CORONA VIRUSMoreScrollTop NewsUncategorizedರಾಜಕೀಯರಾಜ್ಯ-ರಾಜಧಾನಿ

ಇನ್ನೊಂದು ವಾರದಲ್ಲಿ ಶಾಸಕ ಮುನಿರತ್ನ ಸಚಿವರಾಗ್ತಾರೆ.. ಭವಿಷ್ಯ ನುಡಿದ ಸಚಿವ ವಿ.ಸೋಮಣ್ಣ..!

ಬೆಂಗಳೂರು: ಇನ್ನೊಂದು ವಾರದಲ್ಲಿ ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಅವರು ಸಚಿವರಾಗಲಿದ್ದಾರೆ ಎಂದು ಸಚಿವ ವಿ. ಸೋಮಣ್ಣ ಭವಿಷ್ಯ ನುಡಿದಿದ್ದಾರೆ. ಪಕ್ಷಾತೀತವಾಗಿ, ಜಾತ್ಯತೀತವಾಗಿ ಒಳ್ಳೆಯ ಕೆಲಸ ಮಾಡಬೇಕಿದೆ. ರಾಜ್ಯದಲ್ಲಿ ಸುಭಿಕ್ಷ ಸರ್ಕಾರ ಬರಬೇಕು. ಒಳ್ಳೆ ಕೆಲಸ ಆಗಬೇಕಾದರೆ ಮುನಿರತ್ನರಂತಹ ಶಾಸಕರು ಬರಬೇಕಿದೆ ಎಂದು ಅವರು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಫುಡ್ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದರು.

ಗೋವಿಂದರಾಜನಗರದ ಬಿಜಿಎಸ್​ ಕ್ರೀಡಾಂಗಣದಲ್ಲಿ ಕೊವಿಡ್ ಫ್ರಂಟ್​ಲೈನ್ ವಾರಿಯರ್ಸ್, ಆಶಾ ಕಾರ್ಯಕರ್ತೆಯರು ಸೇರಿದಂತೆ 500ಕ್ಕೂ ಹೆಚ್ಚು ಜನರಿಗೆ ಕಿಟ್ ವಿತರಿಸಿ ಅವರು ಈ ಘೋಷಣೆ ಮಾಡಿದರು. ಇಂತಹ ಕೊರೊನಾ ಟೈಮ್​​ನಲ್ಲಿ ಜನರು ಮೈಮರೆಯಬಾರದು. ಆದರೆ ನಮ್ಮ ಜನರು ಮೂರೇ ದಿನಕ್ಕೆ ಮೈಮರೆಯುತ್ತಿದ್ದಾರೆ. ದಯವಿಟ್ಟು ಆ ರೀತಿ ಮಾಡಬೇಡಿ. ಎಲ್ಲರೂ ಎಚ್ಚರಿಕೆಯಿಂದ ಇರಬೇಕು, ಲಸಿಕೆ ಹಾಕಿಸಿಕೊಳ್ಳಿ. ಕಡ್ಡಾಯ ಮಾಸ್ಕ್ ಹಾಕಿಕೊಳ್ಳಬೇಕು ಎಂದರು.

ರಾಜ್ಯ ಬಿಜೆಪಿಯಲ್ಲಿನ ಬೆಳವಣಿಗೆ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್​ ಭೇಟಿ ವಿಚಾರವಾಗಿ ನಾನಂತೂ ಒಂದು ಸೆಕೆಂಡ್​ ಅದರ ಬಗ್ಗೆ ಯೋಚಿಸುವುದಿಲ್ಲ. ರಾಜ್ಯ ಬಿಜೆಪಿ ಉಸ್ತುವಾರಿ ಸಹಜವಾಗಿಯೇ ಬರುತ್ತಾರಷ್ಟೇ. ಸಿಎಂ ಯಡಿಯೂರಪ್ಪ ಕೂಡ ಅವರ ಕೆಲಸ ಮಾಡುತ್ತಿದ್ದಾರೆ. ನಾವೆಂತಹ ಸ್ಥಿತಿಯಲ್ಲಿದ್ದೇವೆ ಅನ್ನೋದನ್ನ ಅರಿತುಕೊಳ್ಳಬೇಕು. ಸರ್ಕಾರ ಅಂದ್ರೆ ನಿಂತ ನೀರಲ್ಲಿ ಅದು ಹರಿಯುವ ನೀರಿದ್ದಂತೆ, ಜನಸಾಮಾನ್ಯರ ನೋವು, ಸಂಕಷ್ಟವನ್ನು ನಾವು ಆಲಿಸಬೇಕು. ನಾವೆಲ್ಲರೂ ಒಗ್ಗಟ್ಟಾಗಿ ಕೊರೊನಾ ಸೋಂಕನ್ನು ಓಡಿಸಬೇಕು. ಸಿಎಂ ಬಿಎಸ್​ವೈ ಜತೆ ಸೇರಿ ಉತ್ತಮ ಕೆಲಸ ಮಾಡುತ್ತಿದ್ದೇನೆ ಎಂದು ವಸತಿ ಖಾತೆ ಸಚಿವ ವಿ.ಸೋಮಣ್ಣ ಹೇಳಿದರು.

Spread the love

Related Articles

Leave a Reply

Your email address will not be published.

Back to top button
Flash News