lock downMoreScrollUncategorizedಫೋಟೋ ಗ್ಯಾಲರಿಬೆಡಗು-ಬಿನ್ನಾಣವಿಚಿತ್ರ-ವಿಶೇಷಸಿನೆಮಾ ಹಂಗಾಮ

ಮಣ್ಣಿನಲ್ಲಿ ಮಿಂದೆದ್ದ ದರ್ಶನ್ ಸಿನಿಮಾ ನಟಿ.. ಫೋಟೋ ವೈರಲ್..

ಕೆಲವು ವಿಧದ ಮಣ್ಣನ್ನು ಬಳಕೆ ಮಾಡಿಕೊಂಡು ಸ್ನಾನ ಮಾಡಿದರೆ ಆರೋಗ್ಯಕ್ಕೆ ಒಳ್ಳೆಯದು ಎಂಬುದು  ಅನೇಕರ ನಂಬಿಕೆ. ಈ ಬಗ್ಗೆ ಆಯುರ್ವೇದದಲ್ಲೂ ಕೂಡ ಹೇಳಲಾಗಿದೆ. ಇದೇ ಕಾರಣಕ್ಕೆ ಅನೇಕರು ಮಣ್ಣಿನ ಥೆರೆಪಿಗೆ ಒಳಗಾಗುತ್ತಾರೆ. ಇದನ್ನು ದರ್ಶನ್​ ನಟನೆಯ ‘ಮಿಸ್ಟರ್​ ಐರಾವತ’ ಚಿತ್ರದ ನಟಿ ಊರ್ವಶಿ ರೌಟೆಲ್ಲಾ ಕೂಡ ನಂಬಿದ್ದಾರೆ. ಅವರು ಈಗ ಮಣ್ಣಿನಿಂದ ಸ್ನಾನ ಮಾಡಿದ ಫೋಟೋ ವೈರಲ್​ ಆಗಿದೆ.

ಮಣ್ಣಿನ ಸ್ನಾನದಿಂದ ದೇಹದಲ್ಲಿರುವ ಕಲ್ಮಶಗಳೂ ನಾಶವಾಗುತ್ತವೆ. ಚರ್ಮವನ್ನು ಮೃದುಗೊಳ್ಳುತ್ತದೆ, ರಕ್ತ ಸಂಚಾರ ಸುಧಾರಿಸುತ್ತದೆ ಮತ್ತು ನೋವು ನಿವಾರಕವಾಗಿ ಇದು ಕೆಲಸ ಮಾಡುತ್ತದೆ ಎಂದು ಬರೆದುಕೊಂಡು ಮಣ್ಣಿನ ಸ್ನಾನ ಮಾಡಿರುವ ಫೋಟೋವನ್ನು ಊರ್ವಶಿ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ನಟಿಮಣಿಯರು ಚರ್ಮದ ಆರೋಗ್ಯ ಕಾಪಾಡಿಕೊಳ್ಳೋಕೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಾರೆ. ಹೀಗಾಗಿ, ಧೂಳು, ಬಿಸಿಲಿಗೆ ದೇಹ ತಾಗದಂತೆ ನೋಡಿಕೊಳ್ಳುತ್ತಾರೆ. ಆದರೆ, ಊರ್ವಶಿ ಮಣ್ಣಿನಲ್ಲೇ ಸ್ನಾನ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಊರ್ವಶಿ ಲಾಕ್‍ಡೌನ್ ವೇಳೆ ಫಿಟ್ನೆಸ್ ಕಾಯ್ದುಕೊಳ್ಳೋಕೆ ಏನೆಲ್ಲ ಮಾಡಬೇಕು ಎನ್ನುವುದನ್ನು ಅಭಿಮಾನಿಗಳಿಗೆ ಟಿಪ್ಸ್ ನೀಡುತ್ತಿದ್ದರು.

2013ರಲ್ಲಿ ತೆರೆಗೆ ಬಂದ ಹಿಂದಿಯ ‘ಸಿಂಗ್​ ಸಾಬ್​ ದಿ ಗ್ರೇಟ್’​ ಚಿತ್ರದಲ್ಲಿ ಊರ್ವಶಿ ನಟಿಸಿದ್ದರು. ಇದಾದ ನಂತರ 2015ರಲ್ಲಿ ತೆರೆಗೆ ಬಂದ ಕನ್ನಡದ ಮಿಸ್ಟರ್​. ಐರಾವತ ಚಿತ್ರದಲ್ಲಿ ದರ್ಶನ್​ಗೆ ಜತೆಯಾಗಿ ನಟಿಸಿದರು. ಎ.ಪಿ. ಅರ್ಜುನ್​ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ನಂತರ ಅವರು ಕನ್ನಡಕ್ಕೆ ಮರಳಲೇ ಇಲ್ಲ. ಸದ್ಯ, ‘ಬ್ಲ್ಯಾಕ್​ ರೋಸ್​’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದು ಹಿಂದಿ, ತೆಲುಗು ಎರಡೂ ಭಾಷೆಯಲ್ಲಿ ತೆರೆಗೆ ಬರುತ್ತಿದೆ. ಹಿಂದಿ ಮತ್ತು ತಮಿಳಲ್ಲಿ ಒಟ್ಟಿಗೆ ಸಿದ್ಧವಾಗುತ್ತಿರುವ ಚಿತ್ರದಲ್ಲೂ ಊರ್ವಶಿ ನಟಿಸುತ್ತಿದ್ದಾರೆ.

Spread the love

Related Articles

Leave a Reply

Your email address will not be published.

Back to top button
Flash News