Reply

Your email address will not be published.

Back to top button
Flash News